ಆರಿ್ಟ.ಇ. ಎಸ್ ಶಿಕ್ಷಣ ವಿದ್ಯಾಲಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ
ರಾಣೇಬೆನ್ನೂರು 20: ಕಲೆ,ಸಾಹಿತ್ಯ, ಸಂಗೀತ ಇವುಗಳ ಮೂಲಕ ವಿದ್ಯಾರ್ಥಿಗಳ ಬದುಕು ಸಂಸ್ಕೃತಿಯಿಂದ ಕೂಡಿರಬೇಕು ಅದಕ್ಕೆ ನಮ್ಮ ಜನಪದ ಕಲೆ ಮತ್ತು ಕಲಾವಿದರು ಇತಿಹಾಸದಿಂದಲೂ ಸಾಕ್ಷಿಯಾಗಿದ್ದಾರೆ ಎಂದು ರಾ. ತಾ. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುಭಾಶ ವ್ಹಿ. ಸಾಹುಕಾರ ಹೇಳಿದರು ಅವರು, ಗುರುವಾರ ಕಾಲೇಜಿನ ವ್ಹಿ.ಕೆ. ಸಾಹುಕಾರ ಸಭಾ ಭವನದಲ್ಲಿ ಅನುರಾಗ ಸಂಗೀತ ಮಹಿಳಾ ಕಲಾ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ, ಸಾಂಸ್ಕೃತಿಕ ಕಾರ್ಯಕ್ರಮಗಳು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳ, ಶಿಕ್ಷಣ ಮತ್ತು ಸಂಸ್ಕೃತಿ ಸಾಂಸ್ಕೃತಿಕವಾಗಿ ಬೆಳೆಯಬೇಕು ಎನ್ನುವ ಸದುದ್ದೇಶವು ತಮ್ಮ ಶಿಕ್ಷಣ ಸಂಸ್ಥೆ ಹೊಂದಿದೆ ಆ ನಿಟ್ಟಿನಲ್ಲಿ ಶೈಕ್ಷಣಿಕ ವರ್ಷದ್ದುದ್ದಕ್ಕೂ ಇಂತಹ ಕಾರ್ಯಕ್ರಮಗಳ ಮೂಲಕ ವ್ಯಕ್ತಿತ್ವ ವಿಕಾಶತೆಗೆ ಅವಕಾಶವನ್ನು ಕಲ್ಪಿಸಲಾಗುತ್ತದೆ, ಇದರ ಪ್ರಯೋಜನ ಪಡೆಯಲು ವಿದ್ಯಾರ್ಥಿನಿಯರು ಮುಂದಾಗಬೇಕು ಎಂದರು. ಮುಖ್ಯ ಅತಿಥಿಯಾಗಿದ್ದ, ಜಾನಪದ ವಿದ್ವಾಂಸ ಡಾ,ಕೆಸಿ.ನಾಗರಜ್ಜಿ ಅವರು, ಆಧುನಿಕ ಸಂಸ್ಕೃತಿಯ ಭರಾಟೆಯಲ್ಲಿ ಇಂದಿನ ವಿದ್ಯಾರ್ಥಿಗಳು ಮುಳುಗಿ ಹೋಗಿದ್ದಾರೆ. ನೈಜತೆ ಪ್ರತಿ ಬಿಂಬಿತ, ನೆಲ ಸಂಸ್ಕೃತಿಯ ತಾಯಿ ಬೇರಾದ ಜನಪದ ಸಾಹಿತ್ಯ, ಸಂಗೀತ ಮರೆಯಾಗುತ್ತಿರುವುದು ಅತ್ಯಂತ ವಿಷಾಧಕರ ಸಂಗತಿ. ಸಂಸ್ಕೃತಿ ಸಂಸ್ಕಾರ ಹುಟ್ಟಿನಿಂದ ಸಾಯುವವರೆಗೂ ಅದು ಗಟ್ಟಿ ಬೇರು. ಕ್ಷಣಿಕ ಸುಖಕ್ಕೆ ಮಾರು ಹೋಗದೇ,ಭವಿಷ್ಯದ ವಿದ್ಯಾರ್ಥಿಗಳು, ಶಿಕ್ಷಣದ ಜೊತೆಗೆ, ಮಾನಸಿಕ, ದೈಹಿಕ, ಬೌದ್ಧಿಕ, ವಿಕಾಸತೆಗೆ ಅಗತ್ಯವಿರುವ ಜನಪದ ಸಾಹಿತ್ಯ ಸಂಗೀತ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಮಾನಸಿಕ ಶಾಂತಿ ಮತ್ತು ನೆಮ್ಮದಿ ಹೊಂದಲು ಸಾಧ್ಯವಾಗುವುದು ಎಂದು ವಿದ್ಯಾರ್ಥಿ ಸಮುದಾಯಕ್ಕೆ ಕರೆ ನೀಡಿದರು. ಅನುರಾಗ ಸಂಗೀತ ಸಂಸ್ಥೆಯ ಅಧ್ಯಕ್ಷ ಶ್ರೀಮತಿ ಯಶೋಧ ಜಿ. ಅವರು ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಪ್ರಾಂಶುಪಾಲ ಡಾ,ಕೊಟ್ರೇಶ ಬಸಾಪುರ ಅವರು, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ದೇಶಿಯ ಸಂಸ್ಕೃತಿ ಕುರಿತು ಮಾತನಾಡಿದರು.ನಂತರ ಆರಿ್ಟ. ಇ.ಎಸ್. ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗಾಗಿ ನಡೆದ ಗಣೇಶ್ ಗುಡಿಗುಡಿ ಸಂಗಡಿಗರ ಸುಗಮ ಸಂಗೀತ - ಮರಿಯಪ್ಪ ಹನುಮಪ್ಪ ಕೊಟ್ರ್ಪನವರ ಸಂಗಡಿಗರ ಜಾನಪದ ಸಂಗೀತ,ಸಾಂಸ್ಕೃತಿಕ ಕಾರ್ಯಕ್ರಮವು ವಿದ್ಯಾರ್ಥಿಗಳ ಗಮನ ಸೆಳೆದವು.ಶ್ವೇತಾ ಚಕ್ರಸಾಲಿ ಪ್ರಾರ್ಥಿಸಿದರು. ಅರುಣಕುಮಾರ ಕಲ್ಮಠ ಸ್ವಾಗಸಿದರು. ಪ್ರಿಯಾ ಪುಟ್ಟನಗೌಡ್ರು ನಿರೂಪಿಸಿ, ಪ್ರವೀಣ್ ಬನ್ನಿಮಟ್ಟಿ ವಂದಿಸಿದರು