ಲೋಕದರ್ಶನ ವರದಿ
ಬೆಳಗಾವಿ 23: ಸಾಂಸ್ಕೃತಿಕ ಮನಸ್ಸುಗಳು ಸಂಸ್ಕಾರ ಮತ್ತು ಸಾತ್ವಿಕವಾಗಿರುತ್ತವೆ. ನಮ್ಮ ಪೂರ್ವಜರು ಹಾಕಿಕೊಟ್ಟತಮ್ಮ ಅಪಾರ ಜೀವನಾನುಭವ, ಸದಾಚಾರ, ಕಲಾರಾಧನೆ, ನಿಸರ್ಗ ಪ್ರೀತಿಎಲ್ಲವೂ ಸಂಸ್ಕೃತಿಯ ವಿಕಾಸಕ್ಕೆ ಬುನಾದಿಗಳಾಗುತ್ತವೆ. ನಾಡಿನ ಮತ್ತುರಾಷ್ಟ್ರದ ಸಂಪತ್ತು, ವಿಜ್ಞಾನ ಮತ್ತುಆಥರ್ಿಕ ಪ್ರಗತಿ ಅಷ್ಟೇ ಅಲ್ಲ, ಅಲ್ಲಿಯ ಕಲೆ ಸಂಸ್ಕೃತಿಯ ಸಿರಿತನ ನಿಜವಾದ ಆಸ್ತಿಯಾಗುತ್ತದೆ. ಮಕ್ಕಳನ್ನು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲಗೊಳಿಸುವದು ಅಗತ್ಯವಾದುದು. ಯಾವದೆ ವೃತ್ತಿಗೆ ಒಳ್ಳೆಯ ಪ್ರವೃತ್ತಿ ಚೈತನ್ಯದಾಯಕವಾಗುತ್ತದೆ ಎಂದು ಬೆಳಗಾವಿಯ ಸಾಹಿತಿ ಶಿವಯೋಗಿ ಕುಸುಗಲ್ಲ ತಿಳಿಸಿದರು.
'ಶ್ರೀ ರಾಮಾಂಜನೇಯ ಸಾಂಸ್ಕೃತಿಕ ಹಾಗೂ ಯುವಕಲಾವೃಂದ' ಮತ್ತು'ಕಲಾ ಬಂಧು ಫೌಂಡೇಷನ್ ಸಹಯೋಗದೊಂದಿಗೆ ಬೆಂಗಳೂರಿನ ಗಾಂಧಿ ಭವನದಲ್ಲಿ ದಿನಾಂಕ 20 ರಂದು ಏರ್ಪಡಿಸಿದ 'ಸಾಂಸ್ಕೃತಿಕ ಸಂಭ್ರಮ-2019'ಕಾರ್ಯಕ್ರಮವನ್ನು ಉದ್ಘಾಟಿಸಿ ಕುಸುಗಲ್ಲ ಇವರು ಮಾತನಾಡಿದರು. ಹಿರಿಯ ಪತ್ರಕರ್ತರಾದಡಿ.ಚೆಲುವರಾಜು, ಚಲನಚಿತ್ರ ನಿದರ್ೆಶಕರಾದ ವಿವೇಕ್ಚಕಾರಿ,ಸಾಹಿತಿಗಳಾದ ಹೆಚ್.ಮ್.ಗಣೇಶಾಚಾರ್ ಮತ್ತುಹಿರಿಯರಂಗಕಮರ್ಿಸಿದಗಂಗಯ್ಯ ಅತಿಥಿಗಳಾಗಿ ಆಗಮಿಸಿದ್ದರು.ಕಲಾ ಬಂಧು ಫೌಂಡೇಷನ್ಇದರಅಧ್ಯಕ್ಷ್ಯರಾದ ನರಸಿಂಹರಾಜು ಹೆಚ್ಇವರು ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನು ಸ್ವಾಗತಿಸಿದರು.