ಸಾಂಸ್ಕೃತಿಕ ಪರಂಪರೆಯು ವಾರಸುದಾರಿಕೆಯನ್ನು ಉಳಿಸಿ ಹೋಗುವುದು ಸಂಸ್ಕೃತಿಯ ಪ್ರತೀಕ
ವಿಜಯಪುರ, 01: ಹಿರಿಯರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಾವು ನೀವು ನಡೆಯುವದರಿಂದ ಮತ್ತು ಅಜ್ಜಿ ಮುತ್ತಜ್ಜನಿಂದ ವಂಶಪಾರಂಪರಗತವಾಗಿ ಬಂದಿರುವ ಒಳ್ಳೆಯ ಗುಣಗಳೇ ಮೌಲ್ಯಗಳಾಗಿ ಪರಿಣಮಿಸುತ್ತವೆಂದು ಪ್ರಾ. ಎ.ಎಸ್.ಹಿಪ್ಪರಗಿ ಪ್ರತಿಷ್ಠಾನ ಮತ್ತು ಬಿಡಿಈ ಸೊಸಾಯಿಟಿ ಪ.ಪೂ. ಕಾಲೇಜ ಸಹಯೋಗದಲ್ಲಿ ನಡೆದ ವಾರ್ಷಿಕೋತ್ಸವ ಮತ್ತು ಸನ್ಮಾನ ಕಾರ‌್ಯಕ್ರಮದಲ್ಲಿ ನಿವೃತ್ತ ಪ್ರಾಚಾರ್ಯ ಮತ್ತು ಜಾನಪದ ವಿದ್ವಾಂಸ ಪ್ರೊ. ಬಿ.ಆರ್.ಪೋಲಿಸಪಾಟೀಲರು ಸ್ವರಚಿತ ಹಾಡುಗಳನ್ನು ಹಾಡುತ್ತ ಮತ್ತು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ಮಾತೃ, ಪಿತೃ, ಗುರು ಮತ್ತು ದೇಶದ ಋಣವನ್ನು ತೀರಿಸಲು ಮರೆಯಬಾರದು. ಹಿಂದಿನ ರೈತನ ಚಟುವಟಿಕೆಗಳು, ಜಾನಪದ ಕಲೆ, ನೃತ್ಯ, ನಾಟಕಗಳು ಇವುಗಳನ್ನು ಮತ್ತೆ ಮತ್ತೆ ಅನುಷ್ಠಾನಗೊಳಿಸುವದರಿಂದ ನಾಡು, ದೇಶ ಶ್ರೀಮಂತವಾಗುವುದು ಎಂದು ಪ್ರಸ್ತುತ ಪರಿಸ್ಥಿತಿಯನ್ನು ಲಾವಣಿ ಮೂಲಕ ಹಾಡಿ ರಂಜಿಸಿದರು.
ಪ್ರಾ. ಎ.ಎಸ್.ಹಿಪ್ಪರಗಿಯವರು ವಿದ್ವಾಂಸರು, ವಿಮರ್ಶಕರು, ಸರಳವಾಗಿ ಬೋಧನೆ ಮಾಡುವವರು. ಅಂತವರು ಮಾಡಿದ ವಿದ್ಯಾರ್ಜನೆಯಿಂದ ವಿದ್ಯಾರ್ಥಿಗಳು ಈಗಲೂ ನೆನೆಸುತ್ತಾರೆಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಪಿ.ಟಿ.ಕೊಟ್ನಿಸ್ ವಹಿಸಿದ್ದರು. ಸಾಧಕರಾದ ಶಿವಾನಂದ ಜಂಗೀನಮಠ, ಡಾ. ಎಮ್.ಎಸ್.ತಿಮ್ಮಾಪುರ, ಶ್ರೀಮತಿ ಶಶಿಕಲಾ ಕೊಟಗಿಯವರನ್ನು ಮತ್ತು ಅತಿಥಿ, ಅಧ್ಯಕ್ಷರನ್ನು ಸನ್ಮಾನಿಸಲಾಯಿತು. ಡಾ. ಸುಭಾಸ ಕನ್ನೂರ ಕಾರ‌್ಯಕ್ರಮ ನಿರೂಪಿಸಿದರು. ಡಾ. ವಿ.ಡಿ.ಐಹೊಳ್ಳಿ ಸ್ವಾಗತಿಸಿದರು. ಎಸ್.ಎನ್.ಶಿವಣಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಎಸ್.ಬಿ.ದೊಡಮನಿ ಸಾಧಕರನ್ನು ಪರಿಚಯಿಸಿದರು. ಪ್ರೊ. ದಿಕ್ಷಿತ್ ವಂದಿಸಿದರು. ಬಿ.ಕೆ.ಗೋಟ್ಯಾಳ, ಎಸ್.ಜಿ.ನಾಡಗೌಡ, ಜಿ.ಬಿ.ಸಾಲಕ್ಕಿ, ಎ.ಎಸ್.ಕಂಚ್ಯಾಣಿ, ಸುಭಾಸ ಯಾದವಾಡ, ಡಾ. ವಿ.ಎಂ.ಬಾಗಾಯತ, ಡಾ. ಕವಿತಾ ಹಿಪ್ಪರಗಿ, ಶಕುಂತಲಾ ದೊಡಮನಿ, ವಿದ್ಯಾವತಿ ಅಂಕಲಗಿ, ದೊಡ್ಡಣ್ಣ ಬಜಂತ್ರಿ, ಶ್ರೀಮತಿ ಸಲಗರ, ಸಾಂಗಲಿಕರ, ಎಂ.ಬಿ.ಕಟ್ಟಿಮನಿ, ಗಂಗಾಧರ ಯಳಗಂಟಿ ಮುಂತಾದವರು ಉಪಸ್ಥಿತರಿದ್ದರು.