ಸಾಂಸ್ಕೃತಿಕ ಕಾರ್ಯಕ್ರಮಗಳು

ಗದಗ: ಸುವರ್ಣ ಕನರ್ಾಟಕ ಸಂದರ್ಭದಲ್ಲಿ ವಾತರ್ಾ ಇಲಾಖೆ ರೂಪಿಸಿದ್ದ ರಾಷ್ಟ್ರಕವಿ ಕುವೆಂಪು ಅವರ ಬಾರಿಸು ಕನ್ನಡ ಡಿಂಡಮವ ಹಾಡು ರಾಜ್ಯೋತ್ಸವದ ಅಂಗವಾಗಿ ಕೆ.ಎಚ್. ಪಾಟೀಲ ಕ್ರೀಡಾಂಗಣದಲ್ಲಿ ಜರುಗಿದ ಶಾಲಾ ಮಕ್ಕಳ ಸಾಂಸ್ಕೃತಿ ಕಾರ್ಯಕ್ರಮಗಳಲ್ಲಿ ಪದೇ ಪದೇ ಅನುಕರಣಿಸದ್ದು ವಿಶೇಷವಾಗಿತ್ತು. ಲಯನ್ಸ ಪ್ರೌಢಶಾಲಾ ಮಕ್ಕಳು ವೀರಯೋಧ ಹನುಮಂತ ಕೊಪ್ಪದ ಅವರ ಜೀವನವನ್ನು ನೃತ್ಯ ಗೀತೆಯೊಂದಿಗೆ ರೂಪಿಸಿದರು. ಕೆಎಲ್ಇ ಪ್ರೌಢ ಶಾಲೆ ಮಕ್ಕಳು ಸ್ವಚ್ಛ ಭಾರತ ಅಭಿಯಾನ ಕುರಿತ ಕಿರು ನಾಟಕವನ್ನು ಗ್ರಾಮ ಭಾಷೆಯಲ್ಲಿ ಹಾಗೂ ಕೆಚ್.ಪಾಟೀಲ ಪ್ರೌಢ ಶಾಲೆ, ವಿದ್ಯದಾನ ಸಮಿತಿ ಬಾಲಕಿಯರ ಶಾಲಾ ಮಕ್ಕಳು ನಾಡುನುಡಿ ಶ್ರೀಮಂತಿಕೆಯನ್ನು ನೃತ್ಯಗೀತೆಗಳಲ್ಲಿ ಪ್ರದಶರ್ಿಸಿದರು.