ಬೆಳೆ ಸಾಲ ಮನ್ನಾ ಯೋಜನೆ: ನೋಂದಣಿಗೆ ಸರತಿಯಲ್ಲಿ ನಿಲ್ಲದಂತೆ ಕ್ರಮ

ಗದಗ 18:    ರಾಜ್ಯ  ಸಕರ್ಾರದ ಸಾಲ ಮನ್ನಾ ಯೋಜನೆಯಡಿ ಅರ್ಹ ರೈತರು ಸಾಲ ಪಡೆದ ವಾಣಿಜ್ಯ ಬ್ಯಾಂಕ್ ಶಾಖೆಯಲ್ಲಿ ಸೂಚಿತ  ದಾಖಲೆ ಸಲ್ಲಿಸಿ ನೊಂದಾಯಿಸಲು 2019 ರ ಜನೆವರಿ 31 ರವರೆಗೆ ಅವಕಾಶವಿದೆ.  ರೈತರ ಅನುಕೂಲಕ್ಕೆ  ಆಯಾ ಬ್ಯಾಂಕ್ ಶಾಖೆಯಿಂದ  ದಿನ ವೇಳೆ ನಿಗದಿ ಪಡಿಸಿ ಟೋಕನ್ ನೀಡಿ ನೋಂದಣಿಗೆ ಅನುಕೂಲ ಕಲ್ಪಿಸಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ನುಡಿದರು.   ಲಕ್ಷ್ಮೇಶ್ವರದಲ್ಲಿ ಪಹಣಿಗಾಗಿ ರೈತರು ಸರತಿಗಾಗಿ  ಕಾಯುತ್ತಿದ್ದನ್ನು ಜಿಲ್ಲಾಧಿಕಾರಿಗಳು ವೀಕ್ಷಿಸಿದರು.   ತದನಂತರ  ತಾಲೂಕಿನ ಶಿಗ್ಲಿ       ಗ್ರಾಮದಲ್ಲಿನ  ಕೆನರಾ ಬ್ಯಾಂಕ್ ಶಾಖೆ ಹಾಗೂ ಕನರ್ಾಟಕ ಗ್ರಾಮೀಣ ವಿಕಾಸ ಬ್ಯಾಂಕ್ ಶಾಖೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಬ್ಯಾಂಕ್ ಮುಂದೆ ರೈತರ ಸರತಿ ಸಾಲು ಕಂಡು ಅವರನ್ನುದ್ದೇಶಿಸಿ  ಮಾತನಾಡಿ  ಎಲ್ಲಿಯೂ ರೈತರು ಸರತಿ  ಸಾಲಿನಲ್ಲಿ ನಿಲ್ಲುವ ಅವಶ್ಯಕತೆಯಿಲ್ಲ.  ಜಿಲ್ಲೆಯ ಅರ್ಹ ರೈತರು ತಾವು ಸಾಲ ಪಡೆದ ಬ್ಯಾಂಕಿಗೆ ಶಾಖೆಯಿಂದ ಟೋಕನ್ ಪಡೆದು ನಿಗದಿತ ದಿನಾಂಕದಂದು ಬ್ಯಾಂಕಿಗೆ   ಅವಶ್ಯಕ ದಾಖಲೆಗಳೊಂದಿಗೆ  ಬಂದು ಹೆಸರು ನೊಂದಾಯಿಸಬೇಕು.     ಈ ಯೋಜನೆಯಡಿ  ಜಮೀನಿನ    ಪಹಣಿ ಪತ್ರಿಕೆ ನೀಡುವ ಅವಶ್ಯಕತೆ ಇರುವುದಿಲ್ಲ.   ಜಿಲ್ಲಾಡಳಿತ  ಈ ಕುರಿತಂತೆ ನಿಗಾ ವಹಿಸಿದ್ದು ಯಾವುದೇ ಸಮಸ್ಯೆಗಳಿದ್ದರೂ ತಕ್ಷಣ ಅವುಗಳ ನಿವಾರಣೆಗೆ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.    ಗದಗ  ಜಿ.ಪಂ. ಅಧ್ಯಕ್ಷ ಎಸ್.ಪಿ. ಬಳಿಗಾರ,    ತಹಶೀಲ್ದಾರ ಕೋರಿಶೆಟ್ಟರ್, ಕಂದಾಯ ಇಲಾಖೆ ಹಾಗೂ ಬ್ಯಾಂಕ್ ಸಿಬ್ಬಂದಿಗಳು  ಹಾಜರಿದ್ದರು.