ಧರ್ಮ ಜಾಗೃತಿಯಿಂದ ಅಪರಾಧ ಮನೋಭಾವನೆ ಕಡಿಮೆ : ದುಂಡಿಗೌಡ್ರ

Crime attitude reduced due to religious awareness: Dundigowdra

ಧರ್ಮ ಜಾಗೃತಿಯಿಂದ ಅಪರಾಧ ಮನೋಭಾವನೆ ಕಡಿಮೆ : ದುಂಡಿಗೌಡ್ರ  

  ಶಿಗ್ಗಾವಿ 02 :ಕರ್ನಾಟಕದಲ್ಲಿ ಧರ್ಮ ಜಾಗೃತಿ ಮೂಡಿಸುವದರಿಂದ ಅಪರಾಧ ಮನೋಭಾವನೆ ಕಡಿಮೆ ಆಗಿ ಪೂಜ್ಯ ಭಾವನೆ ಬರುತ್ತಿದೆ ಎಂದು ಭಾರತ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಹೇಳಿದರು.   ಪಟ್ಟಣದ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ 3 ನೇ ದಿನದ ಧರ್ಮಸಭೆ ಉದ್ದೇಶಿಸಿ ಮಾತನಾಡಿದ ಅವರು ಭಾರತ ದೇಶ ಅರ್ಥಿಕ ವ್ಯವಸ್ಥೆಯು ವಿಶ್ವದಲ್ಲಿ 5 ನೇ ಸ್ಥಾನದಲ್ಲಿದೆ ನಾವು ಆರ್ಥಿಕ ವ್ಯವಸ್ಥೆ ಜೊತೆಗೆ ಆದ್ಯಾತ್ಮಿಕವಾಗಿ ಮುಂದೆ ಬರಲು ಇಂತಹ ಧರ್ಮಸಭೆ ಕಾರಣ ಎಂದರು. ಸಾಹಿತಿ ಶಿವಾನಂದ ಮ್ಯಾಗೇರಿ ಮಾತನಾಡಿ ಜೀವನ ನಿರ್ವಹಣೆ ಹೇಗೆ ಮಾಡಬೇಕು ಎಂಬುದನ್ನು ಧರ್ಮಸಭೆ ತಿಳಿಸುತ್ತದೆ ಅಲ್ಲದೇ ಭಕ್ತಿಯಿಂದ ಮತ್ತು ಶ್ರದ್ಧೆಯಿಂದ ಮಾತ್ರ ಎಲ್ಲವನ್ನೂ ಪಡೆಯಬಹುದು ಎಂಬುದಕ್ಕೆ ಧರ್ಮಸಭೆ ಸಾಕ್ಷಿ ಎಂದರು.   

ಕೇದಾರ​‍್ಪ ಬಗಾಡೆ ಮಾತನಾಡಿ ದುಡ್ಡಿನಿಂದ ಶ್ರೀಮಂತರಾಗದೇ ಮನಸ್ಸಿನಿಂದ ಶ್ರೀಮಂತರಾಗೋಣ  ಅಂದಾಗ ಧರ್ಮಸಭೆಗೆ ಅರ್ಥ ಬರುತ್ತದೆ ಎಂದರು.ಮಲ್ಲಿಕಾರ್ಜುನ ಹಡಪದ ಮಾತನಾಡಿ ದೈವ ಶಕ್ತಿ ಇದ್ದಾಗ ದುಷ್ಟ ಶಕ್ತಿ ನಶಿಸಿ ಹೋಗುತ್ತದೆ ಅಲ್ಲದೇ ತಂದೆ ತಾಯಿಗಳ ಸೇವೆ ಮಾಡುವ ಮೂಲಕ ನಮ್ಮ ಸಂಸ್ಕಾರ ಕಾಪಾಡಬೇಕು ಎಂದರು.   ದಿವ್ಯ ಸಾನಿದ್ಯವಹಿಸಿ ಬಂಕಾಪೂರ ಕೆಂಡದಮಠ ಸಿದ್ದಯ್ಯ ಸ್ವಾಮಿಗಳು ಮಾತನಾಡಿ ನೆಮ್ಮದಿ ಸಿಗಬೇಕಾದರೆ ನೀವು ಮಂದಿರಕ್ಕೆ ಬರಬೇಕು ಬರಬೇಕಾದರೆ ಶುದ್ಧ ಮನಸ್ಸಿನ ಭಕ್ತಿಯಿಂದ ಬರಬೇಕು ಎಂದು ಆರ್ಶಿವದಿಸಿದರು.ಧರ್ಮಸಭೆಯಲ್ಲಿ ರಮೇಶ ಸ್ವಾಮಿಗಳು, ಚಂದ್ರ​‍್ಪ ಕಾಳೆ ಭಾವನಮಠ ಆರ್ಶಿವದಿಸಿದರು. ಮೈಲಾರಲಿಂಗೇಶ್ವರ ದೇವಸ್ಥಾನ ಸಮಿತಿ ಕಾರ್ಯದರ್ಶಿ ಲಿಂಗರಾಜಗಾಣಗೇರ ಅಧ್ಯಕ್ಷತೆ ವಹಿಸಿದ್ದರು.  

್ಷಭಾಕ್ಸ ಸುದ್ದಿ : 3 ನೇ ದಿನದ ಪುರಾಣ ಪ್ರವಚನವನ್ನು ಪ್ರಭಯ್ಯಶಾಸ್ತ್ರೀ ಹಿರೇಮಠ ಪಠಿಸಿದರು, ಶಿವಾನಂದ ಮಂದೇವಾಲ, ಬಸವರಾಜ ಚಳಗೇರಿ ಸಂಗೀತ ಸೇವೆ ನೀಡಿದರು. ಧಾನಿಗಳಿಗೆ ಗೌರವ ಸನ್ಮಾನ ಮಾಡಲಾಯಿತು. ಸುಜನಿ ನಾಟ್ಯ ಶಾಲೆ ಮಕ್ಕಳಿಂದ ಭರತನಾಟ್ಯ ಪ್ರದರ್ಶನ ನೆರವೇರಿತು.  ಈ ಸಂದರ್ಭದಲ್ಲಿ ಶ್ರೀಕಾಂತ ದುಂಡಿಗೌಡ್ರ, ಶಿವಾನಂದ ಮ್ಯಾಗೇರಿ, ಡಾ.ವಿವೇಕ ಜೈನಕೇರಿ, ಜಗದೀಶ ತೊಂಡಿಹಾಳ, ಕೆದಾರ​‍್ಪ ಬಗಾಡೆ, ದಯಾನಂದ ಅಕ್ಕಿ, ವೀರ​‍್ಪ ನವಲಗುಂದ, ರವಿ ಚವ್ಹಾಣ, ನಂದನ ಬ್ರಹ್ಮಾವರ, ಅಶೋಕ ಬಂಕಾಪೂರ, ಮಲ್ಲಿಕಾರ್ಜುನ ಹಡಪದ, ಉಳವಪ್ಪ ಅರಳೇಶ್ವರ, ಜಗದೀಶ ಯಲಿಗಾರ, ಬಸವರಾಜ ಬಡ್ಡಿ , ಬಾಳಪ್ಪ ಬೊಯಿತೆ, ಎಂ.ವ್ಹಿ.ಗಾಡದ, ಪುಟ್ಟಪ್ಪ ಲಮಾಣಿ, ಶಿವಾನಂದ ದೇವಗೇರಿ, ಮಹಾದೇವಪ್ಪ ಅತ್ತಿಗೇರಿ, ನೀಲಮ್ಮ ಓಲೇಕಾರ ಸೇರಿದಂತೆ ಸದ್ಬಕ್ತರು ಉಪಸ್ಥಿತರಿದ್ದರು. ರಾಜು ಕೆಂಬಾವಿ ಸ್ವಾಗತಿಸಿದರು, ಸಂತೋಷ ಮೊರಬದ ವಂದಿಸಿದರು, ಪ್ರೋ ಶಶಿಕಾಂತ ರಾಠೋಡ ನಿರ್ವಹಿಸಿದರು.