ಅಫರಾಧ ತಡೆ ಮಾಶಾಚರಣೆ 2024 ರ ಕಾರ್ಯಕ್ರಮ
ವಿಜಯಪುರ 23: ಗೋಲಗುಂಬಜ ವೃತ್ತ ಜಲನಗರ ಠಾಣೆ ಅಪರಾಧ ತಡೆ ಮಾಶಾಚರಣ ವಾರ್ಡ್ ನಂ. 21 ಲಕ್ಷ್ಮೀ ನಗರ ವಿಜಯಪುರ 22-12- 2024 ರ ಸಂಜೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಅಪರಾಧ ತಡೆ ಮಾಶಾಚರಣೆ ಕುರಿತು ಜಲ ನಗರ ಪೊಲಿಸ್ ಠಾಣೆಯ ಸಬ್ ಇನ್ಪೆಕ್ಟರ್ ಆದಂತ ದ್ಯಾವಪ್ಪ ವೈ. ಸಂಗಾಪುರ ಅವರು ಬಡಾವಣೆಯಲ್ಲಿ ಸೇರಿದ ನೂರಾರು ಮಹಿಳೆಯರು ಹಿರಿಯರು ಯುವಕರನ್ನು ಕುರಿತು ಮಾತನಾಡಿ, ರಾತ್ರಿ ವೇಳೆ ಅಪರಿತರು ಬಂದರೆ ಅವರನ್ನು ವಿಚಾರಿಸುವುದು. ಹಾಗೂ ಮನೆ ಬಿಟ್ಟು ಬೇರೆ ಊರಿಗೆ ಹೋಗುವಾಗ ಯಾವ ರೀತಿ ಎಚ್ಚರ ವಹಿಸಬೇಕು. ಅಪರಾಧ ಆಗುವ ಮುನ್ನ ಯಾವ ರೀತಿ ಎಚ್ಚರಿಕೆ ವಹಿಸಬೇಕೆನ್ನುವುದನ್ನು ವಿವರಿಸಿದರು.
ಸೈಬರ್ ಕ್ರೈಂಗಳು ಈಗ ಹೆಚ್ಚಿನ ರೀತಿಯಲ್ಲಿ ನಡೆಯುತ್ತಿವೆ. ಯಾವುದೋ ಒಂದು ಭೇರೆ ರಾಜ್ಯದಲ್ಲಿ ಕುಳಿತು ನಮ್ಮ ಬ್ಯಾಂಕಿನಿಂದ ಹಣವನ್ನು ಕಳ್ಳತನ ಮಾಡುವುದು ತಡೆಯಲು ನಾವು ಯಾವ ರೀತಿ ಎಚ್ಚರಿಕೆ ವಹಿಸಬೇಕು ಬಹಳ ಪ್ರಾಮುಖ್ಯತೆ ಇದೆ. ಇಂತವುಗಳಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಇಲಾಖೆವತಿಯಿಂದ ಸಾರ್ವಜನಿಕ ಹಿತಾಸಕ್ತಿಗಾಗಿ ಪ್ರತಿವರ್ಷವು ಅಪರಾಧ ತಡೆ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ ಬರುತ್ತಿದೆ. ಸಾರ್ವಜನಿಕರು ಯಾವುದೇ ತೊಂದರೆಯಾದರೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡುತ್ತಾ ಬಂದರೆ ಮಾತ್ರ ಅಪರಾಧ ತಡೆಯುವಲ್ಲಿ ಸಾರ್ವಜನಿಕರ ಸಹಕಾರ ಬಹಳ ಪ್ರಾಮುಖ್ಯ ಇರುತ್ತದೆ.
ಚಿದಾನಂದ ಆರ್.ಸಾಗರ ಪೊಲೀಸ್ ಸಬ್ ಇನ್ಸಪೆಕ್ಟರ್ ಜಲನಗರ ಇವರು ಮಾತನಾಡಿ, ಬಡಾವಣೆಯಲ್ಲಿ ಕಳ್ಳತನ ಆಗದಂತೆ ಯಾವ ರೀತಿಯಾಗಿ ನಡೆದುಕೊಳ್ಳಬೇಕು ಮತ್ತು ಚಿಕ್ಕಮಕ್ಕಳಿಗೆ ಬೈಕ್ ಓಡಿಸಲು ಹಿರಿಯರು ಅನುಮತಿ ಕೊಡಬಾರದು. ಮನೆ ಯಜಮಾನರು. ಬೈಕ್ ಗಳನ್ನು ಚಿಕ್ಕಮಕ್ಕಳ ಕೈಯಲ್ಲಿ ಕೊಡಬಾರದು. 18 ವರ್ಷಗಳು ತುಂಬಿದಾಗ ಕಡ್ಡಾಯವಾಗಿ ಪರವಾನಿಗಿ ಕೊಡಿಸಿ ಹೆಲ್ಮೇಟ್ ಧರಿಸಿ ಬೈಕ್ ಓಡಿಸುವಂತೆ ಜಾಗೃತಿ ಮೂಡಿಸಬೇಕು ಎಂದರು.
ಜಿಲ್ಲಾ ವೀರಶೈವ ಲಿಂಗಾಯತ ಕ್ಷೇಮಾಭಿವೃದ್ಧಿ ಟ್ರಸ್ಟ್‌ನ ಉಪಾಧ್ಯಕ್ಷರಾದ ಚನ್ನಬಸಯ್ಯ ಹಿರೇಮಠ ಲಕ್ಷ್ಮೀ ನಗರ ಇವರು ಪಸ್ತಾವಿಕವಾಗಿ ಮಾತನಾಡಿ, ಬಡಾವಣೆಯಲ್ಲಿ ಗಸ್ತು ತಿರುಗಾಡಲು ಹಾಗೂ ಬಡಾವಣೆಯಲ್ಲಿ 2 ರಿಂದ ಮೂರು ಕಡೆ ಪೊಲೀಸ್ ಬೀಚ್ ಅಳವಡಿಸಬೇಕು ಹಾಗೂ ಒಂದು ಗ್ರಾಮೀಣ ಪ್ರದೇಶದಂತಿರುವ ಲಕ್ಷ್ಮೀ ನಗರದಲ್ಲಿ ಜನಸಾಮಾನ್ಯರಿಗೆ ಸಹಾಯವಾಗುವಂತೆ 5 ಕಡೆ ಸಿಸಿ ಕ್ಯಾಮೇರಾ ಅಳವಡಿಸಲು ಕೈಗೊಳ್ಳಬೇಕು. ಹಾಗೂ ಬಡಾವಣೆಯ ವಾರ್ಡಿನ ಸದಸ್ಯರಾದ ಕುಮಾರ ಉಫ್ ರ್ ಮಲ್ಲಿಕಾರ್ಜುನ ಗಡಗಿ ಇವರ ಮುಖಾಂತರ ಸಮಸ್ತ ನಾಗರಿಕರಿಗೆ ಸಹಾಯವಾಗುವಂತೆ ಪೊಲಿಸ ಇಲಾಖೆಯ ಜೊತೆ ಗೂಡಿ ಕೆಲಸಮಾಡಬೇಕು ಮಾತನಾಡಿದರು.
ಬಡಾವಣೆೆಯ ಯುವಕ ಪ್ರವೀಣ ಕಿಚಡಿ ಮಾತನಾಡಿ, ಯಾವುದೇ ಒಂದು ಮೆಸೇಜ್ ಮಾಡಿ ಓಟಿಪಿ ಕೇಳಿ ನ್ಯಾಶನಲ್ ವೈಸ್ ಬ್ಯಾಂಕಿನ ಹೆಸರು ಹೇಳಿ ಹಣ ತೆಗೆದುಕೊಳ್ಳುವಂತಹ ಸೈಬರ್ ಕ್ರೈಂ ನಡೆಯುತ್ತಿದ್ದು ನಮ್ಮ ಜನೆಯು ಎಚ್ಚರದಿಂದ ಯಾವುದೇ ಒಂದು ವಯಕ್ತಿಕ ಮಾಹಿತಿ ಕೇಳಿದರೆ ಯಾರು ಕೊಡಬಾರದು. ಸಂಶಯ ಬಂದರೆ ಸಂಬಂಧಿಸಿದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದರು.
ವೇದಿಕೆಯಲ್ಲಿ ನಿವೃತ್ತ ಸೈನಿಕ ಬಸಯ್ಯ ಹಿರೇಮಠ,ಮಹಾನಗರ ಪಾಲಿಕೆ ಸದಸ್ಯರಾದ ಕುಮಾರ ಗಡಗಿ, ಬಸವರಾಜ ಗೋಲಾಯಿ, ಪ್ರಾಣೇಶ ಕುಲಕರ್ಣಿ, ಬಸವರಾಜ ಗೋಲಾಯಿ, ಲಕ್ಷ್ಮೀ ಗಜಾನನ ಯುವಕ ಸಂಘದ ಅಧ್ಯಕ್ಷ ಮಂಜುನಾಥ ದೊಡಮನಿ, ಉಚ್ಚ ನ್ಯಾಯಾಲಯದ ನ್ಯಾಯವಾದಿ ಹಾಗೂ ವೀರಶೈವ ಮಹಾಸಭಾದ ನಿರ್ದೇಶಕರಾದ ಮಲ್ಲಿಕಾರ್ಜುನ ಭೃಂಗಿಮಠ, ಬಡಾವಣೆಯ ಹಿರಿಯರಾದ ಈಶ್ವರ ಹೂಗಾರ ಬಳ್ಳೂರ ಸರ್, ಪ್ರದೀಪ ಮಿಸ್ಕಿನ, ವಿಠ್ಠಲ ಬಳ್ಳೂರ, ಶಿವರಾಜ ಕಮತಗಿ, ಶ್ರೀಮತಿ ದ್ರಾಕ್ಷಾಯಣಿ ಹಿರೇಮಠ, ಸಿದ್ದಮ್ಮ ಮುಂಜಾನಿ ಸೇರಿದಂತೆ ಇದೇ ಸಂದರ್ಭದಲ್ಲಿ ಬಡಾವಣೆಯ ವತಿಯಿಂದ ಪಿಎಸ್‌ಐ ದ್ಯಾವಪ್ಪ ಎಸ್. ಸಂಗಾಪೂರ ಹಾಗೂ ಪಿಎಸ್‌ಐ ಚಿದಾನಂದ ಎಸ್. ಸಾಗರ, ನ್ಯಾಯವಾದಿ ಮಲ್ಲಿಕಾರ್ಜುನ ಭೃಂಗಿಮಠ ಇವರಿಗೆ ಸನ್ಮಾನಿಸಲಾಯಿತು.