ಕ್ರಿಕೆಟಿಗ ಶಮಿ ಮೊಹ್ಮದ್ ವಿಚ್ಛೇದಿತ ಪತ್ನಿ ಹಸೀನ್ ಜಹಾನ್ ಸೆರೆ


ಅಮ್ರೋಹ, ಏ 29 ಅತಿಕ್ರಮ  ಪ್ರವೇಶದ ಆರೋಪದ ಮೇರೆಗೆ  ಕ್ರಿಕೆಟಿಗ ಶಮಿ ಅಹ್ಮದ್ ಅವರ ವಿಚ್ಛೇದಿತ ಪತ್ನಿ ಹಸೀನ್ ಜಹಾನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. 

       ಶಮಿ ಅವರ ಕುಟುಂಬದ ದೂರಿನ ಬಗ್ಗೆ ಹಸಿನ್ ಅವರ ವಿರುದ್ಧ ಪೊಲೀಸರು ಕ್ರಮ ತೆಗೆದುಕೊಂಡಿದ್ದು ಸದ್ಯ ಅವರನ್ನು ಜಿಲ್ಲಾ  ಆಸ್ಪತ್ರೆಗೆ  ದಾಖಲಿಸಲಾಗಿದೆ.         

ಹಸಿನ್, ಅವಳ ಮಗಳು ಬೆಬೊ ಜೊತೆಯಲ್ಲಿ, ಭಾನುವಾರ ಸಂಜೆ ಶಮಿ ಮನೆಯೊಳಗೆ ಪ್ರವೇಶಿಸಿ ಶಮಿ ಅವರ ತಾಯಿ ಮತ್ತು ಸಹೋದರರ ಜೊತೆ ಬಿಸಿ ಬಿಸಿ ವಾಗ್ವಾದ ನಡೆಸಿದ್ದರು  ಶಮಿ ಅವರು  ಬೇರೆ ಹುಡುಗಿಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಹಸಿನ್ ಆರೋಪದ ನಂತರ ಅವರ ವೈವಾಹಿಕ ಬದುಕು ಬೇರೆಯಾಗಿತ್ತು. ಕೊಲ್ಕತ್ತಾದಲ್ಲಿ ಶಮಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ