ಕೃಪಾದೃಷ್ಠಿ ನೇತ್ರದಾನ ಜಾಗೃತಿ ಅಭಿಯಾನ: ಸುನೀಲ್ಕುಮಾರ ಅವರಿಂದ ಚಾಲನೆ

ಕೊಪ್ಪಳ 18: ಗವಿಸಿದ್ದೇಶ್ವರ ಜಾತ್ರಾ ಮಹೋತ್ಸದ ಅಂಗವಾಗಿ ಕೊಪ್ಪಳ ನಗರದಲ್ಲಿ ಆಯೋಜಿಸಲಾದ "ಕೃಪಾದೃಷ್ಠಿ" ನೇತ್ರದಾನ ಜಾಗೃತಿ ಅಭಿಯಾನಕ್ಕೆ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ಚಾಲನೆ ನೀಡಿದರು. 

ಮಾನವ ಜೀವನದಲ್ಲಿ ಕಣ್ಣು ಪಾತ್ರವು ಪ್ರಧಾನವಾಗಿದ್ದು, ಸಮಾಜದಲ್ಲಿ ಕಣ್ಣಿನ ದೃಷ್ಠಿಯ ಬಗ್ಗೆ ಸರಿಯಾದ ಜ್ಞಾನವಿಲ್ಲದೇ ಅನೇಕರು ದೃಷ್ಠಿದೋಷಕ್ಕೆ ಒಳಗಾಗುತ್ತಿದ್ದಾರೆ.  ಅಂತಹವರಿಗೆ ನೇತ್ರದಾನವನ್ನು ಮಾಡುವುದರಿಂದ ಅವರ ಜೀವನದಲ್ಲಿ ಬೆಳಕನ್ನು ತರಬಹುದಾಗಿದ್ದು, ಈ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಸಹಬಾಗಿತ್ವದಲ್ಲಿ ಹಾಗೂ ವಿವಿಧ ಇಲಾಖೆ ಮತ್ತು ಶಾಲಾ ಕಾಲೇಜುಗಳ ಸಹಯೋಗದಲ್ಲಿ "ಕೃಪಾದೃಷ್ಠಿ ನೇತ್ರದಾನ ಜಾಗೃತಿ ಅಭಿಯಾನ" ಕಾರ್ಯಕ್ರಮವನ್ನು ಶುಕ್ರವಾರದಂದು ಆಯೋಜಿಸಲಾಗಿತ್ತು. 

ಗವಿಸಿದ್ದೇಶ್ವರ ಸ್ವಾಮಿಗಳು, ಕನರ್ಾಟಕ ರಾಜ್ಯ ಸಕರ್ಾರಿ ನೌಕರರ ಸಂಘದ ಕೊಪ್ಪಳ ಜಿಲ್ಲಾಧ್ಯಕ್ಷ ನಾಗರಾಜ್ ಜುಮ್ಮಣ್ಣವರ್, ಡಿ.ವೈ.ಎಸ್.ಪಿ. ಸಂದೀಗವಾಡ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ದೊಡ್ಡಬಸಪ್ಪ ಕಂಪ್ಲಿ, ಯುನಿಸೆಫ್ ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆಯ ಹರೀಶ ಜೋಗಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಶಾಲಾ ಕಾಲೇಜುಗಳ ಮುಖ್ಯಸ್ಥರು, ಶಿಕ್ಷಕರು, ಸಾರ್ವಜನಿಕರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.  ಜಾಗೃತಿ ಅಭಿಯಾನವು ನಗರದ ಸಾರ್ವಜನಿಕರ ಮೈದಾನದಿಂದ ಪ್ರಾರಂಭಗೊಂಡು ಅಶೋಕ ರಸ್ತೆ ಮಾರ್ಗವಾಗಿ ಜವಾಹರ ರಸ್ತೆ ಮೂಲಕವಾಗಿ ಗಡಿಯಾರ ಕಂಬದಿಂದ ಗವಿಮಠದವರೆಗೆ ಸಾಗಿ ಬಂತು.  ಸಹಸ್ರಾರು ಸಂಖ್ಯೆಯಲ್ಲಿ ವಿದ್ಯಾಥರ್ಿಗಳು ಈ ರ್ಯಾಲಿಯಲ್ಲಿ ಪಾಲ್ಗೊಂಡು ಅಭಿಯಾನವನ್ನು ಯಶಸ್ವಿಗೊಳಿಸಿದೆ