ಬಳ್ಳಾರಿ04: ಲೋಕಸಭಾ ಉಪಚುನಾವಣೆಯ ಮತ ಎಣಿಕೆಗೆ ಮಂಗಳವಾರ ಬೆಳಿಗ್ಗೆ 8ರಿಂದ ನಗರದ ರಾವ್ ಬಹದ್ದೂರು ವೈ ಮಹಾಬಲೇಶ್ವರಪ್ಪ ಇಂಜಿನೀಯರಿಂಗ್ ಕಾಲೇಜಿನಲ್ಲಿ ನಡೆಯಲಿದೆ. ಈ ಕುರಿತು ಸೋಮುವಾರ ಎಣಿಕೆ ಕೇಂದ್ರದ ಮಾರ್ಗದಲ್ಲಿ ಎಸ್ಪಿ ಅರುಣ್ ರಂಗರಾಜನ್ ಜೊತೆ ಜಿಲ್ಲಾಧಿಕಾರಿ ಡಾ|| ರಾಮ್ಪ್ರಸಾತ್ ಮನೋಹರ್ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಲೋಕಸಭಾ ಕ್ಷೇತ್ರದ ಎಲ್ಲಾ 8 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಪ್ರತ್ಯೇಕವಾಗಿ ಮತಗಟ್ಟೆವಾರು ನಡೆದು ಎಲ್ಲವನ್ನು ಒಂದುಗೂಡಿಸಿ ಫಲಿತಾಂಶ ಘೋಷಣೆ ಮಾಡಲಾಗುತ್ತದೆ.
ಮಧ್ಯಾಹ್ನ 2ರ ವೇಳೆಗೆ ಫಲಿತಾಂಶ ಹೊರಬಿಳಲಿದೆ ಎಂದರು. ಒಂದೊಂದು ವಿಧಾನಸಭಾ ಕ್ಷೇತ್ರಕ್ಕೆ 15 ಟೇಬಲ್ಗಳನ್ನು ವ್ಯವಸ್ಥೆ ಮಾಡಿದ್ದು ಮತದಾನಕ್ಕಾಗಿ 350 ಸಿಬ್ಬಂದಿಯನ್ನು ನೇಮಕಮಾಡಿ ಅವರಿಗೆ ಮತ ಎಣಿಕೆ ಕುರಿತಾಗಿ ತರಬೇತಿ ನೀಡಿದೆ. ಆರಂಭದಲ್ಲಿ ಒಂದು ಮತಯಂತ್ರದ ಜೊತೆ ವಿ.ವಿ ಪ್ಯಾಡ್ ನಲ್ಲಿರುವ ಮತಗಳ ಎಣಕೆ ಮಾಡಿ ಹೋಲಿಕೆ ಮಾಡಲಿದೆಂದು ಅವರು ಉಳಿದವನ್ನು ಹಾಗೆ ಎಣಿಸಲಿದೆ ಎಂದರು.
ಒಟ್ಟು 17 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದೆ. ಮತ ಎಣಿಕೆ ಹಿನ್ನಲೆಯಲ್ಲಿ ಮಂಗಳವಾರ ಜಿಲ್ಲೆಯಾಧ್ಯಂತ ಬೆಳಿಗ್ಗೆ 6ರಿಂದ ರಾತ್ರಿ 12ರವರೆಗೆ ಮದ್ಯ ಮಾರಾಟ ನಿಷೇಧ ಮಾಡಿದೆ. ಮೆರವಣಿಗೆ ಮಾಡದಂತೆ ಅಲ್ಲದೇ ಗುಂಪಾಗಿರದಂತೆ ಮತ ಎಣಿಕೆ ಸುತ್ತ ಮುತ್ತ ನಿಷೆಧಾಜ್ಞೆ ಜಾರಿಗೆ ಮಾಡಲಾಗಿದೆ. ಮತ ಎಣಿಕೆ ಸುತ್ತ ಬಿಗಿ ಪೋಲಿಸ್ ಬಂದೊಬಸ್ತ ವದಗಿಸಿದ್ದು ಜೊತೆಗೆ ಅರೇ ಸೇನಾಪಡೆಯನ್ನು ನೇಮಕ ಮಾಡಿದೆ.
ಮತ ಎಣಿಕೆ ಕೇಂದ್ರಕ್ಕೆ ಬರುವ ಕಾಲದಲ್ಲಿ ಅಭ್ಯಥರ್ಿಗಳು ಅವರ ಏಜೆಂಟರು ಮೋಬೈಲ್ ತರುವಂತಿಲ್ಲ ಎಂದು ಅರುಣ್ ರಂಗರಾಜನ್ ತಿಳಿಸಿದರು. ಮತ ಎಣಿಕೆ ಕೇಂದ್ರಕ್ಕೆ ಬರುವ ಏಜೆಂಟರಿಗೆ ಪ್ರತ್ಯೇಕ ಪ್ರವೇಶದ್ವಾರ ಕೊಳಗಲ್ಲು ರಸ್ತೆಕಡೆ ಮಾಡಲಾಗಿದೆ. ಹಾಗೂ ಎಣಿಕೆಗೆ ಬರುವ ಸಿಬ್ಬಂದಿಗೂ ರೈಲ್ವೇಗೇಟ್ ಕಡೆ ಪ್ರತ್ಯೇಕ ಪ್ರವೇಶದ್ವಾರ ಮಾಡಲಾಗಿದೆ. ಜೊತೆಗೆ ವಿ.ವಿ.ಸಂಘದ ಆರ್ವೈಎಂಇಸಿ ಕಾಲೇಜಿಗೆ ಮಂಗಳವಾರ ರಜೆ ಘೋಷಣೆ ಮಾಡಲಾಗಿದೆ ಎಂದು ವಿವರಿಸಿದರು.