ಭ್ರಷ್ಟಾಚಾರ ಮುಕ್ತ ಭಾರತ ನಮ್ಮದಾಗಲಿ

ಲೋಕದರ್ಶನ ವರದಿ

ಮಹಾಲಿಂಗಪುರ 13: ಸ್ಥಳೀಯ ಬಸವಾನಂದ ಪ್ರೌಢ ಶಾಲೆಯಲ್ಲಿ ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ನಿಮರ್ೂಲನಾ ಸಮಿತಿ, ದೆಹಲಿ ಹಾಗೂ ಮಹಾಲಿಂಗಪುರ ಘಟಕ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ನಿಮರ್ೂಲನಾ ದಿನಾಚರಣೆಯಲ್ಲಿ ಮಾತನಾಡುತ್ತಾ

ಪ್ರತಿಯೊಬ್ಬರೂ ತಮ್ಮ ಮೂಲಭೂತ ಹಕ್ಕುಗಳು ಹಾಗೂ ಕರ್ತವ್ಯಗಳನ್ನು ಅರಿತುಕೊಂಡು, ಅಳವಡಿಸಿಕೊಂಡು ಸತ್ಪ್ರಜೆಗಳಾಗಿ ಬಾಳಬೇಕು. ಇತರರಿಗೂ ಗೌರವದಿಂದ ಬಾಳಲು ಅವಕಾಶ ಕಲ್ಪಿಸಬೇಕು. ವ್ಯವಹಾರಿಕ ಹಾಗೂ ಸಾಮಾನ್ಯ ಜ್ಞಾನ, ಪ್ರಾಮಾಣಿಕತೆ ನಮ್ಮ ಬದುಕನ್ನು ಹಸನಾಗಿಸುತ್ತವೆ. ಇಂತಹ ಮೌಲ್ಯಗಳನ್ನು ಅಳವಡಿಸಿಕೊಂಡು ದೇಶಪ್ರೇಮಿಯಾಗಿ, ಸಮಾಜಮುಖಿಯಾಗಿ, ಪ್ರಾಮಾಣಿಕವಾಗಿ ಬದುಕುತ್ತಾ ರಾಮರಾಜ್ಯದ ಕನಸನ್ನು ನನಸು ಮಾಡಬೇಕಾಗಿದೆ. 

ಈ ನಿಟ್ಟಿನಲ್ಲಿ ಇಂದಿನ ಯುವಶಕ್ತಿ, ವಿದ್ಯಾಥರ್ಿಗಳ ಪಾತ್ರ ಅತೀ ಮುಖ್ಯ ಎಂದು ಮುಧೋಳ ತಾಲೂಕು ಹೆಚ್ಚುವರಿ ದಿವಾನಿ ನ್ಯಾಯಾಧೀಶ ಉಮೇಶ ಆತನೂರ ಕಿವಿಮಾತು ಹೇಳಿದರು. ಉಪಸ್ಥಿತರಿದ್ದ ವಕೀಲ ಸಿ.ಜಿ.ಮಠಪತಿ ಮಾತನಾಡುತ್ತಾ ಎಲ್ಲಾ ಮಾನವರನ್ನೂ ಸಮಾನ ಗೌರವದಿಂದ ಕಾಣುತ್ತಾ ಸತ್ಯ, ಅಹಿಂಸೆ, ದಯೆ, ಮಾನವ ಕಲ್ಯಾಣ, ನಯ, ವಿನಯ ಮುಂತಾದ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ನಮ್ಮ ಕಾನೂನುಗಳನ್ನು ಪಾಲಿಸುವುದು ನಮ್ಮ ಕರ್ತವ್ಯ ಎಂದು ಹೇಳಿದರು.

ಜಮಖಂಡಿ ತಾಲೂಕಾ ಮನವ ಹಕ್ಕುಗಳ ಸಮಿತಿ ಅಧ್ಯಕ್ಷ ಶಂಕರ ತಳ್ಳಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಕೀಲ ರಾಯಪ್ಪ, ಮಹಾಲಿಂಗಪುರ ಘಟಕದ ಅಧ್ಯಕ್ಷ ಲಕ್ಕಪ್ಪ ಕುರೇರ, ಜಮಖಂಡಿ ಘಟಕದ ಉಪಾಧ್ಯಕ್ಷ ನಾಗಪ್ಪ ಬಂಗೆನ್ನವರ ಇದ್ದರು. ನ್ಯಾಯಾಧೀಶ ಉಮೇಶ ಆತನೂರ, ಮಾಜಿ ಸೈನಿಕ ದುಂಡಪ್ಪ ಹೊಸಮನಿ, ಮುಖ್ಯೋಪಾಧ್ಯಾಯ ಎಸ್.ಕೆ.ಗಿಂಡೆ ಇವರನ್ನು ಸನ್ಮಾನಿಸಲಾಯಿತು. ಹಿರಿಯ ಮಕ್ಕಳ ಸಾಹಿತಿ ಅಣ್ಣಾಜಿ ಫಡತಾರೆ ಅಧ್ಯಕ್ಷತೆ ವಹಿಸಿದ್ದರು.

ವಿಷ್ಣು ಬಡಿಗೇರ ಸ್ವಾಗತಿಸಿ, ಸಿದ್ಧಾರೂಢ ಮುಗಳಖೋಡ ನಿರೂಪಿಸಿ, ಲಕ್ಷ್ಮಣ ಕಿಶೋರಿ ವಂದಿಸಿದರು.