ಕೊರೊನಾ ಹಾವಳಿ: ಗ್ರಾಮ ಪ್ರವೇಶ ನಿರ್ಬಂಧಿಸಿದ ಗ್ರಾಮಸ್ಥರು

ಸಂಬರಗಿ, ಜುಲೈ  09: ಮಹಾರಾಷ್ಟ್ರದ ಗಡಿಭಾಗದಲ್ಲಿ ಕೊರೊನಾ ಹಾವಳಿ ಹೆಚ್ಚಾಗಿದ್ದು, ರಾಜ್ಯದ ಗಡಿ ಗ್ರಾಮಗಳ ಜನರು ಮಹಾರಾಷ್ಟ್ರದ ಗಡಿಭಾಗದ ಜನರು ಗ್ರಾಮಕ್ಕೆ ಪ್ರವೇಶಿಸದಂತೆ ರಸ್ತೆಗೆ ಮುಳ್ಳುಕಂಟಿ ಹಾಕಿ ರಸ್ತೆ ಬಂದ್ ಮಾಡಿ ಕಾವಲು ಕಾಯುತ್ತಿದ್ದಾರೆ.

ನಾಗನೂರ ಪಿ.ಎ, ಚಂದ್ರಾಪವಡಿ, ಕಿರನಗಿ, ಬೆವನೂರ ಸೇರಿದಂತೆ ಹಲವು ಗ್ರಾಮದಲ್ಲಿ ಸಂಪರ್ಕ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಪ್ರತಿ  ಗ್ರಾಮದಲ್ಲಿ  ಯುವಕರ  ತಂಡ  ಕಾವಲು ಕಾಯುತ್ತಿದ್ದು, ಬೇರೆ ಕಡೆಗಳಿಂದ ಗ್ರಾಮಕ್ಕೆ ಬರುವವರನ್ನು ಮರಳಿ ಕಳಿಸುತ್ತಿದ್ದಾರೆ. ಗ್ರಾಮದ ಹೊರವಲಯದಲ್ಲಿ ಗ್ರಾಮ ಪ್ರವೇಶಕ್ಕೆ ನಿಷೇಧವಿದೆ ಎಂಬ ಫಲಕ ಹಾಕಲಾಗಿದೆ.

ಗ್ರಾಮಸ್ಥರು ಬೇರೆ ಗ್ರಾಮಗಳ ಸಂಬಂಧಿಕರು ಊರಿಗೆ ಬರದಂತೆ ಕರೆ ಮಾಡಿ ಮನವಿ ಮಾಡುತ್ತಿದ್ದಾರೆ. ಗ್ರಾಮಸ್ಥರು ಸ್ವಯಂ ಪ್ರೇರಣೆಯಿಂದ ಗಡಿ ರಸ್ತೆಗಳನ್ನು ಬಂದ್ ಮಾಡಿದ್ದಾರೆ.