ಉದ್ಯಮಭಾಗದ ಸಮಸ್ಯೆಗಳ ಸ್ಪಂದನೆಗೆ ಉದ್ಯಮಿಗಳೊಂದಿಗೆ ಸಂವಾದ


ಬೆಳಗಾವಿ 20: ಇಲ್ಲಿನ ಉದ್ಯಮಭಾಗ ಪ್ರದೇಶದಲ್ಲಿ ಮೂಲಭೂತ ಸೌಕರ್ಯಗಳನ್ನು ಹಾಗೂ ಇನ್ನಿತರ ಸವಲತ್ತುಗಳನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ಶಾಸಕ ಅಭಯ ಪಾಟೀಲ ಮತ್ತು ಅನೀಲ ಬೆನಕೆ ಅವರು ಫೌಂಡ್ರಿ ಕ್ಲಸ್ಟರ ಭವನದಲ್ಲಿ ಸುದೀರ್ಘ ಸಂವಾದ ನಡೆಸಿ ಉದ್ಯಮಿಗಳ ಸಮಸ್ಯೆಗಳನ್ನು ಆಲಿಸಿದರು.

ಲಘು ಉದ್ಯೋಗ ಭಾರತಿ ಹಾಗೂ ಫೌಂಡ್ರಿ ಕ್ಲಸ್ಟರ್ ವತಿಯಿಂದ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಭೆಯಲ್ಲಿ ಉದ್ಯಮಭಾಗ ಪ್ರದೇಶಕ್ಕೆ ಸಮರ್ಪಕ ವಿದ್ಯುತ ಪೂರೈಕೆ, ರಸ್ತೆಗಳ ದುರಸ್ತಿ, ಬೀದಿ ದೀಪಗಳ ಅಳವಡಿಕೆ, ಕುಡಿಯುವ ನೀರಿನ ಸಮರ್ಪಕ ಪೂರೈಕೆ, ತೆರಿಗೆಯಲ್ಲಿ ರಿಯಾಯತಿ ಸೇರಿದಂತೆ ಹತ್ತು ಹಲವಾರು ಸಮಸ್ಯೆಗಳ ಕುರಿತು ಅರ್ಥಪೂರ್ಣ ಚಚರ್ೆ ನಡೆಯಿತು.

ಸಭೆಯಲ್ಲಿ ಉದ್ಯಮಿಗಳ ಸಮಸ್ಯೆ ಹಾಗೂ ಅವರ ಅಭಿಪ್ರಾಯಗಳನ್ನು ಆಲಿಸಿದ ಬಳಿಕ ಮಾತನಾಡಿದ ಶಾಸಕ ಅಭಯ ಪಾಟೀಲ ಕೇಂದ್ರ ಸರಕಾರದ ಅಸೈಡ ಯೋಜನೆಯಡಿಯಲ್ಲಿ ಉದ್ಯಮಭಾಗದ ರಸ್ತೆಗಳನ್ನು ಸುಧಾರಿಸುವ ಕಾಮಗಾರಿಯನ್ನು ಶೀಘ್ರದಲ್ಲೇ ಆರಂಭ ಮಾಡುತ್ತೇವೆ. ಉದ್ಯಮಿಗಳು ಮಂಡಿಸಿದ ಎಲ್ಲ ಸಮಸ್ಯೆಗಳ ನಿವಾರಣೆಗಾಗಿ ಶೀಘ್ರದಲ್ಲೇ ಸಂಬಂಧಿಸಿದ ಅಧಿಕಾರಿಗಳ ಸಭೆಯನ್ನು ನಡೆಸುತ್ತೇವೆ. ಸಭೆಗೆ ಉದ್ಯಮದ ಪ್ರತಿನಿಧಿಗಳನ್ನು ಆಹ್ವಾನಿಸುತ್ತೇವೆ, ಕೇವಲ ಒಂದು ಬಾರಿ ಸಭೆ ನಡೆಸದೇ ಪ್ರತಿ 4 ತಿಂಗಳಿಗೊಮ್ಮೆ ಉದ್ಯಮಿಗಳ ಸಭೆ ನಡೆಸಿ ಸಮಸ್ಯೆಗಳನ್ನು ನಿರಂತರವಾಗಿ ಆಲಿಸಿ ಅದಕ್ಕೆ ಪ್ರಮಾಣಿಕವಾಗಿ ಸ್ಪಂಧಿಸುತ್ತೇವೆ ಎಂದು ಶಾಸಕ ಅಭಯ ಪಾಟೀಲ ಭರವಸೆ ನೀಡಿದರು.

ಅಧಿವೇಶನದಲ್ಲಿ ಈಎಸ್ಐ ಆಸ್ಪತ್ರೆಯ ಕುರಿತು ಪ್ರಶ್ನೆ ಮಾಡಿ ಸರಕಾರದ ಗಮನ ಸೆಳೆದಿದ್ದೇನೆ. ಮಾನ್ಯ ಕಾಮರ್ಿಕ ಸಚಿವರು ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಆಸ್ಪತ್ರೆಯ ಸ್ಥಳಾಂತರ ಕಾರ್ಯ ಈಗಾಗಲೇ ಆರಂಭವಾಗಿದೆ. ಉದ್ಯಮಭಾಗದ ವಿದ್ಯುತ್ ಸಮಸ್ಯೆಯನ್ನು ಶಾಸ್ವತವಾಗಿ ನಿವಾರಿಸಲು ಮಚ್ಚೆ ಗ್ರಾಮದಲ್ಲಿ 220 ಕೆ.ವಿ. ಸಾಮಥ್ರ್ಯದ ಸ್ಟೇಶನ್ ನಿಮರ್ಾಣಕ್ಕಾಗಿ ಸರಕಾರಕ್ಕೆ ಮನವಿ ಮಾಡಿಕೊಂಡಿದ್ದೇವೆ ಇದು ಕೂಡಾ ಶೀಘ್ರದಲ್ಲೇ ಸಾಕಾರಗೊಳ್ಳಲಿದೆ ಎಂದು ಶಾಸಕ ಅಭಯ ಪಾಟೀಲ ಸಭೆಯಲ್ಲಿ ಮಾಹಿತಿ ನೀಡಿದರು.

ಸಭೆಯಲ್ಲಿ ಫೌಂಡ್ರಿ ಕ್ಲಸ್ಟರ್ ಅಧ್ಯಕ್ಷ ರಾಮ ಭಂಡಾರಿ, ಲಘು ಉದ್ಯೋಗ ಭಾರತಿ ಅಧ್ಯಕ್ಷ ಸಚೀನ ಸಬನಿಸ್ ಹಾಗೂ ನೂರಾರು ಜನ ಉದ್ಯಮಿಗಳು ಸಂವಾದದಲ್ಲಿ ಭಾಗವಹಿಸಿದ್ದರು.