ನವದೆಹಲಿ, ನವೆಂಬರ್ 29- ಮಹಾತ್ಮ ಗಾಂಧಿ ಹಂತಕ ನಾಥುರಾಮ್ ಗೋಡ್ಸೆ ಕುರಿತು ನೀಡಿದ್ದ ವಿವಾದ್ಮಾತಕ ಹೇಳಿಕೆಗಾಗಿ ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್ ಸಿಂಗ್ ಲೋಕಸಭೆಯಲ್ಲಿ ಶುಕ್ರವಾರ ಕ್ಷಮೆಯಾಚಿಸಿದರು.
ಯಾವುದೇ ರೀತಿಯಲ್ಲಿ ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ , ನಾನು ಕ್ಷಮೆಯಾಚಿಸುತ್ತೇನೆ ಎಂದು ಹೇಳಿದರುಇಂದೂ ಸಹ ಕಾಂಗ್ರೆಸ್ ಸದಸ್ಯರು ಈ ವಿಷಯವನ್ನು ಪ್ರಮುಖವಾಗಿ ಪ್ರಸ್ತಾಪ ಮಾಡಿದರು.
ಆದರೆ, ಕಾಂಗ್ರೆಸ್ ನಾಯಕ ಗಾಂಧಿಯವರು ಸದನದಲ್ಲಿ ಮಾತನಾಡುವಾಗ ಆಕೆಯನ್ನು 'ಭಯೋತ್ಪಾದಕಿ ಎಂದು ದೂರಿದ್ದು ಮತ್ತೊಂದು ವಿವಾದಕ್ಕೆ ಕಾರಣವಾಯಿತು .
"ಸದನದ ಸದಸ್ಯರೊಬ್ಬರು ನನ್ನನ್ನು 'ಭಯೋತ್ಪಾದಕ' ಎಂದು ಉಲ್ಲೇಖಿಸಿದ್ದಾರೆ. ಇದು ನನ್ನ ಗೌರದ ಮೇಲಿನ ಆಕ್ರಮಣವಾಗಿದೆ ಎಂದು ಪ್ರಜ್ಞಾ ಹಲವು ಬಿಜೆಪಿ ಸದಸ್ಯರ ಆಕ್ರೊಶದ ನಡುವೆಯೇ ಹೇಳಿದರು.
ಮಾಲೆಗಾಂವ್ ಬಾಂಬ್ ಸ್ಫೋಟದ ಬಗ್ಗೆ ಬಂಧನಕ್ಕೊಳಗಾಗಿದ್ದರೂ ನನ್ನ ವಿರುದ್ಧ ಯಾವುದೇ ಆರೋಪಗಳು ನ್ಯಾಯಾಲಯದಲ್ಲಿ ಸಾಬೀತಾಗಿಲ್ಲ" ಹೀಗಿರುವಾಗ ಈ ರೀತಿ ಕರೆಯುವುದು ಅವರಿಗೆಶೋಭೆ ತರಲಿದೆಯೇ? ಎಂದು ಕೇಳಿದರು.
ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಪ್ರಜ್ಞಾ ಅವರಿಗೆ ಬಂಬಲವಾಗಿ ನಿಂತು ಸದನದ ಚುನಾಯಿತ 'ಮಹಿಳಾ ಸದಸ್ಯರ' ವಿರುದ್ಧದ ಹೇಳಿಕೆಗಳಿಗಾಗಿ ಕಾಂಗ್ರೆಸ್ ಮುಖಂಡ ಗಾಂಧಿ ಅವರಿಗೆ ಶೋಕಾಸ್ ನೋಟೀಸ್ ಜಾರಿ ಮಾಡಿ ಅವರು ಸಹ ಈ ಬಗ್ಗೆ ಕ್ಷೆಮೆ ಕೇಳಬೇಕು ಗೋಡ್ಸೆ ವಿಷಯದಲ್ಲಿ ಕಾಂಗ್ರೆಸ್ ದ್ವಿಮುಖ ನೀತಿಯನ್ನು ಅನುಸರಿಸುತ್ತಿದೆ ಎಂದೂ ದುಬೆ ಆರೋಪಿಸಿ, ಏಕೆಂದರೆ ಅವರು ಈಗ ಶಿವಸೇನೆ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದೂ ದೂರಿದರು.