ದೇಶಕ್ಕಾಗಿ ಮುಸ್ಲಿಂರ ಕೊಡುಗೆ ಅನನ್ಯವಾದುದು: ಶಾಸಕ ನಾರಾ ಭರತ್ ರೆಡ್ಡಿ
ಬಳ್ಳಾರಿ 09: ಭಾರತದ ಮುಸ್ಲಿಂ ಸಮುದಾಯದ ಜನ ಸಾಕಷ್ಟು ಕೊಡುಗೆ ನೀಡಿದೆ, ಮೊದಲ ಸ್ವಾತಂತ್ರ್ಯ ಸಂಗ್ರಾಮದಿಂದ ಇಲ್ಲಿಯವರೆಗೆ ಮುಸ್ಲಿಂರು ದೇಶಕ್ಕಾಗಿ ತ್ಯಾಗ ಬಲಿದಾನ ಮಾಡುತ್ತಿದ್ದಾರೆ ಎಂದು ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ನಗರದ ಹೊರ ವಲಯದ ಖಾಸಗಿ ಸಭಾಂಗಣದಲ್ಲಿ ಮುಸ್ಲಿಂ ಸಮುದಾಯದ ವತಿಯಿಂದ ಏರಿ್ಡಸಿದ್ದ ಶಾಸಕರ ಸಂಸದರ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.ದೇಶಕ್ಕಾಗಿ ಬಲಿದಾನಗೈದವರ ಹೆಸರನ್ನು ಇತಿಹಾಸದಿಂದ ತೆಗೆದು ಹಾಕುವ ಹುನ್ನಾರವನ್ನು ಯಾರಾದರೂ ಮಾಡಬಹುದು, ಆದರೆ ಹುತಾತ್ಮರ ಹೆಸರನ್ನು ಅಳಿಸಲಾಗದು ಎಂದು ಹೇಳಿದರು.ನಗರದ 21 ಮಸೀದಿಗಳಿಗೆ 2.20 ಕೋಟಿ ರೂ.ಗಳ ಅನುದಾನ ತಂದಿರುವೆ, ಅದೇ ರೀತಿ ಎರಡು ಶಾದಿ ಮಹಲ್’ಗಳಿಗೆ 3 ಕೋಟಿ ರೂ.ಗಳ ಅನುದಾನ ತಂದಿರುವೆ ಎಂದು ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ಚುನಾವಣೆಯ ಸಂದರ್ಭ ಶಾದಿ ಮಹಲ್ ಬಗ್ಗೆ ಪ್ರಸ್ತಾಪ ಮಾಡಿದಾಗ ಅದು ಆಗದ ಕೆಲಸ ಎಂದು ವೃದ್ಧೆಯೊಬ್ಬರು ಹೇಳಿದ್ದರು ಆದರೆ ಇಂದು ಒಂದು ಶಾದಿ ಮಹಲ್ ಅಲ್ಲ ಎರಡು ಶಾದಿ ಮಹಲ್’ಗಳಿಗೆ ಅನುದಾನ ತಂದಿರುವೆ ಎಂದರು.ನಿಮ್ಮ ಆಶೀರ್ವಾದದಿಂದ ನಾನು ಒಂದೇ ದಿನ ಅಲ್ಪಸಂಖ್ಯಾತ ಸಮುದಾಯಗಳ ಕಾಲೋನಿಗಳ ಅಭಿವೃದ್ಧಿಗಾಗಿ 5 ಕೋಟಿ ರೂ.ಗಳ ಕಾಮಗಾರಿಗೆ ಚಾಲನೆ ನೀಡಿದೆ ಎಂದ ಅವರು, ಹಿಂದೂ ಮುಸ್ಲಿಂರ ಐಕ್ಯತೆ ನಮ್ಮ ಸರ್ಕಾರದ ಮೊದಲ ಆದ್ಯತೆ, ಕೋಮು ಸೌಹಾರ್ದತೆ ಕಾಪಾಡುವ ಜವಾಬ್ದಾರಿ ನಮ್ಮದು ಎಂಬ ಭರವಸೆ ನೀಡುತ್ತೇವೆ ಎಂದರು.
ವಕ್ಫ್ ಮಂಡಳಿಯ ಆಸ್ತಿ ಅದು ದೇವರಿಗೆ ಸೇರಿದ್ದು, ಅದರ ರಕ್ಷಣೆ ನಮ್ಮ ಹೊಣೆಯಾಗಿದೆ, ಬಳ್ಳಾರಿ ನಗರದ ಹಾವಂಭಾವಿಯಲ್ಲಿ ಕೆಲವರು ಒತ್ತುವರಿ ಮಾಡಿದ್ದರು, ಆದರೆ ನಾವು ನ್ಯಾಯಾಲಯದ ಮೊರೆ ಹೋಗಿ ಆಸ್ತಿಯನ್ನು ರಕ್ಷಣೆ ಮಾಡಿದ್ದೇವೆ ಎಂದರು.ವಿಧಾನಸಭೆಯ ಚುನಾವಣೆಯ ವೇಳೆಯೇ ನಮ್ಮನ್ನು ಗೆಲ್ಲಿಸಿ ಸನ್ಮಾಸಿದ್ದೀರಿ ಎಂದ ಶಾಸಕ ನಾರಾ ಭರತ್ ರೆಡ್ಡಿ, ನಾನು ಕಿರಿಯ ವಯಸ್ಸಿನ ವ್ಯಕ್ತಿ, ಚುನಾವಣೆಯ ಸಂದರ್ಭ ನಾನು ಸ್ಪರ್ಧೆಗೆ ಬಂದಾಗ ನನಗೆ ಅವಕಾಶ ನೀಡಿದ್ದೀರಿ ಎಂದರು.ನನ್ನ ತಂದೆ ತಾಯಿಯ ಪುಣ್ಯ, ಅಲ್ಲಾಹನ ಕೃಪೆಯಿಂದಾಗಿ ನಾನು ಶಾಸಕನಾದೆ ಎಂದರು.ಬಳಕ ಮಾತನಾಡಿದ ರಾಜ್ಯಸಭಾ ಸದಸ್ಯ ಡಾ.ಸಯ್ಯದ್ ನಾಸಿರ್ ಹುಸೇನ್; ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ವಿಶೇಷವಾಗಿ ನಗರದ ಎರಡು ಶಾದಿಮಹಲ್’ಗಳಿಗೆ ಅನುದಾನ ಮಂಜೂರು ಮಾಡಿಸಿದ್ದೇವೆ ಎಂದರು.
ನಗರ ಹಾಗೂ ಗ್ರಾಮಾಂತರ ಕ್ಷೇತ್ರಗಳು ಸೇರಿಸಿ ಮುಸ್ಲಿಮರ ಸಂಖ್ಯೆ ದೊಡ್ಡದಿದೆ, ಹೀಗಾಗಿ ಎರಡು ಶಾದಿ ಮಹಲ್’ಗಳ ಅಗತ್ಯ ಇದೆ ಎಂದು ರಾಜ್ಯಸಭಾ ಸದಸ್ಯ ಡಾ.ಸಯ್ಯದ್ ನಾಸಿರ್ ಹುಸೇನ್ ಹೇಳಿದರು.ಈ ಸಂಧರ್ಭದಲ್ಲಿ ಮೇಯರ್ ಮುಲ್ಲಂಗಿ ನಂದೀಶ್, ವಕ್ಫಾ ಬೋರ್ಡ್ ಅಧ್ಯಕ್ಷರು ಹುಮಾಯೂನ್ ಖಾನ್, ಮೆಹದಿ ಮಿಯಾ ಸಾಹೇಬ್, (ಅಜ್ಮೀರ್), ಖಾಜಿ ಗುಲಾಮ್ ಸಿದ್ದಿಕಿ, ಪೀರ್ ಬಾಷಾ ಸಾಹೇಬ್,ಕಣೇಕಲ್ ಸಾಹೇಬ್, ಕರಿಮುದ್ದೀನ್ ಸಾಹೇಬ,ಖಾಜುನ್ ಸಾಹೇಬ್, ಹಾಜಿ ಇಲ್ಯಾಸ್ ಸಾಹೇಬ್, ಭಂ ಭಂ ದಾದಾ ಭಾಯಿ, ಮುರ್ತುಜಾ ಖಾನ್ ಸಾಹೇಬ್, ಹುಸೇನ್ ಪೀರಾ, ಕಣೇಕಲ್ ಮಾಬುಸಾಬ, ನೂರ್ ಅಹ್ಮದ್, ಅಯಾಜ್ ಅಹ್ಮದ್, ಜಬ್ಬಾರ್, ಅಲ್ಲಾಬಕಾಶ್, ಶಿವರಾಜ್, ರಾಮಾಂಜನೇಯ, ಸೈಫುಲ್ಲಾ, ಮೊಹಮ್ಮದ್ ಭಾಯಿ, ಪೆರ್ರಂ ವಿವೇಕ್, ಸ್ಟಾರ್ ರಾಯಲ್ ಫಂಕ್ಷನ್ ಹಾಲ್ ಮಾಲೀಕ ಮೈನು ಭಾಯ್, ಅಸ್ಲಂ ಫರ್ವೇಜ್ ಭಾಯ್, ಅಲ್ಲಾಬಕಾಶ್ (ಮಾಜಿ ಅಧ್ಯಕ್ಷರು, ನಗರಸಭೆ ಚಿತ್ರದುರ್ಗ), ಕೆಎನ್ ಎಂ ಭಿಲಾಷ್, ಲೇಬಲ್ ರಾಜು ಭಾಯ್ (ಶೇಖ್ ಪಾಶಾ) ಮುುಸ್ಲಿಂ ಸಮುದಾಯದ ಹಿರಿಯರು ಹಾಗೂ ಮೊದಲಾದವರು ಹಾಜರಿದ್ದರು.