ಮೊಂಡತನ ಪ್ರದರ್ಶಿಸುತ್ತಿರುವ ಗುತ್ತಿಗೆದಾರ: ಪ್ರತಿಭಟನೆ ರೈತರ ನಿರ್ಧಾರ-ರೈತ ಮುಖಂಡ, ರವೀಂದ್ರಗೌಡ ಎಫ್‌. ಪಾಟೀಲ

Contractor showing stubbornness: decision of protesting farmers-farmer leader, Ravindra Gowda F. Pa

ಮೊಂಡತನ ಪ್ರದರ್ಶಿಸುತ್ತಿರುವ ಗುತ್ತಿಗೆದಾರ: ಪ್ರತಿಭಟನೆ ರೈತರ ನಿರ್ಧಾರ-ರೈತ ಮುಖಂಡ, ರವೀಂದ್ರಗೌಡ ಎಫ್‌. ಪಾಟೀಲ  

ರಾಣೇಬೆನ್ನೂರು 20: ತಾಲೂಕಿನ ಇಟಗಿ-ಹಲಗೇರಿ (ಹರಿಹರ-ಸಮ್ಮಸಗಿ) ರಾಜ್ಯ ಹೆದ್ದಾರಿಯ ಆವಾಂತರ ಮುಗಿಯದೆ ಇದ್ದುದ್ದರಿಂದ ಗುತ್ತಿಗೆದಾರ ಕೆಲಸ ಪ್ರಾರಂಭಿಸದೆ ಮೊಂಡುತನ ಪ್ರದರ್ಶಿಸುತ್ತಿದ್ದು ಈ ಬಗ್ಗೆ ಲೋಕಾಯುಕ್ತರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗದೆ ಇರುವುದರಿಂದ ಇಲ್ಲಿ ದಿನನಿತ್ಯ ಹತ್ತಾರು ರಸ್ತೆ ಅಪಘಾತಗಳಾಗುತ್ತಿವೆ. ಜಿಲ್ಲಾಡಳಿತ ಮೌನ ಮುರಿದು ಗುತ್ತಿಗೆದಾರ ಸಿ.ಡಿ. ಹಾವೇರಿಗೆ ಚಾಟಿ ಬೀಸದಿದ್ದರೆ ಹಾವೇರಿ ಹೊರವಲಯದಲ್ಲಿರುವ ಗುತ್ತಿಗೆದಾರನ ಶಿಕ್ಷಣ ಸಂಸ್ಥೆಯ ಮುಂದೆ ಪ್ರತಿಭಟನೆ ನಡೆಸಿ ಆತನ ಕರ್ಮಕಾಂಡವನ್ನು ಬಯಲಿಗೆಳೆಯಲು ನಿರ್ಧರಿಸಲಾಗಿದೆ ಎಂದು ರೈತ ಮುಖಂಡ ರವೀಂದ್ರಗೌಡ ಎಫ್‌. ಪಾಟೀಲ ಹೇಳಿದರು.  

   ಅವರು ಈ ಬಗ್ಗೆ ಜಿಲ್ಲಾಡಳಿತ, ಪಿ.ಡಬ್ಲು.ಡಿ. ಇಲಾಖೆಯ ಗಮನಕ್ಕೆ ತಂದು ಇನ್ನು ಮೇಲಾದರೂ ಜಿಲ್ಲಾಡಳಿತ ಮೌನ ಮುರಿದು ರಸ್ತೆ ಕಾಮಗಾರಿ ಪ್ರಾರಂಭಿಸಿ ಗುತ್ತಿಗೆದಾರ ಸಿ.ಡಿ. ಹಾವೇರಿಗೆ ಕಾನೂನಿನ ರುಚಿ ತೋರಿಸಬೇಕೆಂದು ರಸ್ತೆ ಅಪಘಾತ ನಡೆದ ಸ್ಥಳದಲ್ಲಿ ನಿಂತು ಪ್ರತಿಭಟನೆಗೆ ಸಂಬಂಧಿಸಿದವರಿಗೆ ಒತ್ತಾಯಿಸಿದ್ದಾರೆ.