ಸಾಧನೆಗೆ ಸತತ ಅಧ್ಯಯನ ಅಗತ್ಯ - ಕೆ ದ್ಯಾಮಜ್ಜ
Continuous study is necessary for success - K. Dyamajja
ಲೋಕದರ್ಶನ ವರದಿ
ಹೂವಿನ ಹಡಗಲಿ 05: ಸಾಧನೆಗೆ ಸತತ ಅಧ್ಯಯನ ಅಗತ್ಯ ಎಂದು ನಿವೃತ್ತ ಉಪನ್ಯಾಸಕ ಕೆ ದ್ಯಾಮಜ್ಜ ಅಭಿಮತ ವ್ಯಕ್ತಪಡಿಸಿದರು.ಪಟ್ಟಣದ ತುಂಗಭದ್ರಾ ಪ್ರೌಢಶಾಲೆಯಲ್ಲಿ ಮಂಗಳವಾರ ಸರಸ್ವತಿ ಪೂಜೆ ಹಾಗೂ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.ಸಾಧಕರಿಗೆ ಕನಸು ಇರಬೇಕು. ಗುರಿ ಮುಟ್ಟುವ ತನಕ ನಿರಂತರವಾಗಿ ಅಭ್ಯಾಸ ನಡೆಸಿರಿ. ಪರೀಕ್ಷೆಗೆ ಉಳಿದ ದಿನಗಳಲ್ಲಿ ಹೆಚ್ಚಿನ ಪುನರಾವರ್ತನೆ ಮಾಡಬೇಕು ಎಂದರು.
ಶಿಕ್ಷಣ ಸಂಯೋಜಕ ವೀರೇಶ್ ಬಗಲಿ ಮಾತನಾಡಿಸೃಜನಾತ್ಮಕ ಕಲಿಕೆಗೆ ಪೂರಕವಾದ ವಾತಾವರಣ ಶಾಲೆಯಲ್ಲಿ ಇದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ ಎಂ ಧರ್ಮಣ್ಣ ಮಾತನಾಡಿಈ ವರ್ಷದ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ಶಿಕ್ಷಕರು ಹೆಚ್ಚಿನ ಮುತುವರ್ಜಿ ವಹಿಸಬೇಕು.
ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದರು.ತುಂಗಭದ್ರಾ ವಿದ್ಯಾ ಸಂಸ್ಥೆಯ ಉಪಾಧ್ಯಕ್ಷ ಸೊಪ್ಪಿನ ಮಂಜುನಾಥ, ನಿರ್ದೇಶಕ ಗುರುವಿನ ರವೀಂದ್ರ ಇದ್ದರು.2024-25 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆದು ಸಾಧನೆಗೈದ ಸಾಧಕರಾದ ಈ ಟಿ ಸುನೀಲ್ ಕುಮಾರ್ ಕೆ ಕುಸುಮ ಆರ್ ಯಶಸ್ವಿನಿ ರೇಖಾ ಮಂಜಪ್ಪ ಈ ಟಿ ಎಚ್ ಪ್ರಿಯಾಂಕ, ಭಗವಂತಪ್ಪ ಬಸಪ್ಪ ಮೇಟಿ ರವರಿಗೆ ಗೌರವ ಸನ್ಮಾನ ನೆರೆವೇರಿಸಲಾಯಿತು.2025-26 ನೇ ಸಾಲಿನ ಎಸ್ಸೆಸ್ಸೆಲ್ಸಿ ಬ್ಯಾಚ್ ನ ಅತ್ಯುತ್ತಮ ವಿದ್ಯಾರ್ಥಿಗಳಾದ ಹಡಪದ ದಿಗಂತ್ ಹಾಗೂ ಗೊರವರ ಅಕ್ಷತಾ ರವರಿಗೆ ಅಭಿನಂದಿಸಲಾಯಿತು.
ಸಿರಿ ಕನ್ನಡ ಪರೀಕ್ಷೆ, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ಹತ್ತನೇ ತರಗತಿ ವರ್ಗ ಶಿಕ್ಷಕರಾದ ಆನಂದ್ ಬಸಪ್ಪ ಕೆ, ದ್ವಾರಕೀಶ್ ರೆಡ್ಡಿ ಎಸ್ ಸ್ವಾಮಿನಾಥ ರಾಮಸ್ವಾಮಿಲಂಬಾಣಿ ಗಿಡ್ಡಾನಾಯ್ಕ್ಜಯಮ್ಮ ವೈ ಪ್ರತಿಮಾ ಎನ್ ಗೀತಾ ಪಿ ಎಂ ರೇಖಾ ಎಸ್ ಸಂಗಮೇಶ ಸುಂಕದ ಪ್ರಸಾದ್ ಸಂತೋಷ ಕುಮಾರ್, ರಾಕೇಶ್ ಕುಮಾರ್ ಇತರರು ಇದ್ದರು.ಕೆ ತಬಸುಮ್, ಭಾರತಿ ಅಡವಳ್ಳಿಮಠ, ಅಶ್ವಿನಿ ಇರಕಲ್ ನಿರ್ವಹಿಸಿದರು.ನಂತರ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 