ಧಾರವಾಡ 24: ಧಾರವಾಡ ವಿಧಾನಸಭಾ ಕ್ಷೇತ್ರ-71ರ ಬಿಜೆಪಿ ಶಾಸಕರು ಹಾಗೂ ಗರಗ ಮಡಿವಾಳೇಶ್ವರ ಮಠದ ಟ್ರಸ್ಟಿಯೂ ಆಗಿರುವ ಅಮೃತ ದೇಸಾಯಿ ಅವರ ಸುಕ್ಷೇತ್ರ ಗರಗದಿಂದ ಉಳವಿಯವರೆಗಿನ ಎರಡನೇ ದಿನದ ಪಾದಯಾತ್ರೆಯೂ ಶುಕ್ರವಾರ ಬೆಳಗ್ಗೆ ನಿಗದಿಯಿಂದ ಮುಂದುವರೆಯಿತು.
ಎರಡನೇ ದಿನವೂ ಧಾರವಾಡ ತಾಲೂಕಿನ ನೂರಾರು ಹಳ್ಳಿಯ ಸಾವಿರಾರು ಜನರೂ ಪಾದಯಾತ್ರೆಗೆ ಸೇರ್ಪಡೆಗೊಂಡರು. ಜನರ ಉತ್ಸಾಹವೂ ಕುಗ್ಗದಿರುವುದು ಕಂಡು ಬಂದಿದ್ದು ವಿಶೇಷವಾಗಿತ್ತು.
ಶಾಸಕ ಅಮೃತ ದೇಸಾಯಿ, ಗರಗ ಮಡಿವಾಳೇಶ್ವರ ಮಠದ ಚನ್ನಬಸವೇಶ್ವರ ಸ್ವಾಮೀಜಿ ಅವರ ಆಶಯದಂತೆ ಪ್ರತಿ ವರ್ಷವೂ ಸಕಲ ಸದ್ಭಕ್ತರು ಪಾದಯಾತ್ರೆ ನಡೆಸಲು ಸಂಕಲ್ಪ ಮಾಡಿದ ಹಿನ್ನಲೆಯಲ್ಲಿ ಪಾದಯಾತ್ರೆ ಆರಂಭಿಸಲಾಗಿದೆ. ಮೊದಲ ದಿನದ ಪಾದಯಾತ್ರೆಯೂ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ನಿರೀಕ್ಷಿತ ಸಮಯಕ್ಕಿಂತ ಮುಂಚಿತವಾಗಿಯೇ ಸಂಚರಿಸುತ್ತಿದ್ದು, ಎಲ್ಲ ಸದ್ಭಕ್ತರು ಉತ್ಸಾಹದಿಂದ ಪಾದಯಾತ್ರೆಯಲ್ಲಿ ಪಾಲ್ಗೊಂಡಿರುವುದು ಸಂತಸ ತಂದಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಯುವಕರು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರುವುದು ಸಂತಸ ತಂದಿದೆ ಎಂದರು.
ಹಳ್ಳಿಗೇರಿ ಗ್ರಾಮಸ್ಥರು ಶಾಸಕರಿಗೆ ಹೃದಯ ಸ್ಪಶರ್ಿ ಸ್ವಾಗತ ನೀಡಿ ಸನ್ಮಾನಿಸಿ ಗೌರವಿಸಿದರು.
ಎರಡನೇ ದಿನವೂ ದಾಂಡೇಲಿ ಸಮೀಪದ ಕರ್ಕ ನೀರಿನ ಟ್ಯಾಂಕ್ ಬಳಿ ವಾಸ್ತವ್ಯ ಹೂಡಲಾಗಿತ್ತು.
ಪತ್ನಿ ಪ್ರೀಯಾ, ಬಿಜೆಪಿ ಮುಖಂಡರಾದ ಗುರುನಾಥಗೌಡ ಗೌಡರ, ಶರಣು ಅಂಗಡಿ, ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಮಹೇಶ ಯಲಿಗಾರ, ಶಿವಾನಂದ ಉಳ್ಳವಣ್ಣನವರ, ವಿಜಯ ಮೇಘಣ್ಣವರ, ಆನಂದಗೌಡ ಪಾಟೀಲ, ದಯಾನಂದ ಗೌಡ ಪಾಟೀಲ, ಮಡಿವಾಳಪ್ಪ ಮಾಳಾಪೂರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.