ಬೇಸಿಗೆ ಬರುವುದಕ್ಕಿಂತ ಮುಂಚಿತವಾಗಿ ನೀರಿನ ಆಹಾಕಾರ ನೀರ್ಮಾಣ
ಸಂಬರಗಿ 03 : ಕೃಷ್ಣಾ ನದಿಯಲ್ಲಿ 4.7 ಟಿ.ಎಸ್.ಸಿ ನೀರು ಇದ್ದರು ಸಹ ಗಡಿ ಭಾಗದ 17 ಗ್ರಾಮಕ್ಕೆ ಮಲ್ಟಿವಿಲ್ಹೆಜ್ ನೀರು ಸರಿಯಾಗಿ ಸರಬರಾಜು ಆಗುತ್ತಿಲ್ಲ. ಬೇಸಿಗೆ ಬರುವುದಕ್ಕಿಂತ ಮುಂಚಿತವಾಗಿ ನೀರಿನ ಆಹಾಕಾರ ನೀರ್ಮಾಣವಾಗಿದೆ. ತೋಟದ ವಸತಿಗಳಿಗೆ ನೀರಿನ ಆಹಾಕಾರ ಎದ್ದಿದೆ. ಗಡಿ ಭಾಗದ ರೈತರು ನೀರಿನ ಸಮಸ್ಯೆಯ ಕುರಿತು ಆಕ್ರೋಷ ವ್ಯಕ್ತ ಪಡಿಸುತ್ತಿದ್ದಾರೆ.ನೀರಿನ ಸರಬರಾಜು ಇಲಾಖೆಯ ವತಿಯಿಂದ ಮಲ್ಟಿವಿಲ್ಹೆಜ್ ಕುಡಿಯುವ ನೀರು ಸರಬರಾಜ ಮುಖ್ಯ ಸ್ಥಳ ಇದ್ದು, ಅಲ್ಲಿಂದ 17 ಗ್ರಾಮಕ್ಕೆ ದಿನನಿತ್ಯ ನೀರು ಸರಬರಾಜು ಆಗುತ್ತದೆ. ಆದರೆ ನೀರು ಸರಬರಾಜು ಆಗುವ ಪೈಪ್‌ಲೈನ್ ಹಲವಾರು ಜಾಗಗಳಲ್ಲಿ ಲಿಕಿಜ್ ಆದ ಕಾರಣ ವಾರದಲ್ಲಿ ಒಂದು ದಿನ ಕೂಡ ಸರಿಯಾಗಿ ಬರುತ್ತಿಲ್ಲ. ಮಲ್ಟಿವಿಲ್ಹೆಜ್ ನೀರು ಸರಬಜಾರು ಇಲಾಖೆ ನಿಯಂತ್ರಣದಲ್ಲಿ ಮದಭಾವಿ, ವಿಷ್ಟುವಾಡಿ, ಅರಳಿಹಟ್ಟಿ, ಜಕ್ಕಾರಟ್ಟಿ, ತೆವರಟ್ಟಿ, ಜಂಬಗಿ, ಸಂಬರಗಿ, ಶಿರೂರ, ಪಾಂಡೆಗಾಂವ, ಖಿಳೆಗಾಂವ, ಚಂದ್ರಾಪ್ಪವಾಡಿ, ಆಜೂರ, ತಾಂವಶಿ, ನಾಗನೂರ ಪಿ.ಎ, ಕಲ್ಲೊತ್ತಿ, ಶಿವನೂರ, ಬಮ್ಮನಾಳ ಈ ಗ್ರಾಮಗಳಿಗೆ ನೀರು ಸರಬರಾಜು ಮಾಡುವ ಆದೇಶ ಇದ್ದು, ಜಕ್ಕಾರಟ್ಟಿ ಹಾಗೂ ಅರಳಿಹಟ್ಟಿಯಲ್ಲಿ ನೀರು ಬಿಡುವ ಕಾರ್ಮಿಕರು ತಮ್ಮ ಟ್ಯಾಂಕ್ ಓವರ್‌ಫುಲ್ ಆದರು ಸಹ ಸ್ಥಗಿತಗೊಳಿಸುತ್ತಿಲ್ಲ. ನೀರು ಹೆಚ್ಚಾಗಿ ಟ್ಯಾಂಕ್ ಸುತ್ತ ಮುತ್ತ ಇರುವ ತೋಟ ಜಮೀನಿಗೆ ಹೋಗುತ್ತಿವೆ. ಅಲ್ಲಿನ ಗ್ರಾಮ ಪಂಚಾಯತಿಯಲ್ಲಿ ಕೆಲಸ ಮಾಡುವ ಕಾರ್ಮಿಕರು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಆ ಕಾರಣ ನೀರನ್ನು ಪ್ರತಿ ಗ್ರಾಮಕ್ಕೆ ತಲುಪಲು ಅಸಾಧ್ಯವಾಗಿದೆ. ಕೃಷ್ಣಾ ನದಿಯಲ್ಲಿ ನೀರಿದ್ದರು ಸಹ ಗಡಿ ಭಾಗದ ಗ್ರಾಮಗಳಿಗೆ ಬೇಸಿಗೆ ಬರುವುದಕ್ಕಿಂತ ಮುಂಚಿತವಾಗಿಯೆ ನೀರಿನ ಆಹಾಕಾರ ಎದ್ದು ಕಾಣುತ್ತಿದೆ.ನೀರಿನ ಸಮಸ್ಯೆಯ ಕುರಿತು ತಾಲೂಕಾ ಆಡಳಿತ ಹಲವಾರು ಬಾರಿ ಸಭೆ ತೆಗೆದುಕೊಂಡ ನೀರಾವರಿ ಅಧಿಕಾರಿಗಳಿಗೆ ಸೂಚನೆ ನೀಡಿದರು ಸಹ ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲಿನ ಕಾರ್ಮಿಕರು ಬೇಜವಾಬ್ದಾರಿಯ ಕೆಲಸ ಮಾಡಿರುವ ಕಾರಣ ಮುಂದಿನ ಗ್ರಾಮಕ್ಕೆ ನೀರು ಹೋಗುತ್ತಿಲ್ಲ. ಸಂಬಂಧ ಪಟ್ಟ ಅಧಿಕಾರಿಗಳು ಗಮನ ಹರಿಸಿ ಸರಿಯಾಗಿ ನೀರು ಸರಬರಾಜು ಮಾಡಬೇಕೆಂದು ಈ ಭಾಗದ ಜನರು ಆಗ್ರಹಿಸಿದ್ದಾರೆ.
ನೀರು ಸರಬರಾಜು ಇಲಾಖೆಯ ತಾಲೂಕಾ ಅಧಿಕಾರಿಯಾದ ರವಿಂದ್ರ ಮೂರಗಾಲಿ ಇವರನ್ನು ಸಂಪರ್ಕಿಸಿದಾಗ ಕೃಷ್ಣಾ ನದಿಯಲ್ಲಿ ನೀರು 4.7 ಟಿ.ಎಮ್.ಸಿ ಇದ್ದು, ಮೇ.15ರ ವರೆಗೆ ನೀರಿನ ಕೊರತೆ ಆಗುವದಿಲ್ಲ. ನೀರು ಸರಬರಾಜು ಮಾಡುವಲ್ಲಿ ಏನಾದರೂ ಪೈಲ್ ಲಿಕಿಸ್ ಆಗಿದ್ದರೆ, ಅದನ್ನು ಪರೀಶೀಲಣೆ ಮಾಡಿ ಎಲ್ಲ ಗ್ರಾಮಕ್ಕೆ ಸರಿಯಾಗಿ ನೀರು ಸರಬರಾಜು ಮಾಡಲಾಗುವುದೆಂದು ಹೇಳಿದರು.