ಸಚಿವ ಎಚ್ ಕೆ ಪಾಟೀಲರಿಂದ ಗದಗ ಬೆಟಗೇರಿ ಅವಳಿ ನಗರದ ವಿವಿಧ ಸಮಾಜದ ಸಮುದಾಯ ಭವನ ನಿರ್ಮಾಣ

Construction of community hall of different society of Gadag Betageri twin city by Minister HK Pati

ಸಚಿವ ಎಚ್ ಕೆ ಪಾಟೀಲರಿಂದ ಗದಗ ಬೆಟಗೇರಿ ಅವಳಿ ನಗರದ ವಿವಿಧ ಸಮಾಜದ ಸಮುದಾಯ ಭವನ ನಿರ್ಮಾಣ   

ಗದಗ 20:  ಅವಳಿ ನಗರವಾದ ಗದಗ ಬೆಟಗೇರಿ ನಗರಸಭೆಯ ವ್ಯಾಪ್ತಿಯಲ್ಲಿ ಬರುವ 35 ವಾರ್ಡುಗಳಲ್ಲಿಯೂ ರಹವಾಸಿಯಾಗಿರುವ ವಿವಿಧ ಸಮಾಜ ಭಾಂದವರ ಸಮುದಾಯ ಭವನ ಅಂದರೆ ಕಲ್ಯಾಣ ಮಂಟಪಗಳ ನಿರ್ಮಾಣ ಕಾಮಗಾರಿಗಾಗಿಯೇ ಎಂದು ವಿಶೇಷವಾಗಿ ಸರಕಾರಿ ಅನುದಾನವನ್ನು ಒದಗಿಸುವ ಮೂಲಕ ಜನಸ್ಪಂಧನೆಯನ್ನು ಮೆರೆಯುವುದರಮೂಲಕ ಸನ್ಮಾನ್ಯ ಕಾನೂನು, ನ್ಯಾಯ, ಮಾನವ ಹಕ್ಕುಗಳ ಸಂಸದೀಯ ವ್ಯೆವಹಾರಗಳ ಶಾಸನ ರಚನೆ ಹಾಗೂ ಪ್ರವಾಸೋಧ್ಯೇಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಡಾ. ಎಚ್ ಕೆ ಪಾಟೀಲ್ ಸಾಹೇಬರು ಜನಸ್ಪಂಧನೆಯನ್ನು ಮೆರೆದಿರುತ್ತಾರೆ ಎಂದು ನ್ಯಾಯವಾದಿ ಹಾಗೂ ಸಾಮಾಜಿಕ ಕಾರ್ಯಕರ್ತರಾದ ರಾಘವೇಂದ್ರ ಪಾಲನಕರ ಸಂತಸವನ್ನು ವ್ಯಕ್ತಪಡಿಸಿರುತ್ತಾರೆ. ಆ ಮೂಲಕ ಅವಳಿ ನಗರವಾದ ಗದಗ ಬೆಟಗೇರಿಯ ವಿವಿಧ  ಸಮಾಜದ ಸಮುದಾಯಗಳಾದ ಕಿತ್ತೂರು ರಾಣಿ ಚೆನ್ನಮ್ಮ ಸಮುದಾಯ ಭವನ,  ಕರ್ನಾಟಕ ರಾಜ್ಯ ಬಣಜಿಗ ಸಮಾಜ, ನಿಜಶರಣ ಅಂಬಿಗರ ಶರಣಯ್ಯ ವಿವಿಧೋದ್ದೇಶಗಳ ಸೇವಾ ಟ್ರಸ್ಟ್‌, ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘ, ವೀರಘಂಟಿ ಮಡಿವಾಳ ಮಾಚಿದೇವರ ಕ್ಷೇಮಾಭಿವೃದ್ಧಿ ಸಂಘ, ಸ್ವಕುಳಸಾಳಿ ಸಮಾಜ,   ಶಂಕರ ಶಿವಾಚಾರ್ಯ ಕುರುವಿನಶೆಟ್ಟಿ ಸಮುದಾಯ ಭವನ, ಸೋಮವಂಶಿ ಸಹಸ್ರಾರ್ಜುನ ಕ್ಷತ್ರಿಯ ಸಮಾಜ ಪಂಚ ಟ್ರಸ್ಟ್‌,   ಬಾಲಾಜಿದೇವ,   ಹನುಮಂತದೇವ,   ದುರ್ಗಾದೇವಿ ಧರ್ಮಶಾಲಾ ಟ್ರಸ್ಟ್‌,   ಸೂರ್ಯವಂಶಿ ಕ್ಷತ್ರಿಯ ಕಲಾಲ ಕಾಟಿಕ್ ಸಮಾಜ,   ಚೌಡೇಶ್ವರಿ ದೇವಿ ಟ್ರಸ್ಟ್‌,    ಮಾಕಾಂರ್ಡೇಶ್ವರ ದೇವಸ್ಥಾನ ಪದ್ಮಶಾಲಿ ಸಮಾಜ, ದೈವಜ್ಞ ಸಮಾಜೋನ್ನತಿ ಸಂಘ, ಮರಾಠಾ ವಿದ್ಯಾವರ್ಧಕ ಸಂಘ,   ಹಳೇ ಬನಶಂಕರಿ ದೇವಿ ಟ್ರಸ್ಟ್‌, ಕುಂಬಾರ ಸಮಾಜ ಸೇವಾಭಿವೃದ್ಧಿ ಟ್ರಸ್ಟ್‌,   ವೀರಶೈವ ಶಿವಶಿಂಪಿ ಟ್ರಸ್ಟ್‌ ಮುಂತಾದ ಸಮಾಜಗಳ ಸಮುದಾಯ ಭವನ ನಿರ್ಮಾಣಕ್ಕಾಗಿ  ಇದೇ ದಿನಾಂಕ 19 ರಂದು ಗದಗ ಕಾಟನ್ ಸೇಲ್ ಸೊಸೈಟಿಯಲ್ಲಿರುವ ಜಿಲ್ಲಾ ಕಾಂಗ್ರೇಸ್ ಕಚೇರಿಯಲ್ಲಿ ಸಮಾಜದ ಹಿರಿಯರಿಗೆ ವ ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ ಸರ್ಕಾರಿ ಅನುದಾನದ ಆದೇಶಪತ್ರವನ್ನು ವಿತರಿಸುವ ಮೂಲಕ ಕಾಂಗ್ರೇಸ್ ಪಕ್ಷವು ಎಲ್ಲಾ ಸಮಾಜದ ಭಾಂದವರ ಸಾಮಾಜಿಕ, ಆರ್ಥಿಕ, ಸೈಕ್ಷಣಿಕ ಮತ್ತು ನೈತಿಕ ಶ್ರೇಯೋಭಿವೃದ್ಧಿಗಾಗಿ ನೆರವಿನ ಸಹಾಯ ಹಸ್ತ ನೀಡುವುದರಲ್ಲಿ ಸದಾ ಮುಂಚುಣಿಯಲ್ಲಿರುತ್ತದೆ ನಮ್ಮ ಕಾಂಗ್ರೇಸ್ ಸರಕಾರ ಯಾವಾಗಲೂ ನುಡಿದಂತೆ ನಡೆಯುವ ಸರಕಾರ ಎಂದು ಸಚಿವರಾದ ಡಾಽಽ ಎಚ್ ಕೆ ಪಾಟೀಲ್ ಸಾಹೇಬರು ವಿವಿಧ ಸಮಾಜ ಭಾಂದವರಲ್ಲಿ ತಮ್ಮ ಇಂಗಿತವನ್ನು ವ್ಯಕ್ತಪಡಿಸಿದರು. ಅ ಮೂಲಕ  ಅವಳಿ ನಗರವಾದ ಗದಗ ಬೆಟಗೇರಿ ನಗರಸಭೆಯ ವ್ಯಾಪ್ತಿಯಲ್ಲಿ ಬರುವ ನಗರದ ನಿವಾಸಿಗಳ ನೆರವಿಗೆ ಘನವ್ಯೆತ್ ಕಾಂಗ್ರೇಸ್ ಸರಕಾರದ ನೇತ್ರತ್ವದಲ್ಲಿ ಸನ್ಮಾನ್ಯ ಡಾ. ಎಚ್ ಕೆ ಪಾಟೀಲ್ ಸಾಹೇಬರು ಸಮಸ್ತ ನಾಗರಿಕರ ಸಾಮಾಜಿಕ ಶ್ರೇಯೋಭಿವೃದ್ಧಿಗಾಗಿ ನೆರವುದಾಯಕವಾಗಲು ಮುಂದಾಗಿರುವದು ಸಮಸ್ತ ನಾಗರಿಕರಿಗೆ ಸಂತಸದ ಸಂಗತಿಯಾಗಿರುತ್ತದೆ ಎಂದು ನ್ಯಾಯವಾದಿ ಹಾಗೂ ಸಾಮಾಜಿಕ ಕಾರ್ಯಕರ್ತರಾದ ರಾಘವೇಂದ್ರ ಪಾಲನಕರ ಜನಸ್ಪಂಧನೆಯನ್ನು ವ್ಯಕ್ತಪಡಿಸಿರುತ್ತಾರೆ.