ಚಿತ್ತಾಕುಲ, ಅಂಬೇವಾಡಿ, ಹೆಗಡೆ ಗ್ರಾಮಗಳಲ್ಲಿ ಚೆಸ್ ಪಾರ್ಕ ನಿರ್ಮಾಣಕ್ಕೆ ಚಾಲನೆ
ಕಾರವಾರ 16: ಚಾಣಾಕ್ಷರ ಆಟ ಚೆ???? ಕ್ರೀಡೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿ ವತಿಯಿಂದ ಜಿಲ್ಲೆಯ ಮೂರು ಕಡೆಗಳಲ್ಲಿ ಚೆಸ್ ಪಾರ್ಕ್ ಸ್ಥಾಪಿಸಲಾಗುತ್ತಿದ್ದು, ಕಾಮಗಾರಿ ಪೂರ್ಣಗೊಳ್ಳುವ ಹಂತ ತಲುಪಿದೆ.ಮಕ್ಕಳಿಂದ ವಯೋವೃದ್ಧರವರೆಗಿನವರಿಗೂ ಚೆಸ್ ಆಡಲು ಅನುಕೂಲವಾಗುವಂತೆ ಅಗತ್ಯ ವ್ಯವಸ್ಥೆಗಳೊಂದಿಗೆ ಆಕರ್ಷಕ ಉದ್ಯಾನ ರೂಪುಗೊಳ್ಳುತ್ತಿದೆ. ಕಾರವಾರ ತಾಲ್ಲೂಕಿನ ಚಿತ್ತಾಕುಲ, ಕುಮಟಾ ತಾಲ್ಲೂಕಿನ ಹೆಗಡೆ ಮತ್ತು ದಾಂಡೇಲಿ ತಾಲ್ಲೂಕಿನ ಅಂಬೇವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಚೆಸ್ ಪಾರ್ಕ್ ಸ್ಥಾಪನೆಗೊಳ್ಳುತ್ತಿದೆ.ವಿಶ್ವಶ್ರೇಷ್ಠ ಚೆಸ್ ಆಟಗಾರರ ಉತ್ಸಾಹಿ ಮಾತುಗಳು ಮತ್ತು ಚೆಸ್ ಕುರಿತ ಕುತೂಹಲಕಾರಿ ಅಂಶಗಳನ್ನು ಆವರಣಗೋಡೆಯ ಮೇಲೆ, ತೆರೆದ ಉದ್ಯಾನದಲ್ಲಿ ಅಲ್ಲಲ್ಲಿ ಚೆಸ್ ಬೋ?????ಗಳನ್ನು ಅಳವಡಿಸಲಾಗುತ್ತದೆ. ಉದ್ಯಾನದ ಒಂದು ಬದಿಯಲ್ಲಿ ವೇದಿಕೆಯನ್ನೂ ನಿರ್ಮಿಸಲಾಗುತ್ತಿದ್ದು, ಚೆಸ್ ತರಬೇತಿಗೆ ವ್ಯವಸ್ಥೆ ಮಾಡಿಕೊಡಲಾಗುತ್ತಿದೆ.ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಮಾತ್ರ ಚೆಸ್ ತರಬೇತಿ ಸಂಸ್ಥೆಗಳಿದ್ದು, ಕರಾವಳಿ ಭಾಗ ಮತ್ತು ಉಳಿದೆಡೆ ಅಂತಹ ವ್ಯವಸ್ಥೆ ಇಲ್ಲದಿರುವುದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಅವರಗಮನಕ್ಕೆ ಬಂದಿತ್ತು. ಚೆಸ್ ಕುರಿತು ಮಕ್ಕಳಲ್ಲಿ ಮತ್ತು ಜನಸಾಮಾನ್ಯರಲ್ಲಿ ಆಸಕ್ತಿ ಹೆಚ್ಚಿಸಲು ಮತ್ತು ತರಬೇತಿ ನೀಡಲು ಅನುಕೂಲವಾಗುವಂತೆ ಚೆಸ್ ಪಾರ್ಕ್ ನಿರ್ಮಿಸುವ ಯೋಚನೆ ಬಂತು ಎಂದು ಚೆಸ್ ಉದ್ಯಾನವನ ಯೋಜನೆಯ ರೂವಾರಿಯಾಗಿರುವ, ಜಿಲ್ಲಾ ಪಂಚಾಯಿತಿ ಸಿಇಒ ಈಶ್ವರ ಕಾಂದೂ ಪತ್ರಿಕೆಗೆ ಮಾಹಿತಿ ನೀಡಿದರು.ಚೆಸ್ ಪಾ?????ನ್ನು ನಗರಕ್ಕೆ ಹೊಂದಿಕೊಂಡಿರುವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಿಸುವ ಮೂಲಕ ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜತೆಗೆ ,ನಗರ ವ್ಯಾಪ್ತಿಯ ಜನರಿಗೂ ಅನುಕೂಲ ಮಾಡಿಕೊಡಲಾಗುತ್ತಿದೆ. ಪ್ರತಿ ಉದ್ಯಾನದಲ್ಲಿ ಸರಾಸರಿ 15 ರಿಂದ 20 ಟೇಬಲ್ ಅಳವಡಿಸಲಾಗುತ್ತಿದೆ. ಪ್ರತಿ ಟೇಬ???ಗೆ ತಲಾ ಒಂದು ಚೆಸ್ ಬೋರ್ಡ್ ನೀಡಲಾಗುತ್ತದೆ. ದಿನದ ಯಾವುದೇ ಸಮಯದಲ್ಲಿ ಸಾರ್ವಜನಿಕರು ಚೆಸ್ ಆಡಲು ಅವಕಾಶ ಮಾಡಿಕೊಡಲಾಗುತ್ತದೆ ಎಂದರು.ಚೆಸ್ ಆಡುವುದರಿಂದ ಬುದ್ಧಿಮತ್ತೆ ವೃದ್ಧಿಸುವ ಜೊತೆಗೆ ನೆನಪಿನ ಶಕ್ತಿ ಹೆಚ್ಚುತ್ತದೆ. ಚೆಸ್ ಕ್ರೀಡೆಯಲ್ಲಿ ಜಿಲ್ಲೆಯ ವಿದ್ಯಾರ್ಥಿಗಳು ಸಾಧನೆ ಮಾಡಲು ಅನುಕೂಲವಾಗಲಿ ಎಂಬ ಉದ್ದೇಶಕ್ಕೆ ಯೋಜನೆ ರೂಪಿಸಲಾಗಿದೆ ಎಂದು ಜಿ.ಪಂ . ಸಿಇಒ ವಿವರಿಸಿದರು.ಕೋಟ್ ....ಚೆಸ್ ಪಾ?????ನಲ್ಲಿ ಕೇವಲ ಚೆಸ್ ಆಡಲು ಮಾತ್ರ ಅಲ್ಲ. ಚೆಸ್ ಆಸಕ್ತಿ ಹೊಂದಿರುವವರಿಗೆ ಉನ್ನತ ತರಬೇತಿ ಒದಗಿಸಲು ವ್ಯವಸ್ಥೆ ಕಲ್ಪಿಸಲಾಗುವುದು. ಚೆಸ್ ಗೊತ್ತಿಲ್ಲದವರಿಗೂ ಕಲಿಸಲು ತರಬೇತುದಾರರು ಇರಲಿದ್ದಾರೆ. ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಥವಾ ಆಯಾ ತಾಲ್ಲೂಕಿನಲ್ಲಿರುವ ನುರಿತ ಚೆಸ್ ಪಟುಗಳು ತರಬೇತಿಗೆ ಮುಂದೆ ಬಂದರೆ ಅವರಿಗೆ ಅವಕಾಶ ಮಾಡಿಕೊಡಲಾಗುವುದು. ಸ್ಥಳೀಯ ಗ್ರಾಮ ಪಂಚಾಯಿತಿ ವತಿಯಿಂದ ಚೆಸ್ ಪಾರ್ಕ್ ನಿರ್ವಹಣೆಯಾಗಲಿದ್ದು, ಕಾಲ ಕಾಲಕ್ಕೆ ಚೆಸ್ ಪಂದ್ಯಾವಳಿ ಆಯೋಜಿಸಲಾಗುತ್ತದೆ .