ಶೀಘ್ರದಲ್ಲಿ ಚಿಕ್ಕೋಡಿ ನಗರದಲ್ಲಿ ಕನಕ ಭವನ ನಿರ್ಮಾಣ: ಹುಕ್ಕೇರಿ


ಶೀಘ್ರದಲ್ಲಿ ಚಿಕ್ಕೋಡಿ ನಗರದಲ್ಲಿ ಕನಕ ಭವನ ನಿರ್ಮಾಣ: ಹುಕ್ಕೇರಿ 

ಚಿಕ್ಕೋಡಿ 18: ತಾಲೂಕಿನಲ್ಲಿ ಹಾಲುಮತ ಸಮಾಜ ಬಾಂಧವರಿಗೆ ಅನುಕೂಲದ ದೃಷ್ಠಿಯಿಂದ ಚಿಕ್ಕೋಡಿ ನಗರದಲ್ಲಿ ಹೈಟಿಕ್ ಕನಕ ಭವನ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ. ಶೀಘ್ರದಲ್ಲಿ ಕನಕ ಭವನ ನಿರ್ಮಾಣ ಮಾಡಲಾಗುತ್ತದೆ ಎಂದು ಕರ್ನಾಟಕ ದೆಹಲಿ ಪ್ರತಿನಿಧಿ ಹಾಗೂ ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಹೇಳಿದರು. 

ಚಿಕ್ಕೋಡಿ ಪಟ್ಟಣದ ಐಎಮ್‌ಎ ಸಭಾಭವನದಲ್ಲಿ ತಾಲೂಕಾ ಆಡಳಿತದಿಂದ ಹಮ್ಮಿಕೊಂಡ ಸಂತ ಶ್ರೇಷ್ಠ ಕನಕದಾಸರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಚಿಕ್ಕೋಡಿ ಪಟ್ಟಣದಲ್ಲಿ ಕನಕ ಭವನ ಮತ್ತು ವಾಲ್ಮೀಕಿ ಭವನ ನಿರ್ಮಾಣ ಮಾಡಲಾಗುತ್ತದೆಂದು ವಾಗ್ದಾನ ಮಾಡಿದ್ದೇವು. ಈಗ ಎರಡು ಭವನಕ್ಕೆ ತಾಲಾ 2.50 ಕೋಟಿ ರೂ ವೆಚ್ಚದಲ್ಲಿ ಸುಮಾರು 5 ಕೋಟಿ ರೂ ಭವನ ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವಣೆ ಸಲ್ಲಿಸಲಾಗುತ್ತದೆ. ಬಾಗಲಕೋಟದಲ್ಲಿ ಮುಖ್ಯಮಂತ್ರಿಗಳು ಸಹ ಕನಕ ಭವನ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎಂದರು. 

500 ವರ್ಷಗಳ ಹಿಂದೆಯೇ ಕುಲ ಕುಲ ಎಂದು ಹೊಡೆದಾಡದಿರಿ ಎನ್ನುವ ಮೂಲಕ ಕನಕದಾಸರು ಜಾತಿ ಪದ್ಧತಿಯನ್ನು ಪ್ರಶ್ನಿಸಿ, ಸಮಾನತೆಗಾಗಿ ಧ್ವನಿ ಎತ್ತಿದ ಮಹಾನ್ ಸಂತರು ತೋರಿದ ಹಾದಿಯಲ್ಲಿ ಸಾಗೋಣ ಎಂದರು. 

ಉಪನ್ಯಾಸಕ ಎನ್‌.ಎಸ್‌.ಕುರಬರ ಮಾತನಾಡಿ ಮಹಾನ್ ಸಂತ ಕನಕದಾಸರ ಆಚಾರ ವಿಚಾರಗಳನ್ನು ಮೈಗೂಡಿಸಿಕೊಂಡು ಸಮಾಜ ಬಾಂದವರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸಂಸ್ಕಾರ ಕೊಡಬೇಕು. ಜೊತೆಗೆ ಉನ್ನತ ವ್ಯಾಸಂಗದ ಮೂಲಕ ಕೆಎಎಸ್‌-ಐಎಎಸ್‌ನಂತ ಉನ್ನತ ಹುದ್ದೆಯಲ್ಲಿ ಸೇವೆ ನೀಡಲು ಪ್ರೇರಣೆ ನೀಡಬೇಕು ಎಂದರು. 

ತಹಶೀಲ್ದಾರ ಸಿ.ಎಸ್‌.ಕುಲಕರ್ಣಿ ಮಾತನಾಡಿ ಕನಕ ಭವನ ನಿರ್ಮಾಣಕ್ಕೆ ಸಮಾಜ ಬಾಂದವರ ಜೊತೆ ಸಭೆ ನಡೆಸಿ ಸೂಕ್ತ ಜಾಗ ನೀಡಲಾಗುತ್ತದೆ ಎಂದರು. 

ಕರ್ನಾಟಕ ಪ್ರದೇಶ ಕುರುಬರ ಸಂಘದ ಯುವ ಘಟಕದ ರಾಜ್ಯ ಕಾರ್ಯದರ್ಶಿ ಶಿವಾನಂದ ಮರಾ​‍್ಯಯಿ ಮಾತನಾಡಿದರು. 

ಇದಕ್ಕೂ ಮೊದಲು ಕನಕದಾಸರ ಪುತ್ಥಳಿಗೆ ಗಣ್ಯರು ಮಾಲಾರೆ​‍್ನ ಮಾಡಿ ಪುಸ್ಪ ನಮನ ಸಲ್ಲಿಸಿದರು.  

ಪರಸಭೆ ಉಪಾಧ್ಯಕ್ಷ ಇರ​‍್ಾನ ಭೇಪಾರಿ, ಸದಸ್ಯರಾದ ರಾಮಾ ಮಾನೆ, ಗುಲಾಬ ಬಾಗವಾನ, ವರ್ಧಮಾನ ಸದಲಗೆ, ಜಿಪಂ ಮಾಜಿ ಸದಸ್ ಸುರೇಶ ಚೌಗಲಾ, ವಿಜಯ ಮಾಂಜ್ರೇಕರ, ಸಿಪಿಐ ವಿಶ್ವನಾಥ ಚೌಗಲಾ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಸ್‌.ಎಸ್‌.ಕಾದ್ರೊಳೆ, ಸಮಾಜ ಮುಖಂಡರಾದ ಲಕ್ಷ್ಮಣ ಡಂಗೇರ, ಲಕ್ಷ್ಮಣ ಪೂಜೇರಿ, ಸುರೇಶ ಹೆಗಡೆ, ಸುರೇಶ ಬಾಡಕರ, ರಾಮಣ್ಣಾ ಬನ್ನಟ್ಟಿ, ಎಂ.ಕೆ.ಪೂಜಾರಿ, ಬೀರಾ ಬನ್ನೆ, ಅರ್ಜುನ ಗುರುನಾಥ, ಕಿರಣ ಗುಡಸೆ, ಸೋಮನಾಥ ಪೂಜೇರಿ, ರಾಜು ದತ್ತವಾಡೆ ಮುಂತಾದವರು ಇದ್ದರು.