ಕಟ್ಟಕಡೆ ವ್ಯಕ್ತಿಯಿಂದ ಉನ್ನತ ವ್ಯಕ್ತಿಯವರೆಗೆ ಸಮಾನತೆ ಅಧಿಕಾರ ನೀಡಿದ್ದು ಸಂವಿಧಾನ : ಸಿದ್ದಾರ್ಥಗೌಡ
ಶಿಗ್ಗಾವಿ : ಕಟ್ಟಕಡೆಯ ವ್ಯಕ್ತಿಯಿಂದ ಉನ್ನತ ವ್ಯಕ್ತಿಯವರೆಗೆ ಸಮಾನತೆಯಿಂದ ಅಧಿಕಾರ ನೀಡಿದ್ದು ಇದೇ ಸಂವಿಧಾನ ಎಂದು ಪುರಸಭೆ ಅಧ್ಯಕ್ಷ ಸಿದ್ದಾರ್ಥಗೌಡ ಪಾಟೀಲ ಹೇಳಿದರು.
ಪಟ್ಟಣದ ಅಂಬೇಡ್ಕರ ಮೂರ್ತಿಗೆ ಮಾರ್ಲಾಪಣೆ ಮಾಡಿ ನಂತರ ಪುರಸಭೆಯ ಕಾರ್ಯಾಲಯದಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಿ ಮಾತನಾಡಿದ ಅವರು ಭಾರತದ ಸಮಸ್ತ ನಾಗರೀಕರಿಗೆ, ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ, ವಿಚಾರ, ಅಭಿವ್ಯಕ್ತಿ, ವಿಶ್ವಾಸ, ಧರ್ಮಶ್ರದ್ದೆ, ರಾಷ್ಟ್ರದ ಏಕತೆ, ಅಖಂಡತೆ ದೊರೆಯುವಂತೆ ಮಾಡಿದ್ದು ಇದೇ ಡಾ.ಭಾಬಾ ಸಾಹೇಬ ಅಂಬೇಡ್ಕರ ರಚಿಸಿದ ಸಂವಿಧಾನ ಆದ್ದರಿಂದ ಇಂದು 1949 ನೇ ನವ್ಹಂಬರ 26 ನೇ ದಿನವನ್ನು ಸಂವಿಧಾನ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.
ಪುರಸಭೆ ಅಧಿಕಾರಿ ಶೈಲಜಾ ಪಾಟೀಲ ಸಂವಿಧಾನ ಪ್ರತಿಜ್ಞಾ ವಿಧಿ ಭೋದಿಸಿದರು. ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷ್ಯೆ ಶಾಂತಾಭಾಯಿ ಸುಭೇದಾರ, ಮುಖ್ಯಾಧಿಕಾರಿ ಮಲ್ಲೇಶ, ಪುರಸಭೆ ಸದಸ್ಯರಾದ ಮಂಜುನಾಥ ಬ್ಯಾಹಟ್ಟಿ, ಪರುಶರಾಮ ಸೊನ್ನದ, ಸೇರಿದಂತೆ ಪುರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಮತ್ತು ಇತರರು ಉಪಸ್ಥಿತರಿದ್ದರು.