ಲೋಕದರ್ಶನ ವರದಿ
ವಿಜಯಪುರ 18:ಆಪರೇಷನ್ ಕಮಲದ ಮೂಲಕ ರಾಜ್ಯದಲ್ಲಿ ಸಮ್ಮಿಶ್ರ ಸರಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿರುವ ಬಿಜೆಪಿ ನಾಯಕರ ಕ್ರಮವನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ನಗರದ ಗಾಂಧೀವೃತ್ತದ ಬಳಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ಶಹಾ, ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಅವರ ಪ್ರತಿಕೃತಿ ದಹಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರವಿಗೌಡ ಪಾಟೀಲ ಮಾತನಾಡಿ, ಮಾಝಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಹಿಂಬಾಗಿಲಿನಿಂದ ಮುಖ್ಯಮಂತ್ರಿಯಾಗುವ ಹಗಲು ಕನಸು ಕಾಣುತ್ತಿರುವುದು ನೋಡಿದರೆ ಅವರ ಅಧಿಕಾರ ದಾಹ ಎದ್ದು ಕಾಣಿಸುತ್ತಿದೆ. ರಾಜ್ಯ ಸಮ್ಮಿಶ್ರ ಸರಕಾರ ಇಂದು ರೈತರು, ಬಡವರು, ಹಿಂದುಳಿದವರು ದಲಿತರು ಹಾಗೂ ಅಲ್ಪಸಂಖ್ಯಾತರ ಪರವಾಗಿ, ಕೆಲಸ ಮಾಡುತ್ತಿರುವುದನ್ನು ಬಿಜೆಪಿ ನಾಯಕರಿಗೆ ಸಹಿಸಲಾಗುತ್ತಿಲ್ಲ. ಎಂದು ಕಿಡಿ ಕಾರಿದರು. ಸಮ್ಮಿಶ್ರ ಸರಕಾರದ ಶಾಸಕರಿಗೆ ಆಪರೇಷನ್ ಕಮಲದ ಮೂಲಕ ಆಸೆ ಆಮಿಷಗಳನ್ನು ಒಡ್ಡಿ ತಮ್ಮ ಕಡೆಗೆ ಸೆಳೆಯುವ ಪ್ರಯತ್ನ ಮಾಡುತ್ತಿರುವುದು ಪ್ರಜಾಪ್ರಭುತ್ವ ವಿರೋಧಿಯಾಗಿದ್ದು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ನಾಯಕರಿಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಕಾಂಗ್ರೆಸ್ ಮುಖಂಡ ಅಬ್ದುಲ್ ಹಮಿದ್ ಮುಶ್ರೀಫ್, ಜಿಲ್ಲಾ ಉಪಾಧ್ಯಕ್ಷ ವೈಜನಾಥ ಕಪರ್ೂರಮಠ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಹಾದೇವಿ ಗೋಕಾಕ, ಕೆಪಿಸಿಸಿ ಮಹಿಳಾ ಉಪಾಧ್ಯಕ್ಷೆ ಲಕ್ಷ್ಮಿ ದೇಸಾಯಿ, ಅನೇಕ ಮುಖಂಡರು ಮಾತನಾಡಿದರು.
ವಿಜಯಪುರ ನಗರ ಬ್ಲಾಕ್ ಅಧ್ಯಕ್ಷ ಜಮೀರ್ ಬಕ್ಷಿ, ಜಲನಗರ ಬ್ಲಾಕ್ಷ ಅಧ್ಯಕ್ಷೆ ಆರತಿ ಶಹಾಪೂರ, ಜಿಲ್ಲಾ ಉಪಾಧ್ಯಕ್ಷ ಚಾಂದಸಾಬ ಗಡಗಲಾವ, ಕೆಪಿಸಿಸಿ ಸದಸ್ಯ ಪೀರಪ್ಪ ನಡುವಿನಮನಿ, ಜಿಲ್ಲಾ ಹಿಂದುಳಿದ ವರ್ಗಗಳ ಅರ್ಧಯಕ್ಷ ಸಾಹೇಬಗೌಡ ಎನ್ ಬಿರಾದಾರ, ಜಿಲ್ಲಾ ಪ್ರಧಾನ ಕಾರ್ಯದಶರ್ಿ ಶಬ್ಬೀರ ಜಾಗೀರದಾರ, ವಿಜಯಕುಮಾರ ಘಾಟಗೆ, ಹೂವಿನ ಹಿಪ್ಪರಗಿ ಬ್ಲಾಕ್ ಅಧ್ಯಕ್ಷ ಬಾಳನಗೌಡ ಪಾಟೀಲ, ಇಫರ್ಾನ ಶೇಖ, ಶರಣಪ್ಪ ಯಕ್ಕುಂಡಿ, ಮಲ್ಲು ತೊರವಿ, ಅಬ್ಬಾಸಲಿ ಚೌಧರಿ, ಸಂತೋಷ ಬಾಲಗಾಂವಿ, ಪ್ರಕಾಶ ಕಟ್ಟಿಮನಿ, ಶರಣಪ್ಪ ಬೆಳ್ಳೆನವರ, ಬಿ.ಎಸ್.ಬ್ಯಾಳಿ, ಆಬೀದ ಸಂಗಮ, ಹೈದರ ನಧಾಪ, ನಿಂಗಪ್ಪ ಸಂಗಾಪೂರ, ಲತೀಪ ಕಲಾದಗಿ, ದಾವಲಸಾಬ ಬಾಗವಾನ, ಆಯಿಷಾ ಬೇಪಾರಿ, ಮಂಜುಳಾ ಗಾಯಕವಾಡ, ಲಕ್ಷ್ಮಣ ಇಲಕಲ್ಲ, ಎಂ.ಎ.ಬಕ್ಷಿ ಮುಂತಾದವರು ಉಪಸ್ಥಿತರಿದ್ದರು.