ಕಾಂಗ್ರೆಸ್ ಪಕ್ಷದ ರಾಜ್ಯ ಸರ್ಕಾರ ಬಡ ವಿರೋಧಿ ಮತ್ತು ಜನ ವಿರೋಧಿ ಸರ್ಕಾರವಾಗಿದೆ: ಮೀನಹಳ್ಳಿ ತಾಯಣ್ಣ

Congress party state government is anti-poor and anti-people government: Meenahalli Tayanna

ಕಾಂಗ್ರೆಸ್ ಪಕ್ಷದ  ರಾಜ್ಯ ಸರ್ಕಾರ  ಬಡ ವಿರೋಧಿ ಮತ್ತು ಜನ ವಿರೋಧಿ  ಸರ್ಕಾರವಾಗಿದೆ: ಮೀನಹಳ್ಳಿ ತಾಯಣ್ಣ

ಬಳ್ಳಾರಿ  10 :   ಗ್ಯಾರೆಂಟಿ ಯೋಜನೆಗಳಿಂದ   ಸಾರಿಗೆ ಸಂಸ್ಥೆ ದಿವಾಳಿಯಾಗಿದ್ದು  ಅವೈಜ್ಞಾನಿಕವಾಗಿ ಬಸ್ ಪ್ರಯಾಣ ದರವನ್ನು 15ಅ ಏರಿಕೆ ಮಾಡಿರುವುದನ್ನು ಜನತಾದಳ (ಜಾತ್ಯಾತೀತ) ಪಕ್ಷವು ಖಂಡಿಸುತ್ತೇವೆ ಎಂದು  ಜೆಡಿಎಸ್ ಜಿಲ್ಲಾಧ್ಯಕ್ಷರಾದ ಮೀನಳ್ಳಿ ತಾಯಣ್ಣನವರ ನೇತೃತ್ವದಲ್ಲಿ  ಮುಖಂಡರು ಹಾಗೂ ಕಾರ್ಯಕರ್ತರು ಜೆಡಿಎಸ್ ಜಿಲ್ಲಾ ಕಚೇರಿಯಿಂದ  ಪ್ರತಿಭಟನೆಯ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು  ಈ ಸಂದರ್ಭದಲ್ಲಿ  ಜಿಲ್ಲಾಧ್ಯಕ್ಷರಾದ ಮೀನಳ್ಳಿ ತಾಯಣ್ಣ ಮಾತನಾಡಿ ರಾಜ್ಯ ಸರ್ಕಾರ ಈ ಕೂಡಲೇ ಬಸ್ ದರ ಹೆಚ್ಚಳವನ್ನು ಹಿಂಪಡೆಯಬೇಕು ರಾಜ್ಯ ಸರ್ಕಾರ ಅವೈಜ್ಞಾನಿಕ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಜನಸಾಮಾನ್ಯರ ಮೇಲೆ ದರ ಹೆಚ್ಚಳದ ಹೊರೆ ಹೊರಿಸಿದೆ.  

ಸುಭದ್ರವಾಗಿದ್ದ ಕರ್ನಾಟಕದ ಅರ್ಥಿಕತೆಯನ್ನು ಹದಗೆಡೆಸಿರುವ ಸರ್ಕಾರ, ಸಾರಿಗೆ ಪ್ರಯಾಣ ದರವನ್ನು ಶೇ.15ಅ ಹೆಚ್ಚಳ ಮಾಡಿ ಈಗ ಜನಸಾಮಾನ್ಯರ ಮೇಲೆ ಅನಗತ್ಯವಾಗಿ ಬೆಲೆ ಏರಿಕೆಯ ಬಲೆ ಹಾಕುತ್ತಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶಗೊಂಡರು  ಗ್ಯಾರಂಟಿ ಯೋಜನೆಗಳಿಂದ ಸಾರಿಗೆ ಸಂಸ್ಥೆ ದಿವಾಳಿಯಾಗಿದ್ದು, ಈಗಾಗಲೇ ರಾಜ್ಯ ಸಾರಿಗೆ ಸಂಸ್ಥೆಗೆ 2,000 ಕೋಟಿ ಸಾಲ ಪಡೆಯಲು ಸಚಿವ ಸಂಪುಟ ಅನುಮೋದನೆ ನೀಡಿದೆ. ಮಹಿಳೆಯರಿಗೆ ಉಚಿತ ಪ್ರಯಾಣ ನೀಡಿ,ಅದರ ನಷ್ಟವನ್ನು ಸರಿದೂಗಿಸಲು ದರ ಹೆಚ್ಚಿಸಿ ಪುರುಷ ಪ್ರಯಾಣಿಕರಿಂದ ವಸೂಲಿ ಮಾಡಲಾಗುತ್ತಿದೆ. ಸರ್ಕಾರ ಒಂದು ಕೈಯಲ್ಲಿ ಕೊಟ್ಟು.  

ಇನ್ನೊಂದು ಕೈಯಲ್ಲಿ ಕಸಿದುಕೊಳ್ಳುತ್ತಿದೆರಾಜ್ಯ ಸರ್ಕಾರದ ಈ ತೀರ್ಮಾನ ಜನವಿರೋಧಿ ಮತ್ತು ಬಡವರ ವಿರೋಧಿ ಕ್ರಮವಾಗಿದೆ ಎಂದರು ಈ ಸಂದರ್ಭದಲ್ಲಿ  ಜೆಡಿಎಸ್ ರಾಜ್ಯ ಯುವ ಘಟಕದ ಕಾರ್ಯಾಧ್ಯಕ್ಷರಾದ ರಾಜು ನಾಯಕ ಮಾತನಾಡಿ  ಸರ್ಕಾರ ಕೊಟ್ಟ ಐದು ಗ್ಯಾರಂಟಿ ಯೋಜನೆಗಳಿಂದ  ರಾಜ್ಯವನ್ನು ಹಾಳು ಮಾಡಲು  ಮುಖ್ಯಮಂತ್ರಿಗಳು ಹೊರಟಿದ್ದಾರೆ, ಅವರ ನಡೆ ತುಘಲಾಕ್ ನಡೆಯಾಗಿದೆ  140 ಜನ ಶಾಸಕರು ಇದ್ದೇವೆ ಎಂಬುವದು ಅಹಂಕಾರ ಸರ್ಕಾರಕ್ಕೆ ಬಂದಿದೆ.  ರಾಜ್ಯವನ್ನು ದಿವಾಳಿ ಮಾಡಲು ಹೊರಟಿದ್ದಾರೆ  ಇವರು ರೈತ ವಿರೋಧಿ ಮತ್ತು ದಲಿತ ವಿರೋಧಿ ಸರ್ಕಾರವಾಗಿದೆ ಎಂದರು.  ಈ ಸಂದರ್ಭದಲ್ಲಿ ಲಕ್ಷ್ಮೀಕಾಂತ ರೆಡ್ಡಿ  ಕುರೆಕುಪ್ಪ ಸೋಮಪ್ಪ,ರಾಜು ನಾಯಕ್, ,ಹೋನ್ನೂರು ಸ್ವಾಮಿ,ಮದುರೈ ವಿಜಯ್ ಕುಮಾರ್, ಅಶೋಕ್ ಸಂಗನಕಲ್ಲು, ಶಿವುನಾರಾಯಣ,ಮೇಘರಾಜ್, ರಾಮಾಂಜನೇಯಲು ಕಿರಣ್‌. ಶಿವು ನಾರಾಯಣ, ಕುಮಾರ್,ಬಸಪ್ಪ,ಜಮೀಲಾ , ರೇಣುಕಾ,ನೀಲಾ, ನಾಗವೇಣಿ, ಮುತ್ತು,ಬಸವ ಅವಾಂಬಾವಿ, ಹಾಗೂ ಇತರ ಪದಾಧಿಕಾರಿಗಳು ಮತ್ತು ಕಾಯ9ಕತ9ರು ಸೇರಿದ್ದರು.