ಲೋಕದರ್ಶನ ವರದಿ
ಬಳ್ಳಾರಿ: ಬಳ್ಳಾರಿ ಲೋಕಸಭಾ ಉಪಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್ ಅಭ್ಯಥರ್ಿ ಬಿ.ಎಸ್.ಉಗ್ರಪ್ಪ ಅವರಿಗೆ 6,28,365 ಮತಗಳು ಪಡೆದಿದ್ದು. ಬಿಜೆಪಿ ಅಭ್ಯಾಥರ್ಿ ಜೆ.ಶಾಂತಾ ಅವರು 3,85,204 ಮತಗಳನ್ನು ಪಡೆದು ಸೋಲನ್ನು ಅನುಭವಿಸಿದ್ದಾರೆ. ಹಾಗೆಯೇ ಡಾ|| ಶ್ರೀನಿವಾಸ್ ಟಿ.ಆರ್ ಅವರು 13,714 ಮತಗಳನ್ನು ಪಡೆದಿದ್ದು ಇನ್ನೊರ್ವ ಅಭ್ಯಾಥರ್ಿ ವೈ.ಪಂಪಾಪತಿ ಅವರಿಗೆ ಕೇವಲ 7697 ಮತ ಪಡೆದು ಸೋಲನ್ನು ಒಪ್ಪಿಕೊಂಡಿದ್ದಾರೆ.
ಇನ್ನು ಅಚ್ಚರಿ ಸಂಗತಿ ಅಂದರೆ ನೋಟಾಗೆ ಬರೊಬ್ಬರಿ 12,413 ಮತಗಳು ಬಿದ್ದಿವೆ. ಕಾಂಗ್ರೆಸ್ ಅಭ್ಯಥರ್ಿ ಉಗ್ರಪ್ಪ ಅವರು ಬಿಜೆಪಿ ಅಭ್ಯಥರ್ಿ ಜೆ.ಶಾಂತಾ ಅವರಗಿಂತ 2,43,161 ಮತಗಳ ಅಂತರದಲ್ಲಿ ಬಾರಿ ಬಹುಮತದಿಂದ ಬಳ್ಳಾರಿ ಕೋಟೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ನ.03ರಂದು ನಡೆದಿದ್ದ ಮತದಾನದ ಮತಗಳ ಎಣಿಕೆ ಮಂಗಳವಾರ ನಗರದ ರಾವ್ ಬಹದ್ದೂರು ವೈ ಮಹಬಲೇಶ್ವರಪ್ಪ ಇಂಜಿನೀಯರಿಂಗ್ ಕಾಲೇಜಿನಲ್ಲಿ ನಡೆಯಿತು. ಬೆಳಿಗ್ಗೆ 8ಕ್ಕೆ ಮತ ಎಣಿಕೆ 120 ಟೇಬಲ್ ಗಳಲ್ಲಿ ಆರಂಭಗೊಂಡಿದ್ದು. ಮೊದಲ ಸುತ್ತಿನ ಮತಗಳ ಎಣಿಕೆ ಫಲಿತಾಂಶ್ 8:45ಕ್ಕೆ ಪ್ರಕಟಗೊಂಡಾಗ ಕಾಂಗ್ರೆಸ್ ಅಭ್ಯಥರ್ಿ ಬಿ.ಎಸ್. ಉಗ್ರಪ್ಪ 17,480 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದರು.
ನಂತರ ಅವರು ಪ್ರತೀ ಸುತ್ತಿನಲ್ಲೂ ತಮ್ಮ ಲೀಡ್ ನ್ನು ಹೆಚ್ಚಿಸಿಕೊಳ್ಳುತ್ತಲೇ ಮುನ್ನಡೆದರು. ಬಹುತೇಕ ಕ್ಷೇತ್ರದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯಥರ್ಿಗೆ ಮುನ್ನಡೆ ಕಂಡುಬಂದಿದೆ. ಶಾಂತಾ ಅವರು ಎರಡನೇ ಬಾರಿಗೆ ಸಂಸದೆಯಾಗಬೇಕೆಂಬ ಕನಸು ಭಘ್ನವಾಗಿದೆ. ತಮ್ಮ ಆಯ್ಕೆ ಖಚಿತ ಎಂದು ಭಾವಿಸಿದ್ದ ಉಗ್ರಪ್ಪ ಅವರು ಮತ ಎಣಿಕೆ ಆರಂಭದಿಂದಲೇ ಮತ ಎಣಿಕೆ ಕೇಂದ್ರಕ್ಕೆ ಬಂದಿದ್ದರು.
ಕಾಂಗ್ರೆಸ್ ಅಭ್ಯಥರ್ಿ ಗೆಲುವು ಖಚಿತ ಎಂಬುವುದನ್ನು ಹರಿತ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಸೇರಿ ಸಂಭ್ರಮಿಸಿದರು.
ಡಿಕೆ ಶಿವಕುಮಾರ ಅವರು ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದಲ್ಲದೇ ಚುನಾವಣೆಯ ಉಸ್ತುವಾರಿಯನ್ನು ಒತ್ತು ಮತ್ತೊಮ್ಮೆ ತಮ್ಮ ಶಕ್ತಿ, ಸಾಮಥ್ರ್ಯ, ಏನೆಂಬುವುದನ್ನು ಸ್ಪಷ್ಟ ಪಡಿಸಿದ್ದಾರೆ. ಈವರೆಗೆ ಕ್ಷೇತ್ರದಲ್ಲಿ ನಡೆದ 16 ಸಾರ್ವತ್ರಿಕ ಮತ್ತು 1 ಉಪಚುನಾವಣೆಯನ್ನು ಘಮನಿಸಿದರೆ 1971ರಲ್ಲಿ ನಡೆದ 5ನೇ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದ ಹೊರಗಡೆಯವರೇ ಆದ ಕಾಂಗ್ರೆಸ್ನ ಡಾ|| ವಿ.ಕೆ.ಆರ್ವಿ ರಾವ್ ಅಂದು ತಮ್ಮ ಪ್ರತಿಸ್ಪಧರ್ಿ ವೈ ಮಹಬಲೇಶ್ವರಪ್ಪ ಅವರ ವಿರುದ್ಧ 1,52,860 ಮತಗಳ ಅಂತರದಿಂದ ಆಯ್ಕೆಯಾಗಿದ್ದರು. ಈಗ ಉಗ್ರಪ್ಪ ಅವರು 2,43,161 ಅಂತರದಿಂದ ತಮ್ಮ ಪ್ರತಿಸ್ಪಧರ್ಿ ಜೆ.ಶಾಂತಾ ಅವರನ್ನು ಸೋಲಿಸಿ ಹೊಸ ದಾಖಲೆಯನ್ನು ಬರೆದಿದ್ದಾರೆ. ಈ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿ.ಶ್ರೀರಾಮುಲು ಇಡೀ ರಾಜ್ಯಸಕರ್ಾರ, ಕಾಂಗ್ರೆಸ್ನ ಶಾಸಕರು, ಸಚಿವರು, ಸಂಸದರು, ಸೇರಿ 70ಕ್ಕೂ ಹೆಚ್ಚು ಜನ ಬಂದು ಇಲ್ಲಿ ಬಿಡು ಬಿಟ್ಟಿದ್ದರು. ಅಲ್ಲದೇ ನಾನು ಈ ಮೊದಲೆ ಹೇಳಿದಂತೆ ಹಣ, ಯಂಡ, ಹಂಚಿ ಕಾಂಗ್ರೆಸ್ ಗೆದ್ದಿದೆ. ಆದರೂ ಮತದಾರರ ತಿಪರ್ಿಗೆ ತೆಲೆ ಬಾಗುತ್ತೇನೆ ಎಂದರು.