ಜನಪರ ಬಜೆಟ್ ಮಂಡಿಸಿದ ವಿತ್ತ ಸಚಿವರಿಗೆ ಅಭಿನಂದನೆ
ತಾಳಿಕೋಟಿ: ಸಂಸತ್ತಿನಲ್ಲಿ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ದೇಶದ ಕೋಟ್ಯಂತರ ನಾಗರೀಕರ ಆಶೋತ್ತರಗಳನ್ನು ಈಡೇರಿಸುವ ನಿಟ್ಟಿನಲ್ಲಿ ಅತ್ಯಂತ ಜನಪರವಾದ ಬಜೆಟ್ ಆಗಿದೆ ಎಂದು ಬಿಜೆಪಿ ಮುಖಂಡ ಮಾನಸಿಂಗ್ ಕೊಕಟನೂರ ತಿಳಿಸಿದ್ದಾರೆ. ಶನಿವಾರ ಪ್ರಸ್ತುತ ಬಜೆಟ್ ಕುರಿತು ಪತ್ರಿಕೆಗೆ ಮಾತನಾಡಿದ ಅವರು ಈ ಬಾರಿ ಬಜೆಟ್ ನಲ್ಲಿ ಅಗತ್ಯ ವಸ್ತುಗಳ ಬೆಲೆಗಳನ್ನು ಇಳಿಸುವದರೊಂದಿಗೆ ಆಮದು ಸುಂಕ, 36 ಕ್ಯಾನ್ಸರ್ ಓಷಧಿಗಳ ಮೇಲಿನ ಆಮದು ಸುಂಕು ರದ್ದು, 6 ಅತ್ಯವಶ್ಯಕ ಓಷಧಗಳ ಮೇಲಿನ ಆಮದು ಸುಂಕ ಶೇ. ಐದರಷ್ಟು ಇಳಿಕೆ, ಎಲೆಕ್ಟ್ರಾನಿಕ್ ವಸ್ತುಗಳ ಆಮದು ಸುಂಕ ಇಳಿಕೆ, ಉದ್ಯಮಗಳಿಗೆ ಶಕ್ತಿ ತುಂಬಲು ಹೊಸ ಸ್ಟಾರ್ಟ್ ಆಪ್ ಗಳು, ವಿಶೇಷ ನಿಧಿ ಒದಗಿಸಿ ಪ್ರಸ್ತುತ ಕೇಂದ್ರ ಸರ್ಕಾರ ನಿಡುತ್ತಿರುವ 10,000 ಕೋಟಿ ಜೊತೆಗೆ ಹೊಸ 10,000 ಕೋಟಿ ಹೆಚ್ಚುವರಿ ಅನುದಾನ ಘೋಷಿಸಿರುವುದು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ 5 ಲಕ್ಷ ಮಹಿಳೆಯರಿಗೆ ಹೊಸ ಉದ್ದಿಮೆ ಸ್ಥಾಪಿಸುವ ಯೋಜನೆ ಹೀಗೆ ಹಲವಾರು ಜನಪರ ಹಾಗೂ ಅಭಿವೃದ್ಧಿಪರ ಯೋಜನೆಗಳು ಈ ಬಜೆಟ್ ನಲ್ಲಿ ಇವೆ. ಇಂಥಹ ಜನಪರ ವಿಕಸನದ ಬಜೆಟ್ ಮಂಡಿಸಿರುವದಕ್ಕೆ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಹಾಗೂ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದಿಸುತ್ತೇನೆ ಎಂದರು.