ಲೋಕದರ್ಶನ ವರದಿ
ವಿಜಯಪುರ 11;ಬಹಳ ವರ್ಷಗಳಿಂದ ಬೇಡಿಕೆ ಇದ್ದ ಮತ್ತು ರಾಜ್ಯಕೀಯ ಪಕ್ಷಗಳ ಸ್ವಹೀತಾಸಕ್ತಿಯ ಕೊರತೆಯಿಂದ ನೆನೆಗುದಿಗೆ ಬಿದ್ದಿದ್ದ ಆಥರ್ಿಕವಾಗಿ ಹಿಂದುಳಿದ ವರ್ಗಕ್ಕೆ ಮೀಸಲಾತಿಯನ್ನು ಕಲ್ಪಿಸುವ ಯೋಚನೆಯನ್ನು ನಮ್ಮ ದೇಶದ ಹೆಮ್ಮೆಯ ಪ್ರಧಾನಿಯಾದ ಶ್ರೀ ನರೇಂದ್ರ ಮೋದಿ ಅವರು ಈ ಭಾರಿಯ ಸಂಸತ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸಿ ಶೇಕಡ 10% ರಷ್ಟು ಮೀಸಲಾತಿಯನ್ನು ಆಥರ್ಿಕವಾಗಿ ಹಿಂದೂಳಿದ ವರ್ಗಕ್ಕೆ ಕೊಡುಗೆಯಾಗಿ ನೀಡಿದ್ದಕ್ಕೆ ಇಂದು ದಿ: 11ವಿಜಯಪುರ ನಗರದಲ್ಲಿ ಶ್ರೀ ಸಿದ್ಧೇಶ್ವರ ದೇವಸ್ಥಾನದ ಮುಂಭಾಗದಲ್ಲಿ ವಿಜಯಪುರ ಜಿಲ್ಲೆಯ ಮತ್ತು ನಗರದ ಮಂಡಲದ ಬಿಜೆಪಿ ಯುವ ಮೋಚರ್ಾ ಪದಾಧಿಕಾರಿಗಳು ಸಿಹಿ ಹಂಚುವುದರ ಮೂಲಕ ಪ್ರಧಾನ ಮಂತ್ರಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಯುವ ಮೋಚರ್ಾ ಜಿಲ್ಲಾಧ್ಯಕ್ಷರಾದ ರಾಜೇಂದ್ರ ವಾಲಿ ಮಾತನಾಡಿ 1947ರ ನಂತರ ದೇಶದಲ್ಲಿ ಬಹುಪಾಲು ಕಾಂಗ್ರೆಸ್ ಪಕ್ಷವು ಆಡಳಿತ ನಡೆಸಿದೆ. ಇವತ್ತೀಗೆ ಸ್ವಾತಂತ್ರ್ಯ ಸಿಕ್ಕು 72 ವರ್ಷಗಳಾದರು ಮೀಸಲಾತಿಯ ಬಗ್ಗೆ ತಮ್ಮ ತಮ್ಮ ಅನಕೂಲಕ್ಕೆ ಮತ್ತು ಕೆಲವು ಜಾತಿ ಮತ್ತು ಸಮಾಜಗಳಿಗೆ ಮೀಸಲಾತಿಯನ್ನು ನೀಡಿ ಒಟ್ ಬ್ಯಾಂಕ್ ಸೃಷ್ಟಿಮಾಡಿಕೊಂಡಿದ್ದ ಕಾಂಗ್ರೆಸ್ ಪಕ್ಷವು ದೇಶವನ್ನು ಒಡೆದಾಳುವ ನೀತಿಯನ್ನು ಅನುಸರಿಸಿ ರಾಜಕೀಯ ಮಾಡುತ್ತ ಬಂದಿದೆ. ಆದರೆ ಇವತ್ತು ನಮ್ಮ ದೇಶದ ಹೆಮ್ಮೆಯ ಪ್ರಧಾನಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಅವರು ಈಗ ಇರುವ ಮೀಸಲಾತಿಯ ಪದ್ಧತಿ ಮತ್ತು ಜಾತಿ ಸಮೀಕರಣ ಬದಲಿಸಿದೆ ಯಾರಿಗೂ ಹಾನಿಮಾಡದೆ ಆಥರ್ಿಕವಾಗಿ ಹಿಂದುಳಿದ ವರ್ಗಕ್ಕೆ ಶೇಕಡ 10 ರಷ್ಟು ಮೀಸಲಾತಿ ಕಲ್ಪಸಿ ಇತಿಹಾಸವನ್ನೇ ಬರೆದಿದ್ದಾರೆ ಯಾವ ಒಬ್ಬ ರಾಜಕೀಯ ಪಕ್ಷಗಳು ವಿರೋಧ ಮಾಡದ ಮೀಸಲಾತಿ ಪದ್ಧತಿ ಇದಾಗಿದ್ದು ಲೋಕಸಭಾ ಮತ್ತು ರಾಜ್ಯಸಭಾದಲ್ಲಿ ಅಂಗೀಕಾರಗೊಂಡಿದ್ದು ದೇಶದ ಬಹುಪಾಲು ಜನರಿಗೆ ಸಂತಸವಾಗಿದೆ ಇದರಿಂದ ಸಾಮಾನ್ಯ ವರ್ಗದಲ್ಲಿ ಬರುವ ಜಾತಿಗಳಿಗೆ ಸಾಕಷ್ಟು ಅನುಕೂಲವಾಗಲಿದ್ದು ಇದರಿಂದ ದೇಶದ ಯುವ ಜನರಿಗೆ ಸಕರ್ಾರಿ ನೌಕರಿಗಳಲ್ಲಿ ಮತ್ತು ಸಕರ್ಾರಿ ಶಾಲಾ ಕಾಲೇಜುಗಳಲ್ಲಿ ಅನುಕೂಲವಾಗಲಿದೆ. ಆದ್ದರಿಂದ ಇವತ್ತು ವಿಜಯಪುರ ಜಿಲ್ಲೆ ಯುವ ಮೋಚರ್ಾ ವತಿಯಿಂದ ನಾವೇಲ್ಲ ಪದಾಧಿಕಾರಿಗಳು ಪ್ರಧಾನ ಮಂತ್ರಿಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಯುವ ಮೋಚರ್ಾ ಪದಾಧಿಕಾರಿಗಳಾದ ಕಾಂತು ಶಿಂಧೆ, ಮಹೇಳ ಒಡೆಯರ್, ರಾಜು ಹುನ್ನೂರ, ಸಚೀನ ಪಾಟೀಲ, ಪ್ರಶಾಂತ ಅಗಸರ, ಅನೀಲ ಉಪ್ಪಾರ, ಬಸಯ್ಯಾ ಗೊಳಸಂಗಿಮಠ, ಕೃಷ್ಣಾ ಗುನ್ನಾಳಕರ, ಗುರುರಾಜ ರಾವ್, ಸತೀಶ ಪೀರನಾಯಕ್, ವಿನಾಯಕ ದಹಿಂದೆ, ಶಿವಾಜಿ ಪಾಟೀಲ, ಸನ್ನಿ ಗವಿಮಠ, ಶರಣು ಲಾಳಸಂಗಿ, ಶರತಸಿಂಗ್ ರಜಪೂತ, ವಿಜಯ ಹಿರೇಮಠ, ಸೇರಿದಂತೆ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.