ಧಾರವಾಡ-11 ಇಂದು ಶಹರದ ವಿವೇಕಾನಂದ ವೃತ್ತದಲ್ಲಿ ಹುಬ್ಬಳ್ಳಿ-ಧಾರವಾಡ, ಮಹಾನಗರ ಜಿಲ್ಲಾ ಕಾಂಗ್ರೆಸ್ ವತಿಯಿಂದ ವಿಜಯೋತ್ಸವವನ್ನು ಆಚರಿಸಲಾಯಿತು.
ರಾಜಸ್ಥಾನ, ಛತ್ತಿಸಗಢದಲ್ಲಿ ಅಭೂತಪೂರ್ವ ಜಯಗಳಿಸಿದ್ದು ಮಧ್ಯಪ್ರದೇಶದಲ್ಲಿಯೂ ಕೂಡ ಕಾಂಗ್ರೆಸ್ಪಕ್ಷ ಸಕರ್ಾರ ರಚನೆಯತ್ತ ಧಾಪುಗಾಲೂ ಹಾಕಿರುವುದು, ಈ ಚುನಾವಣೆಯ ಜಯ ಬರುವ ಲೋಕಸಭಾ ಚುನಾವಣೆಗೆ ಯಶಸ್ವಿಯ ದಿಕ್ಸೂಚಿಯಾಗಿದೆ, ದೇಶದ ಪ್ರಧಾನಿ ನರೇಂದ್ರ ಮೋದಿಯವರು ಪದೆ ಪದೆ ಕಾಂಗ್ರೆಸ್ ಹಠಾವೋ ಸಂದೇಶವನ್ನು ಸಾರಿದ ಪರಿಣಾಮವಾಗಿ ಕಾಂಗ್ರೆಸ್ ಜಯಗಳಿಸಿದೆ ಅಲ್ಲದೆ ದೇಶದಲ್ಲಿ ಯಾರಿಂದಲೂ ಕಾಂಗ್ರೆಸ್ ಪಕ್ಷವನ್ನು ನಿನರ್ಾಮಮಾಡಲು ಸಾಧ್ಯವಿಲ್ಲ ಎಂಬುದನ್ನು ಸಾಬೀತು ಪಡಿಸಿದೆ.
ಆದ್ದರಿಂದ ಇಂದು ಸಿಹಿ ಹಂಚಿ, ಪಟಾಕ್ಷಿ ಸಿಡಿಸಿ ಕಾಂಗ್ರೆಸ್ ಪಕ್ಷದ ಜಯಘೋಷಗಳೊಂದಿಗೆ ವಿಜಯೋತ್ಸವ ಆಚರಿಸಲಾಯಿತು. ಕೆ.ಪಿ.ಸಿ.ಸಿ ಸದಸ್ಯ ರಾಬರ್ಟ ದದ್ದಾಪೂರಿ, ಮಾಜಿ ಮೇಯರ್ ದಾನಪ್ಪ ಕಬ್ಬೇರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಮಲಕಾರಿ, ಪಾಲಿಕೆಯ ಸದಸ್ಯರಾದ ಸುಭಾಷ ಶಿಂಧೆ ಮತ್ತು ಪ್ರಕಾಶ ಘಾಟಗೆ, ಪ್ರಧಾನ ಕಾರ್ಯದಶರ್ಿ ವಸಂತ ಅಕರ್ಾಚಾರ್, ಹಿಂದುಳಿದ ವರ್ಗದ ಅಧ್ಯಕ್ಷ ಹೇಮಂತ್ ಗುರ್ಲಹೊಸೂರ, ಪರಮೇಶ ಕಾಳೆ, ಎಸ್ಸಿ ಘಟಕದ ಆನಂದ ಮುಷಣ್ಣವರ, ಮಾಜಿ ಪಾಲಿಕೆಯ ಸದಸ್ಯರಾದ ಆನಂದ ಶಿಂಗನಾಥ, ಆನಂದ ಜಾಧವ, ಪ್ರಕಾಶ ಹಳ್ಯಾಳ, ಶೋಯಬ್ ಜಮಾದಾರ, ಮೈಬೂಬ ಪಠಾಣ, ಸಂಜಯ ಚುರಮರಿ, ಗುರು ಬಾರಕೇರ, ಮುಸ್ತಾಕ ಪಠಾಣ, ಶ್ರೀಧರ ಶೇಠ, ವೆಂಕಟೇಶ ನಾಯ್ಕರ್, ಪರಶರಾಮ ಚುರಮರಿ, ಗ್ರೇಗರಿ ಜೇವಿಯರ್, ಮಹೇಶ ಹುಲ್ಲಣ್ಣವರ, ಬುರಾನ್ ಗೌಳಿ, ಚಂದ್ರು ಅಂಗಡಿ, ಶೇಖಣ್ಣಾ ಹೆಂಬ್ಲಿ, ವರುಣ ಸಾಂಬ್ರಾಣಿ, ಜೇಮ್ಸ ರಿಚರ್ಡ, ರಿಯಾಜ್ ನನ್ನೆಸಾಬಣ್ಣವರ ಅಲ್ಲದೆ ಅನೇಕರು ಭಾಗವಹಿಸಿದ್ದರು.