ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಬಸವಂತ ಕೋಣಿಗೆ ಸನ್ಮಾನ
ಬೆಟಗೇರಿ 05 :ಗೋಕಾಕ ತಾಲೂಕಿನ ಬೆಟಗೇರಿ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಅವಿರೂಧವಾಗಿ ಆಯ್ಕೆಗೊಂಡ ತಾಪಂ ಮಾಜಿ ಸದಸ್ಯ ಬಸವಂತ ಕೋಣಿ ಅವರನ್ನು ಜ.5ರಂದು ಸ್ಥಳೀಯ ಕ್ರಾಂತೀವೀರ ಸಂಗೊಳ್ಳಿ ರಾಯಣ್ಣ ಮತ್ತು ಕನಕದಾಸ ಮೂರ್ತಿ ಉತ್ಸವ ಸಮಿತಿ ವತಿಯಿಂದ ಸನ್ಮಾನಿಸಿದರು.
ಹನುಮಂತ ವಡೇರ, ಸಂಗಯ್ಯ ಹಿರೇಮಠ, ಲಕ್ಷ್ಮಣ ಸೋಮಗೌಡ್ರ, ಪುಂಡಲೀಕ ಹಾಲಣ್ಣವರ, ಅಶೋಕ ಕೋಣಿ, ಲಕ್ಕಪ್ಪ ಚಂದರಗಿ, ಭೀಮಶೆಪ್ಪ ಹೊಂಗಲ, ಸಿದ್ದಪ್ಪ ಬಾಣಸಿ, ಮುತ್ತೆಪ್ಪ ಕುರುಬರ, ರಾಮಣ್ಣ ನೀಲಣ್ಣವರ, ಸಿದ್ದಬೀರ ಧರ್ಮಟ್ಟಿ, ಸುರೇಶ ಬಾಣಸಿ, ತುಕಾರಾಮ ಕುರಿ, ಸ್ಥಳೀಯ ಕ್ರಾಂತೀವೀರ ಸಂಗೊಳ್ಳಿ ರಾಯಣ್ಣ ಮತ್ತು ಕನಕದಾಸ ಮೂರ್ತಿ ಉತ್ಸವ ಸಮಿತಿ ಸದಸ್ಯರು, ಇತರರು ಇದ್ದರು.