ಲೋಕದರ್ಶನ ವರದಿ
ಬೆಳಗಾವಿ 4- ಮಹಿಳೆಯರಲ್ಲಿರುವ ಉತ್ಸಾಸ ಪುರಷರಲ್ಲಿ ನಾವು ಕಾಣುವುದಿಲ್ಲ. ಮಹಿಳೆಯರು ಪ್ರತಿಯೊಂದು ಕ್ಷಣವನ್ನೂ ಸಂಭ್ರಮದಿಂದ ಸವಿಯುತ್ತಾರೆ. ನಗುತ್ತಾರೆ, ನಗಿಸುತ್ತಾರೆ. ಎಂಥ ಕಷ್ಟದ ಪ್ರಸಂಗದಲ್ಲಿಯೂ ಧೈರ್ಯ ಕಳೆದುಕೊಳ್ಳುವುದಿಲ್ಲ. ತಮ್ಮ ದೇಹ, ಉಡುಪುಗಳ ಕುರಿತಾದ ಹೆಚ್ಚಿನ ಗಮನ ಕೊಡುತ್ತಾರೆ. ಪುರಷರಲ್ಲಿ ಈ ದೇಹಾಭಿಮಾನವಿಲ್ಲ. ಈ ಅಪರೂಪದ ಗುಣ ಹೊಂದಿರುವುದರಿಂದಲೇ ಮಹಿಳೆಯರು ನಿರೋಗಿಗಳಾಗಿರುತ್ತಾರೆ. ಯಾವುದೇ ಮನೆಗೆ ಹೋದಾಗಲೂ ಮನೆ ಯಜನಮಾನನನ ಫೋಟೋಕ್ಕೆ ಮಾಲೆ ಬಿದ್ದಿರುವುದರನ್ನು ನಾವು ಕಾಣುತ್ತೇವೆ ಎಂದು ಅಂತರರಾಷ್ಟ್ರೀಯ ಖ್ಯಾತಿಯ ಗಂಗಾವತಿ ಪ್ರಾಣೇಶ ಇಂದಿಲ್ಲಿ ಹೇಳಿದರು.
ಭಾಗ್ಯನಗರದ ರಾಮನಾಥ ಮಂಗಲಕಾರ್ಯಾಲಯದಲ್ಲಿ ಹಾಸ್ಯಕೂಟ 4 ನೇ ವಾಷರ್ಿಕೋತ್ಸವ ಹಾಗೂ ರಾಜ್ಯೋತ್ಸವದ ವಿಶೇಷ ಕಾರ್ಯಕ್ರಮ 'ನಗೆಗನ್ನಡಂ ಗೆಲ್ಗೆ' ಯ ಪ್ರಮುಖ ಭಾಷಣಕಾರರಾಗಿ ಆಗಮಿಸಿದ್ದ ಬಿ. ಪ್ರಾಣೇಶ ಹೇಳಿದರು.
ಮುಂದೆ ಮಾತನಾಡುತ್ತ ಅವರು ಮಾತೃ ಭಾಷೆ ಸ್ವಂತ ಶಬ್ಧ ಸೃಷ್ಠಿ ಮಾಡುವ ಸಾಮಥ್ರ್ಯವನ್ನು ತಂದು ಕೊಡುತ್ತದೆ. ಇಂಗ್ಲೀಷ ಮಾಧ್ಯಮ ವಿದ್ಯಾಥರ್ಿಗಳು ಕನ್ನಡ ಮಾತನಾಡುವ ಪರಿಯನ್ನು ಹಾಸ್ಯಮಯವಾಗಿ ತೋರಿಸಿದ ಅವರು ಭಾಷೆ ವ್ಯಕ್ತಿತ್ವನ್ನು ರೂಪಿಸುತ್ತದೆ. ವಾಟ್ಸಪ್ ಅದ್ಭುತ ಸಾಹಿತ್ಯವನ್ನು ನಮಗೆ ನೀಡುತ್ತಲಿದೆ. ವಾಟ್ಸಪದಲ್ಲಿ ಬರುವ ಒಳ್ಳೆಯದನ್ನು ಸ್ವೀಕರಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಹಿರಿಯ ಕವಿ ಜಿನದತ್ತ ದೇಸಾಯಿ ಇತ್ತಿಚೆಗೆ ರಾಜ್ಯೋತ್ಸವ ಪ್ರಶಸ್ತಿಗಳು ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಲಿದೆ ಎಂದು ವಿಷಾದ ವ್ಯಕ್ತ ಪಡಿಸಿದ ಅವರು ಹಾಸ್ಯಕೂಟ ಬೆಳಗಾವಿ ಎಲ್ಲರನ್ನು ನಗಿಸುವುದರಲ್ಲಿ ಯಶಸ್ವಿಯಾಗಿದೆ.
ಹಾಸ್ಯಕಲಾವಿದ ಬಸವರಾಜ ಮಹಾಮನಿ ಸುಲಭ ಶೌಚಾಲಯ ಮಹತ್ವವನ್ನು ನವಿರಾದ ಹಾಸ್ಯದೊಂದಿಗೆ ಹಂಚಿಕೊಂಡರು. ಹಾಸ್ಯಕೂಟ ಕಲಾವಿದರಾದ ಪ್ರೊ. ಜಿ.ಕೆ. ಕುಲಕಣರ್ಿ ನಿತ್ಯ ಜೀವನದಲ್ಲಿ ನಡೆಯುವ ನಗೆ ಪ್ರಸಂಗಗಳನ್ನು ಹಂಚಿಕೊಳ್ಳುವ ಮೂಲಕ ಜನರನ್ನು ರಂಜಿಸಿದರು. ಜಿ.ಎಸ್. ಸೋನಾರ ಮಿಮಿಕ್ರಿ ಮಾಡಿ ತೋರಿಸಿದರು. ಎಂ. ಬಿ. ಹೊಸಳ್ಳಿ ಮಹಿಳೆಯ ಮಹತ್ವವನ್ನು ಹೇಳಿದರೆ, ಅಶೋಕ ಮಳಗಲಿ ಕನ್ನಡ ಭಾಷಾ ಮಹತ್ವವನ್ನು ಹಂಚಿಕೊಳ್ಳುತ್ತ ನಗೆ ಪ್ರಸಂಗಗಳೊಂದಿಗೆ ಜನರನ್ನು ನಗಿಸುವಲ್ಲಿ
ಯಶಸ್ವಿಯಾದರು.
ಇದೆ ಸಂದರ್ಭದಲ್ಲಿ ಗುಂಡೇನಟ್ಟಿ ಮಧುಕರ ಅವರ 'ಕವಿಯಲ್ಲದವನ ಕವಿತೆಗಳು' ಕವನ ಸಂಕಲನವನ್ನು ಗಂಗಾವತಿ ಪ್ರಾಣೇಶ ಲೋಕಾರ್ಪಣೆಗೊಳಿಸಿದರು. ಗುಂಡೇನಟ್ಟಿ ಮಧುರಕ ಮಾತನಾಡಿ ತಾಯಿಯನ್ನಿಸಿಕೊಳ್ಳಲು ಒಂದು ಮಗುವಿದ್ದರೂ ಸಾಕು ಅದರಂತೆ ಕವಿಯನ್ನಿಸಿಕೊಳ್ಳಲು ಒಂದೇ ಒಂದು ಕವಿತೆ ರಚಿಸಿದರೆ ಸಾಕು ಆದರೆ ಒಳ್ಳೆಯ ಕವಿಯನ್ನಿಸಿಕೊಳ್ಳುವುದು ಕಷ್ಟ ಎಂಬ ಬೇಂದ್ರೆ ಮಾತನ್ನು ನೆನಪಿಸಿಕೊಂಡರು.
ಶ್ರೀಮತಿ ಮಾಧುರಿ ಜೋಶಿ ಹಾಗೂ ತಂಡದವರು ಪ್ರಾಥರ್ಿಸಿದರು. ಪ್ರೊ. ಎಮ್. ಎಸ್. ಇಂಚಲ ಸ್ವಾಗತಿಸಿ ಪರಿಚಯಿಸಿದರು. ಸಹಾಯಕ ಪೋಲಿಸ ಆಯುಕ್ತರಾದ ಎಸ್. ಬಿ. ನಂದಗಾವಿ ಉದ್ಘಾಟಿಸಿದರು. ಅರವಿಂದ ಹುನಗುಂದ ನಿರೂಪಿಸಿದರು.
ಶಾಸಕರಾದ ಅಭಯ ಪಾಟೀಲ, ಪಿ. ಬಿ. ಸ್ವಾಮಿ, ಎಲ್. ಎಸ್. ಶಾಸ್ತ್ರಿ, ಎಂ.ಎ. ಪಾಟೀಲ, ಡಾ. ಸಿದ್ದನಗೌಡ ಪಾಟೀಲ, ಚಂದ್ರಕಾಂತ ಕೂಸನೂರ, ಮದನ ಕಣಬೂರ, ಉಪಸ್ಥಿತರಿದ್ದರು.