ಎಸ್‌.ಎಸ್‌.ಎಲ್‌.ಸಿ. ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬಿದ ಮಾರ್ಗದರ್ಶನ

ಎಸ್‌.ಎಸ್‌.ಎಲ್‌.ಸಿ. ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬಿದ ಮಾರ್ಗದರ್ಶನ Confidence-filled guidance for SSLC students

ಹರಪನಹಳ್ಳಿ 03: “ಪರೀಕ್ಷೆ ಭೀತಿಯಲ್ಲ; ಅದು ನಿಮ್ಮ ಸಾಮರ್ಥ್ಯವನ್ನು ತೋರಿಸುವ ಅಮೂಲ್ಯ ಅವಕಾಶ” ಎಂದು ಎಸ್‌.ಯು.ಜೆ.ಎಂ. ಕಾಲೇಜು ಕನ್ನಡ ಉಪನ್ಯಾಸಕರಾದ ಹೆಚ್‌. ಮಲ್ಲಿಕಾರ್ಜುನ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಸಂದೇಶ ನೀಡಿದರು. ಒತ್ತಡದಿಂದ ಏನನ್ನೂ ಕಲಿಯಲು ಸಾಧ್ಯವಿಲ್ಲ. ಪರೀಕ್ಷಾ ಒತ್ತಡ, ಗೊಂದಲ ಹಾಗೂ ಆತಂಕಗಳನ್ನು ತೊರೆದು, ಆತ್ಮವಿಶ್ವಾಸದಿಂದ ಯಶಸ್ಸಿನ ಹಾದಿಯಲ್ಲಿ ಧೈರ್ಯವಾಗಿ ಪರೀಕ್ಷೆ ಬರೆಯಬೇಕು ಎಂದು ಅವರು ಕರೆ ನೀಡಿದರು. 

ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆ, ನಜೀರ್ ನಗರದಲ್ಲಿ ಎಸ್‌.ಎಸ್‌.ಎಲ್‌.ಸಿ. ವಿದ್ಯಾರ್ಥಿಗಳ ಭವಿಷ್ಯಕ್ಕೆ ದಿಕ್ಕು ನೀಡುವ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಪರೀಕ್ಷೆಯಲ್ಲಿ ಯಶಸ್ಸು ಗಳಿಸಲು ಪಂಚ ಸೂತ್ರಗಳು” ಎಂಬ ವಿಷಯದ ಕುರಿತು ಹೃದಯಸ್ಪರ್ಶಿ ತರಬೇತಿ ನೀಡಿದರು. ಗುರಿ ಸ್ಪಷ್ಟತೆ, ಸಮಯ ಪಾಲನೆ, ಆತ್ಮವಿಶ್ವಾಸ, ನೆನಪಿನ ಶಕ್ತಿ ಹಾಗೂ ಶಿಸ್ತಿನ ಅಧ್ಯಯನದ ಮಹತ್ವವನ್ನು ಸರಳ ಉದಾಹರಣೆಗಳೊಂದಿಗೆ ವಿವರಿಸಿ, ಸಂದೇಶವನ್ನು ವಿದ್ಯಾರ್ಥಿಗಳ ಮನಸ್ಸಿಗೆ ತಲುಪುವಂತೆ ನಿರೂಪಿಸಿದರು. ವಿದ್ಯಾರ್ಥಿಗಳು ಸಂಪೂರ್ಣ ಏಕಾಗ್ರತೆಯಿಂದ ಉಪನ್ಯಾಸವನ್ನು ಆಲಿಸಿ, ತಮ್ಮ ಸಂಶಯಗಳಿಗೆ ಸಮರ​‍್ಕ ಉತ್ತರಗಳನ್ನು ಪಡೆದುಕೊಂಡರು. 

ಕಾರ್ಯಕ್ರಮಕ್ಕೆ ಶಾಲೆಯ ಪ್ರಾಚಾರ್ಯರಾದ ಕೆ.ಎನ್‌. ವೀರೇಶ್ ಅಧ್ಯಕ್ಷತೆ ವಹಿಸಿ, ಇಂತಹ ಮಾರ್ಗದರ್ಶಕ ಉಪನ್ಯಾಸಗಳು ವಿದ್ಯಾರ್ಥಿಗಳ ಜೀವನದಲ್ಲಿ ದಿಕ್ಕು ತೋರಿಸುವ ಬೆಳಕಾಗುತ್ತವೆ ಎಂದು ಅಭಿಪ್ರಾಯಪಟ್ಟರು. ಉಪನ್ಯಾಸಕ ಹೆಚ್‌. ಮಲ್ಲಿಕಾರ್ಜುನ ತಮ್ಮ ಅಮೂಲ್ಯವಾದ ಸಮಯವನ್ನು ವಿದ್ಯಾರ್ಥಿಗಳ ಶ್ರೇಯಸ್ಸಿಗಾಗಿ ಸಮರ​‍್ಿಸುತ್ತಿರುವುದು ಪ್ರಶಂಸನೀಯ; ಇಂತಹ ಉಪನ್ಯಾಸಕರು ವಿರಳ ಎಂದು ಅವರು ಹೇಳಿದರು. 

ನಿಲಯಪಾಲಕರಾದ ಬಿ.ಎಸ್‌. ಮಾರಣ್ಣ. ಸಂಗೀತ ಶಿಕ್ಷಕರಾದ ಹೆಗ್ಗಪ್ಪ ಪರ್ಸನಾಯ್ಕರ್, ಬೆನ್ನೂರು ಶಾಂತ, ಚಿತ್ರಕಲಾ ಶಿಕ್ಷಕರಾದ ಪುಷ್ಪ, ಪರಿಚಾರಿಕಿ ಹನುಮಕ್ಕ ಕೆ. ಪರಶುರಾಮ್, ದೈಹಿಕ ಶಿಕ್ಷಕರಾದ ಎಂ. ರಮೇಶ್ ಮತ್ತು ಸಿಬ್ಬಂದಿವರ್ಗದವರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಸಾರ್ಥಕತೆ ನೀಡಿದರು. ಈ ತರಬೇತಿಯಿಂದ ವಿದ್ಯಾರ್ಥಿಗಳು ಪರೀಕ್ಷೆಯ ಬಗ್ಗೆ ಧೈರ್ಯ, ಆತ್ಮವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯೊಂದಿಗೆ ಮುನ್ನಡೆಯುವ ಪ್ರೇರಣೆಯನ್ನು ಪಡೆದರು.