ಲೋಕದರ್ಶನ ವರದಿ
ಕೊಪ್ಪಳ 03: ಸಾಹಿತ್ಯ ಸಮ್ಮೇಳಗಳು ನಾಡಿನ ಪರಂಪರೆ ಅಭಿವೃದ್ಧಿ, ಪ್ರಗತಿಯ ಪ್ರತಿಬಿಂಬಗಳಾಗಿವೆ, ನಾಡಿನ ಸರ್ವತೋಮುಖ ಬೆಳವಣಿಗೆಯ ಪೂರಕ ಅಂಶಗಳಾಗಿವೆ. ಸಾಹಿತ್ಯ ಮತ್ತು ಸಂಸ್ಕೃತಿ ಉಳಿವಿಗಾಗಿ ನಾಡಿನಲ್ಲಿ ಸಮ್ಮೇಳನಗಳು ಅಗತ್ಯ ಎಂದು ವೀರಣ್ಣ ವಾಲಿ ಹೇಳಿದರು.
ಅವರು 11ನೇ ತಿರುಳುಗನ್ನಡ ಸಾಹಿತ್ಯ ಸಮ್ಮೇಳನದ ಸವರ್ಾಧ್ಯಕ್ಷರಾದ ಪ್ರಯುಕ್ತ ಅವರಿಗೆ ಕೊಪ್ಪಳ ಜಿಲ್ಲಾ ಉತ್ಸವದ ಪದಾಧಿಕಾರಿಗಳಿಂದ ಅಧಿಕೃತ ಆಹ್ವಾನ ಸಮಾರಂಭದಲ್ಲಿ ಪತ್ನಿ ಅಕ್ಕಮಹಾದೇವಿಯವರ ಜೊತೆ ಗೌರವ ಸ್ವೀಕರಿಸಿ ಮಾತನಾಡಿ, ಸಾಹಿತ್ಯ ಕೃಷಿಯ ಬಗ್ಗೆ ಯುವಕರಲ್ಲಿ ಅಭಿರುಚಿ ಹಾಗೂ ಓದುವ ಹವ್ಯಾಸ ಬೆಳೆಯಬೇಕೆಂದು ಕರೆ ನೀಡಿದರು.
ಸಮ್ಮೇಳನದ ಸಂಚಾಲಕರಾದ ಮಹೇಶಬಾಬು ಸುವರ್ೆ ಪ್ರಸ್ತಾವಿಕವಾಗಿ ಮಾತನಾಡಿ, ತಿರುಳುಗನ್ನಡ ಸಾಹಿತ್ಯ ಸಮ್ಮೇಳನವನ್ನು ಈ ನೆಲದ ಸ್ವಾಭಿಮಾನದ ಸಂಕೇತವಾಗಿ, ಈ ಭಾಗದ ಸಾಹಿತಿಗಳಿಗೆ ಸಮ್ಮೇಳನ ಅಧ್ಯಕ್ಷರಾಗಿ ಮಾಡಿ ಅವರ ಸಾಹಿತ್ಯ ಕೃತಿಗಳ ಬೆಳಕು ಬೀರುವ ಪಯತ್ನವನ್ನು ಮಾಡುತ್ತೀರುವದಾಗಿ ತಿಳಿಸಿದರು.
ಜಿಲ್ಲಾ ಅಧ್ಯಕ್ಷರಾದ ಜಿ.ಎಸ್.ಗೋನಾಳ ಮಾತನಾಡಿ, ವೀರಣ್ಣ ವಾಲಿ ರವರನ್ನು ಸವರ್ಾಧ್ಯಕ್ಷರಾಗಿ ಮಾಡಿದ್ದು ಸೂಕ್ತ ಹಾಗೂ ಸಮಂಜಸವಾಗಿದೆ. ಒಬ್ಬ ಸಜ್ಜನ ಸಾಹಿತಿಗೆ ದೊರೆತ ಒಂದು ಹೆಮ್ಮೆಯ ಗೌರವವಾಗಿದೆ, ಕವಿ ಗೋಷ್ಠಿ, ಪುಸ್ತಕಗಳಿಗೆ ಸಾಹಿತ್ಯ ಪ್ರಶಸ್ತಿ, ಪ್ರಥಮ ಕೊಪ್ಪಳ ಜಿಲ್ಲಾ ಸಿರಿಗ್ನನಡ ಸಮ್ಮೇಳನವನ್ನು ಈ ಸಂದರ್ಭದಲ್ಲಿ ಹಮ್ಮಿಕೊಳ್ಳಲು ವಾಲಿರವರಂತ ಸಾಹಿತಿ ಪ್ರೇರಕ ಶಕ್ತಿ ಎಂದರು.
ಪತ್ರಕರ್ತರಾದ ಎನ್.ಎಂ.ದೊಡ್ಡಮನಿ ಮಾತನಾಡಿ, ವಾಲಿಯವರು ಶಿಕ್ಷಕರಾಗಿ, ಸಾಹಿತಿ ಕೃಷಿ ಮೂಲಕ ಪ್ರಖ್ಯಾತಿಯನ್ನು ಹೊಂದಿ, ತಮ್ಮ ಬರವಣಿಗೆಯ ಮೂಲಕ ಸಾಮಾಜಿಕ ಮತ್ತು ಸಾಹಿತ್ಯ ಲೋಕದಲ್ಲಿ ಹೆಚ್ಚಿನ ಕೃಷಿ ಮಾಡಿದ್ದು ಅವರನ್ನು ಸವರ್ಾಧ್ಯಕ್ಷರಾಗಿ ಮಾಡಿದ್ದು ಸೂಕ್ತವಾಗಿದೆ ಎಂದು ಹೇಳಿದರು. ಹಿರಿಯ ಮಹಿಳಾ ಸಾಹಿತಿ ಅನ್ನಪೂರ್ಣ ಮನ್ನಾಪೂರು ರವರು ಸುಶ್ರಾವ್ಯಾಗಿ ಗೀತೆ ಗಾಯನ ಹಾಡಿ ಮತ್ತು ಮಾತನಾಡಿ, ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡಿದ ತಿರುಳುಗನ್ನಡದ ನಾಡಿನ ಅವಕಾಶ ವಂಚಿತ ಸಾಹಿತಿಗಳಿಗೆ ಸಮ್ಮೇಳನದ ಸವರ್ಾಧ್ಯಕ್ಷತೆಯನ್ನು ಜವಾಬ್ದಾರಿ ನೀಡಿ ಅವರು ಸಾಹಿತ್ಯ ಲೋಕದ ಪಯಣವನ್ನ ಸಾರ್ವಜನಿಕರಿಗೆ ಪರಿಚಯಸುವ ಸಂಪ್ರಾದಾಯವನ್ನು ಮಹೇಶಬಾಬು ಸುವರ್ೆರವರು ಮಾಡುತ್ತೀದ್ದಾರೆ. ಅದಕ್ಕೆ 11ನೇ ತಿರುಳುಗನ್ನಡ ಸಾಹಿತ್ಯ ಸಮ್ಮೇಳನದ ಸವರ್ಾಧ್ಯಕ್ಷರಾಗಿ ವೀರಣ್ಣ ವಾಲಿ ಅವರನ್ನು ಆಯ್ಕೆ ಮಾಡಿದ್ದು ಇದು ಒಂದು ನಿದರ್ಶನ ಎಂದರು. ನಂತರ ಸಾಹಿತಿ ಮಹೇಶ ಮನ್ನಾಪೂರು, ಶಿಕ್ಷಕರಾದ ಮೈಲಾರಪ್ಪ ಉಂಕಿ, ಶ್ರೀನಿವಾಸ ಚಿತ್ರಗಾರ ಮಾತನಾಡಿದರು.
ಹಿರಿಯ ಸಾಹಿತಿ ಮಹಾಂತೇಶ ಮಲ್ಲನಗೌಡರ್ ಆಧ್ಯಕ್ಷತೆವಹಿಸಿ ಮಾತನಾಡಿ, ನಾಗರಿಕರ ವೇದಿಕೆಯು ಸವರ್ಾಧ್ಯಕ್ಷರಾಗಿ ವೀರಣ್ಣ ವಾಲಿ ಅವರನ್ನು ಆಯ್ಕೆ ಮಾಡಿದ್ದು ಸೂಕ್ತ. ಎಲೆಮರೆಕಾಯಿಯಾಗಿದ್ದ ಸಾಹಿತಿಗಳಿಗೆ ಒಂದು ಗೌರವ ಸಿಕ್ಕತಾಗಿದೆ. ಹೀಗೆ ಪ್ರತಿ ವರ್ಷವೂ ಇಂತಹ ಸಾಹಿತ್ಯ ಕೃಷಿ ಮಾಡಿದ ಸಾದಕರನ್ನು ಹುಡುಕಿ ಗೌರವಿಸಿ ಈ ಪರಂಪರೆಯನ್ನು ಮುಂದುವರಿಸಿ ಎಂದರು.
ಈ ವೇಳೆ ಗವಿಸಿದ್ದಪ್ಪ ಬಾರಕೇರ, ಶಿವಕುಮಾರ್ ಹಿರೇಮಠ, ರಾಜರಾಮ ಗಜಾಕೋಶ, ಈರಪ್ಪ ಬಿಜಲಿ, ಪರಮೇಶ್ವರಪ್ಪ ವಿದ್ಯಾಸಾಗರ, ಮೆಹಬೂಬು ಖಾನ್, ಸೇರಿದಂತೆ ಇತರರು ಉಪ್ಪಸ್ಥಿರಿದ್ದರು. ಮಂಜುನಾಥ ಚಿತ್ರಗಾರ ನಿರೂಪಿಸಿದರೆ, ವೈ.ಬಿ.ಜೂಡಿ ವಂದಿಸಿದರು.