ಕಂಪ್ಯೂಟರ್ ಆಫ್ರರೇಟರ್ ಸಂಘ : ಚಾರ್ಲ್ಸ ಬ್ಯಾಬೇಜ್ ಜಯಂತಿ ಕಾರ್ಯಕ್ರಮ
ಬ್ಯಾಡಗಿ 26: ವಿಜ್ಞಾನಿ ಹಾಗೂ ಗಣಿತಜ್ಞ ಚಾರ್ಲ್ಸ ಬ್ಯಾಬೇಜ್ ಅವರು ಕಂಪ್ಯೂಟರ್ ಕಂಡುಹಿಡಿದ ಕಂಪ್ಯೂಟರ್ ಪಿತಾಮಹರಾಗಿದ್ದಾರೆಂದು ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಮಲ್ಲಿಕಾರ್ಜುನ ಹೇಳಿದರು.ಗುರುವಾರ ಪಟ್ಟಣದ ತಾಲೂಕಾ ಪಂಚಾಯತ ಸಭಾಭವನದಲ್ಲಿ ತಾಲೂಕಾ ಕಂಪ್ಯೂಟರ್ ಆಫ್ರರೇಟರ್ ಸಂಘ ಏರಿ್ಡಸಿದ್ದ ಚಾರ್ಲ್ಸ ಬ್ಯಾಬೇಜ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕಂಪ್ಯೂಟರ್ ಈಗ ಸರ್ವೇ ಸಾಮಾನ್ಯವಾದ ಸಾಧನವಾಗಿದೆ. ನಮ್ಮೆಲ್ಲಾ ದಿನಚರಿಗಳು ಪ್ರಾರಂಭವಾಗುವುದು ಮತ್ತು ಕೊನೆಗೊಳ್ಳುವುದು ಕಂಪ್ಯೂಟರ್ ಸಹಾಯದಿಂದಲೇ. ಈಗಂತೂ ನಮ್ಮ ಜೀವನದ ಅವಿಭಾಜ್ಯ ಅಂಗವೇ ಆಗಿ ಹೋಗಿದೆ. ಆದರೆ 19ನೇ ಶತಮಾನದಲ್ಲಿ ಕಂಪ್ಯೂಟರ್ ಎಂಬ ಕಲ್ಪನೆಯನ್ನು ಮೂಡಿಸಿ, ಅದರಲ್ಲಿ ಪ್ರಯೋಗ ಮಾಡಿದವರೇ ಚಾರ್ಲ್ಸ ಬ್ಯಾಬೇಜ್. ಈತ ವಿಜ್ಞಾನಿಯೂ ಹೌದು, ಗಣಿತಜ್ಞನೂ ಹೌದು,
1822ರಲ್ಲಿ ಕಂಪ್ಯೂಟರ್ ತಯಾರಿಕೆಗೆ ನಾಂದಿ ಹಾಡಿದ ಇವರು ಭವಿಷ್ಯದಲ್ಲಿ ಈ ಸಾಧನ ಬಹಳಷ್ಟು ಉಪಕಾರಿ ಎಂದು ಸಾರಿದರು. ಅವರ ಭವಿಷ್ಯವಾಣಿ ಸುಳ್ಳಾಗಲಿಲ್ಲ. ಈಗ ಎಲ್ಲೆಡೆ ಕಂಪ್ಯೂಟರ್ ಅನಿವಾರ್ಯತೆ ಇದೆ. ಆ ಕಾರಣದಿಂದ ಇವರನ್ನು ಕಂಪ್ಯೂಟರ್ ಜನಕ, ಕಂಪ್ಯೂಟರ್ ಪಿತಾಮಹ ಎಂದು ಕರೆಯುತ್ತಾರೆಂದರು.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಅಧ್ಯಕ್ಷ ಬಸವಂತಪ್ಪ ಹುಲ್ಲತ್ತಿ ಮಾತನಾಡಿ ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಕಂಪ್ಯೂಟರ್ ಮಹತ್ವದ ಪಾತ್ರವನ್ನು ವಹಿಸುತ್ತದೆ. ಇಂದಿನ ಯಾಂತ್ರಿಕ ಯುಗದಲ್ಲಿ ಎಲ್ಲವೂ ಬೆರಳ ತುದಿಯಲ್ಲಿಯೇ ನಡೆಯುತ್ತಿವೆ. ಆಧುನಿಕ ಯುಗಕ್ಕೆ ಕಂಪ್ಯೂಟರ್‌ಗಳು ಮಹತ್ತರವಾದ ಕೊಡುಗೆ ನೀಡಿವೆ. ಇಂದಿನ ಜನರ ಜೀವನದಲ್ಲಿ ನಿರ್ಣಾಯಕ ಮತ್ತು ಮಹತ್ವದ ಅಸ್ತಿತ್ವವನ್ನು ಗಣಕಯಂತ್ರಗಳು ಹೊಂದಿವೆ.ಇಂದು ಕಂಪ್ಯೂಟರ್‌ಗಳ ಸಹಾಯದಿಂದ ಇದ್ದಲ್ಲಿಯೇ ಕುಳಿತು ಜಗತ್ತಿನ ಅನೇಕ ವಿಚಾರಗಳನ್ನು ತಿಳಿದುಕೊಳ್ಳಬಹುದಾಗಿದೆ. ಕಂಪ್ಯೂಟರ್‌ಗಳು ಮಾನವನ ಜೀವನಕ್ಕೆ ಅತ್ಯಂತ ಫಲಪ್ರದವಾಗಿವೆ.ಇಂದಿನ ಸ್ಫರ್ಧಾತ್ಮಕ ಜಗತ್ತಿನಲ್ಲಿ ಸ್ಪರ್ಧಿಸಲು ಕಂಪ್ಯೂಟರ್ ತಿಳಿವಳಿಕೆಯುಳ್ಳ ನಾಗರಿಕರಾಗುವುದು ಅತ್ಯಂತ ಮಹತ್ವದ್ದಾಗಿದೆ. ಒಟ್ಟಾರೆ ಇಂದಿನ ಆಧುನಿಕ ಯುಗದಲ್ಲಿ ಕಂಪ್ಯೂಟರ್ ತಂತ್ರಜ್ಞಾನ ಅತ್ಯಗತ್ಯವಾಗಿದ್ದು, ಪ್ರತಿಯೊಂದು ಕೆಲಸದಲ್ಲಿಯೂ ತನ್ನದೇ ಆದ ಕೊಡುಗೆ ನೀಡಿದೆ. ಕೇವಲ ಕೆಲಸಕ್ಕಾಗಿ ಮಾತ್ರವಲ್ಲದೇ ಮನರಂಜನೆ, ಸಾಹಿತ್ಯ ಸೇರಿದಂತೆ ಪ್ರತಿಯೊಂದು ಕ್ಷೇತ್ರಗಳಲ್ಲೂ ಕಂಪ್ಯೂಟರ್ ಕೊಡುಗೆ ಮಹತ್ವದ್ದಾಗಿದೆ ಎಂದರು.ಕಾರ್ಯಕ್ರಮದಲ್ಲಿ ತಾಲೂಕಾ ಪಂಚಾಯತ್ ಮ್ಯಾನೇಜರ್ ಪ್ರಕಾಶ ಹಿರೇಮಠ,ಯೋಜನಾಧಿಕಾರಿ ಎಂ.ಎ.ಅಗಸರ, ಪಿಡಿಓ ಪರಶುರಾಮ ಅಗಸನಹಳ್ಳಿ, ತಾಲೂಕಾ ಕಂಪ್ಯೂಟರ್ ಆಫ್ರರೇಟರ್ ಸಂಘದ ಅಧ್ಯಕ್ಷ ಚೇತನ ಸೇರಿದಂತೆ ತಾಲೂಕಿನ ಎಲ್ಲ ಪಂಚಾಯತಗಳ ಕಂಪ್ಯೂಟರ್ ಆಫ್ರರೇಟರಗಳು ಇದ್ದರು.