ಲೋಕದರ್ಶನ ವರದಿ
ಬೆಳಗಾವಿ 08: ಶೇಖ್ ಸೆಂಟ್ರಲ್ ಶಾಲೆಯಲ್ಲಿ ವಿದ್ಯಾಥರ್ಿಗಳಿಗೆ ಕಂಪ್ಯೂಟರ್ನ ಮೂಲ ಕಲಿಕೆಗಳನ್ನು ಪ್ರೋತ್ಸಾಹಿಸುವದರ ಜೊತೆಗೆ ಅನ್ವೇಷಿಸಿದರು. ಹಾಗೂ ಬೆಳವಣಿಗೆಯನ್ನು ಹೊಂದಿ ಸರಿಯಾದ ಮಾರ್ಗದಲ್ಲಿ ಪ್ರಗತಿಯತ್ತ ಸಾಗುವಂತೆ ಮಾಡುತ್ತಿದೆ. ಅದೇ ಗುರಿಯಿಂದ ಶೇಖ್ ಸೆಂಟ್ರಲ್ ಶಾಲೆಯಲ್ಲಿ ಪಿ.ಎ. ಇನಾಂಧರ್ ಕಂಪ್ಯೂಟರ್ ಲ್ಯಾಬ್ ಇಂದು ಇಂದಿನ ವಿದ್ಯಾಥರ್ಿಗಳಿಗೆ ತಂತ್ರಜ್ಞಾನದ ಕುರಿತಾದ ಹೆಚ್ಚಿನ ಮಾಹಿತಿಯನ್ನು ಪಡೆಯುವ ಅವಕಾಶ ಮಾಡಿಕೊಟ್ಟಿದೆ.
ಈ ಕಾರ್ಯಕ್ರಮದ ಮುಖ್ಯ ಅತಿಥಿಳಾದ ಡಾ.ಪಿ.ಎ ಇನಾಂಧಾರ್ ಇವರು ಮಹಾರಾಷ್ಟ್ರದ ಕಸ್ಮೋಪಾಲಿಟನ್ ಶಿಕ್ಷಣ ಸಂಸ್ಥೆಯ ಅಜಮ್ ಕ್ಯಾಂಪಸ್ ಪೂಣೆಯ ಅಧ್ಯಕ್ಷರು, ಇನ್ನೊಬ್ಬ ಗೌರವಾನ್ವಿತ ಅತಿಥಿ ಡಾ.ಜಡ್.ಎಫ್. ಹಫೀಜ್ ಟ್ರಸ್ಟಿ ಪಿಇಎಸ್ & ಟಿ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶೇಖ್ ಗ್ರೂಫ್ ಆಫ್ ಇನ್ಸ್ಟಿಟೂಶನ್ನ ಅಧ್ಯಕ್ಷ ಡಾ. ಅಬು ಶೇಖ್ರವರು ವಹಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಡಾ. ಎಂ.ಜಿ. ಅತ್ತಾರ್ ಚೀಪ್ ಕೋವಾಡಿನೇಟರ್ ಮತ್ತು ಶೇಖ್ ಸೆಂಟ್ರಲ್ ಶಾಲೆಯ ಮುಖ್ಯೋಪಾಧ್ಯಯ ಸೈಮನ್ ಲೋಖೊ ಉಪಸ್ಥಿತರಿದ್ದರು.
ಡಾ.ಪಿ.ಎ. ಇನಾಂಧಾರ್ರವರು ತಮ್ಮ ಅತಿಥಿಯ ಭಾಷಣದಲ್ಲಿ ಇಂದಿನ ಆಧುನಿಕ ಯುಗದಲ್ಲಿ ಜನರ ಜೀವನವನ್ನು ತಂತ್ರಜ್ಞಾನವು ಅತಿ ಸರಳ ಹಾಗೂ ಸುಲಭವನ್ನಾಗಿಸಿದೆ. ಇಂದಿನ ಪೀಳಿಗೆಗೆ ಕಂಪ್ಯೂಟರ್ ಶಿಕ್ಷಣವು ಮೂಲ ಕಲಿಕೆಯಾಗಿದೆ. ತಮ್ಮ ಜೀವನದ ತಂತ್ರಜ್ಞಾನವು ಅತಿ ಸರಳ ಹಾಗೂ ಸುಲಭವನ್ನಾಗಿದೆ. ಇಂದಿನ ಪೀಳಿಗೆಗೆ ಕಂಪ್ಯೂಟರ್ ಶಿಕ್ಷಣವು ಮೂಲ ಕಲಿಕೆಯಾಗಿದೆ. ತಮ್ಮ ಜೀವನದ ತಂತ್ರಜ್ಞಾನವನ್ನು ಹೇಗೆ ಅಳವಡಿಸಿಕೊಳ್ಳುವುದು ಹಾಗೂ ಅದರ ಅನುಕೂಲತೆಯ ಬಗ್ಗೆ ಸ್ಪಷ್ಟವಾಗಿ ತಿಳಿಸಿ ಕೊಟ್ಟರು.