ಕಡ್ಡಾಯ ಶಿಕ್ಷಣ ಆಂದೋಲನ ಕಾರ್ಯಕ್ರಮ

ಲೋಕದರ್ಶನವರದಿ

ಬ್ಯಾಡಗಿ೨೭: ಶಾಲಾ ಮಕ್ಕಳಿಗೆ ಸರ್ಕಾರಿ  ಶಾಲೆಗಳಲ್ಲಿ ಸಾಕಷ್ಟು ಸೌಲಭ್ಯಗಳನ್ನು ಉಚಿತವಾಗಿ ಒದಗಿಸಲಾಗಿದ್ದು, ಮಕ್ಕಳಿಗೆ ಅವಶ್ಯವಿರುವ ಎಲ್ಲಾ ವಿಷಯಗಳ ಬಗ್ಗೆ ಭೋಧಿಸಲು ಉತ್ತಮ ತರಬೇತಿ ಹೊಂದಿದ ಶಿಕ್ಷಕರಿದ್ದು ಪಾಲಕರು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಸರಕಾರಿ ಶಾಲೆಗಳಿಗೆ ಸೇರಿಸುವಂತೆ ಭಾರತ ಸೇವಾದಳ ಬೆಂಗಳೂರ ಕೇಂದ್ರ ಸಮಿತಿಯ ನಿದರ್ೇಶಕ ಬಸವಂತಪ್ಪ ಹುಲ್ಲತ್ತಿ ಹೇಳಿದರು.

  ಸ್ಥಳೀಯ ತಾಲೂಕಾ ಪಂಚಾಯತ ಕಟ್ಟಡದ ಕಾರ್ಯಾಲಯ ಯದಲ್ಲಿ ಜಿಲ್ಲಾ ಭಾರತ ಸೇವಾದಳ ಸಮಿತಿ ಹಾಗೂ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಜರುಗಿದ ಉಚಿತ ಮತ್ತು ಕಡ್ಡಾಯ ಶಿಕ್ಷಣ ಆಂದೋಲನ ಮತ್ತು ಪತ್ರಿಕಾಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

        ಶಿಕ್ಷಣದಿಂದ ಮಕ್ಕಳು ವಂಚಿತವಾಗಬಾರದು ಎನ್ನುವ ದೃಷ್ಠಿಯಿಂದ ಶಿಕ್ಷಣ ಕಾಯ್ದೆ ಜಾರಿಗೆ ಬಂದು 6 ರಿಂದ 14 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣವನ್ನು ಪಾಲಕರು ಕೊಡಿಸಬೇಕಾಗಿದೆ. ವೇಗದ ಜಗತ್ತಿನಲ್ಲಿ ವ್ಯಕ್ತಿ ಸಮಾಜದಲ್ಲಿ ಉತ್ತಮ ಬದುಕು ಸಾಗಿಸಲು ಕನಿಷ್ಠ ಶೈಕ್ಷಣಿಕ ಅರ್ಹತೆಯನ್ನು ಹೊಂದಿರಲೇಬೇಕಾಗುತ್ತದೆ, ಇದನ್ನು ಮನಗಂಡ ಸಕರ್ಾರ ಕಳೆದ 2009 ರಿಂದ ಕಡ್ಡಾಯ ಶಿಕ್ಷಣವನ್ನು ಕಾನೂನಿನ ವ್ಯಾಪ್ತಿಗೊಳಪಡಿಸಿದೆ ಆದ್ದರಿಂದ ಪಾಲಕರು ತಮ್ಮ ಜವಾಬ್ದಾರಿಯನ್ನು ನಿರ್ವ ಹಿಸುವ ಮೂಲಕ ಮಕ್ಕಳಿಗೆ ಶಿಕ್ಷಣವನ್ನು ಕಡ್ಡಾಯವಾಗಿ ನೀಡುವಂತಾಗಬೇಕು ಎಂದರು.

    ಇಂದಿನ ವಿದ್ಯಾರ್ಥಿಗಳಿಗೆ ಭವ್ಯ ಭಾರತದ ಕನಸನ್ನು ನನಸಾಗಿಸುವ ಜವಾಬ್ದಾರಿಯಿದೆ ಈ ಹಿನ್ನೆಲೆಯಲ್ಲಿ ಸಕರ್ಾರದ ಸೌಲಭ್ಯಗಳನ್ನು ಪಡೆದುಕೊಂಡು ಉತ್ತಮ ಶಿಕ್ಷಣವನ್ನು ಪಡೆದುಕೊಳ್ಳುವ ಮೂಲಕ ದೇಶದ ಪ್ರಗತಿಗೆ ಕೈಜೋಡಿಸಬೇಕಿದೆ. 

  ರಾಜ್ಯ ಹಾಗೂ ಕೇಂದ್ರ ಸರಕಾರಗಳು ಶಿಕ್ಷಣದ ಅಭಿವೃದ್ಧಿಗಾಗಿ ಸಾಕಷ್ಟು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದು ಈ ಯೋಜನೆಗಳು ಸಫಲಗೊಳ್ಳಲು ಶಿಕ್ಷಣ ಅಭಿವೃದ್ಧಿಯಲ್ಲಿ ಸಮುದಾಯದ ಸಕ್ರಿಯ ಪಾಲ್ಗೊಳ್ಳುವಿಕೆ ಮುಖ್ಯವಾಗಿದ್ದು ಈ ನಿಟ್ಟಿನಲ್ಲಿ ಸಮುದಾಯ  ಜಾಗೃತಿಗೊಂಡಾಗ ಮಾತ್ರ ಸರಕಾರದ ಶೈಕ್ಷಣಿಕ ಯೋಜನೆಗಳು ಯಶಸ್ವಿಯಾಗಿ ಅನುಷ್ಠಾನಗೊಳ್ಳಲು ಸಾಧ್ಯವಲ್ಲದೇ ಸ್ಪಧರ್ಾತ್ಮಕವಾದ ಇಂದಿನ ದಿನಗಳಲ್ಲಿ ಮಕ್ಕಳ ಸವರ್ೋತೋಮುಖ ಬೆಳವಣೆಗೆಗೆ ಶಿಕ್ಷಣ ಅತ್ಯಗತ್ಯವಾಗಿದೆ. ಪ್ರಸಕ್ತ ಸಾಲಿನಿಂದ ಕೆಲವೊಂದು ಸರಕಾರಿ ಶಾಲೆಗಳಲ್ಲಿ  1ನೇ ತರಗತಿಯಿಂದ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡುವಂತ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. 

 ಈ ದಿಶೆಯಲ್ಲಿ ಸಾರ್ವಜನಿಕರು ತಮ್ಮ ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳುವ ಮೂಲಕ ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಸರಕಾರಿ ಶಾಲೆಗೆ ಸೇರಿಸುವಂತೆ ಒತ್ತಾಯಿಸಿದರು.

   ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಾರತ ಸೇವಾದಳದ ಜಿಲ್ಲಾ ಅಧ್ಯಕ್ಷ ಕೃಷ್ಣಪ್ಪ ದೀವಿಗಿಹಳ್ಳಿ ಮಾತನಾಡಿ ಪಾಲಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸುವಂತೆ ಹಾಗೂ ಮಕ್ಕಳಿಗೆ ಕಡ್ಡಾಯವಾಗಿ ಸರಕಾರಿ ಶಾಲೆಗಳಲ್ಲಿಯೇ ಶಿಕ್ಷಣ ಕೊಡಿಸುವಂತೆ ಕರೆ ನೀಡಿದರು. 

 ಕಾರ್ಯಕ್ರಮದ ಪೂರ್ವದಲ್ಲಿ ಜಿಲ್ಲಾ ಹಾಗೂ ತಾಲೂಕಾ ಸೇವಾದಳದ ವತಿಯಿಂದ ಸಾರ್ವಜನಿಕರಿಗೆ ಕರ ಪತ್ರಗಳನ್ನು ಹಂಚುವ ಮೂಲಕ ತಮ್ಮ ಮಕ್ಕಳು ಸೇರಿದಂತೆ ಇತರೇ ಮಕ್ಕಳನ್ನು ಸರಕಾರಿ ಶಾಲೆಗಳಲ್ಲಿ ಕಡ್ಡಾಯವಾಗಿ ಸೇರಿಸುವಂತೆ ಕರ ಪತ್ರಗಳನ್ನು ವಿತರಿಸಲಾಯಿತು.

  ವೇದಿಕೆಯಲ್ಲಿ ತಾಲೂಕಾ ಭಾರತ ಸೇವಾದಳ ಅಧ್ಯಕ್ಷ ನಾಗರಾಜ ಗುತ್ತಲ, ಕಾರ್ಯದಶರ್ಿ ವಿ.ವಿ.ಹುಣಸಿಕಟ್ಟಿ, ತಾಲೂಕಾ ಪಂಚಾಯತ ವ್ಯವಸ್ಥಾಪಕ ಪ್ರಕಾಶ ಹಿರೇಮಠ, ಜಿಲ್ಲಾ ಭಾರತ ಸೇವಾದಳ ಗೌರವಾಧ್ಯಕ್ಷ ಎಂ.ಎಚ್.ಚೊಟಪ್ಪನವರ, ಉಪಾಧ್ಯಕ್ಷೆ ರೇಣುಕಾ ಆಲೂರ, ಕೋಶಾಧ್ಯಕ್ಷ ಜಗದೀಶ ಜೋಗಿಹಳ್ಳಿ, ಕಾರ್ಯದಶರ್ಿ ವಿನಾಯಕ ಗಡ್ಡದ, ಜಿಲ್ಲಾ ಸಂಘಟಕ ಪ್ರಕಾಶ ಗೋಣಿ, ಪಾಂಡು ಸುತಾರ, ಕೊಟ್ರೇಶಪ್ಪ ಅಂಗಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.