ಕೊಪ್ಪಳ 03: ಎಸ್.ಸಿ.ಪಿ./ ಟಿ.ಎಸ್.ಪಿ.ಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ನೀಡುವ ವಿವಿಧ ಯೋಜನೆಗಳಡಿ ಅರ್ಹ ಫಲಾನುಭವಿಗಳನ್ನು ಶೀಘ್ರ ಆಯ್ಕೆ ಮಾಡಿ ಸೌಲಭ್ಯ ಕಲ್ಪಿಸುವಂತೆ ಕೊಪ್ಪಳ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಎಸ್.ಸಿ.ಪಿ./ ಟಿ.ಎಸ್.ಪಿ.ಯಡಿ ವಿವಿಧ ಇಲಾಖೆಗಳ ಮೂಲಕ ನೀಡುವ ಸೌಲಭ್ಯಗಳ ಆಯ್ಕೆ ಪ್ರಕ್ರೀಯೆ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರದಂದು ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪಶುಸಂಗೋಪನೆ, ಮೀನುಗಾರಿಕೆ, ರೇಷ್ಮೆ ಅರಣ್ಯ, ವಿವಿಧ ಇಲಾಖೆ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮಗಳ ಮೂಲಕ ಪ್ರಸಕ್ತ ಸಾಲಿನ ಎಸ್.ಸಿ.ಪಿ./ ಟಿ.ಎಸ್.ಪಿ. ಯೋಜನೆಗಳಡಿ ನೀಡುವ ಅನೇಕ ಸೌಲಭ್ಯಗಳಿಗೆ ಫಲಾನುಭವಿಗಳನ್ನು ಇನ್ನೂ ಏಕೆ ಆಯ್ಕೆ ಮಾಡುತ್ತಿಲ್ಲ. ಆಯೋಗಗಳು ಭೇಟಿ ನೀಡಿದಾಗ ಏನು ಉತ್ತರಿಸುವಿರಿ. ಪ್ರಸಕ್ತ ಸಾಲಿನ ಆಯ್ಕೆ ಪ್ರಕ್ರೀಯೆಯು ಡಿಸೆಂಬರ್. 25 ರೊಳಗಾಗಿಯೇ ಪೂರ್ಣಗೊಳ್ಳಬೇಕಾಗಿತ್ತು. ಆದರೆ ಇನ್ನೂ ಫಲಾನುಭವಿಗಳ ಆಯ್ಕೆ ಆಗಿಲ್ಲ. ವಿವಿಧ ಯೋಜನೆಗಳ ಗುರಿ, ಆಯ್ಕೆ ಕುರಿತು ಶಾಸಕರಿಗೆ ಪಟ್ಟಿ ನೀಡಿ ಅವರ ಮೂಲಕವೇ ಆಯ್ಕೆ ಪ್ರಕ್ರೀಯೆ ನಡೆಸಿ, ಅರ್ಹರಿಗೆ ಯೋಜನೆಗಳ ಸದುಪಯೋಗವನ್ನು ಕೂಡಲೇ ಒದಗಿಸಬೇಕು. ಈ ಕುರಿತು ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸುವಂತೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು. ಆಯ್ಕೆಯಾದ ಫಲಾನುಭವಿಗಳ ಆಧಾರ್ ಕಡ್ಡಾಯವಾಗಿ ಪರಿಶೀಲಿಸಬೇಕು. ಅಲ್ಲದೇ ಕುಟುಂಬದಲ್ಲಿ ಯಾರು ಸೌಲಭ್ಯ ಪಡೆದಿರುವರು ಅಥವಾ ಇಲ್ಲ ಎಂಬುದರ ಬಗ್ಗೆಯೂ ಸಹ ಪರಿಶೀಲಿಸಿ. 2016-17 ಮತ್ತು 2017-18ರ ಸಾಲಿನ ಯಾವುದೇ ಆಯ್ಕೆ ಪ್ರಕ್ರೀಯೆ ಉಳಿಯದಿರಲಿ. ಈ ಬಗ್ಗೆ ಸೂಕ್ತ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ಸಂಬಂಧಿಸಿದ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ವೆಂಕಟ್ರಾಜಾ, ಸಮಾಜ ಕಲ್ಯಾಣ ಇಲಾಖೆ ಉಪನಿದರ್ೇಶಕ ಬಿ. ಕಲ್ಲೇಶ, ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಪರಮೇಶ್ವರಪ್ಪ, ತಾ.ಪಂ. ಕಾರ್ಯನಿವರ್ಾಹಕ ಅಧಿಕಾರಿ ಟಿ. ಕೃಷ್ಣಮೂತರ್ಿ ಸೇರಿಂದತೆ ಪಶುಸಂಗೋಪನೆ, ಮೀನುಗಾರಿಕೆ, ರೇಷ್ಮೆ, ಅರಣ್ಯ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.