ಜನ ಸಾಮಾನ್ಯ ಕವಿ ಜ್ಞಾನಿ ವಿಜ್ಞಾನಿ ವಿಮರ್ಶಕ ಚಿಕಿತ್ಸಕ ಪ್ರಗತಿಪರ ವಚನಕಾರ ಸಿದ್ದರಾಮೇಶ್ವರ - ತಹಶೀಲ್ದಾರ್ ವಿಶ್ವನಾಥ
ಸಿರುಗುಪ್ಪ 15: ಜನಸಾಮಾನ್ಯರ ಕವಿಗಳ ದೃಷ್ಟಿಕೋನದ ಪವಾಡ ಪುರುಷ ಜ್ಞಾನಿಗಳ ವಿಜ್ಞಾನಿಗಳ ವಿಮರ್ಶಕರ ಚಿಕಿತ್ಸಾ ಕರ ಪ್ರಗತಿಪರರ ದೃಷ್ಟಿಕೋನದ ವಚನಕಾರ ಪರಿವರ್ತನ ಪುರುಷ ಸಿದ್ದರಾಮೇಶ್ವರ ಎಂದು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರು ತಾಲೂಕ ಕಾರ್ಯನಿರ್ವಾಹಕ ದಂಡಾಧಿಕಾರಿ ತಾಹಸಿಲ್ದಾರ್ ವಿಶ್ವನಾಥ ಅವರು ಹೇಳಿದರು.
ಸಿರುಗುಪ್ಪ ನಗರದ ನೇತಾಜಿ ವ್ಯಾಯಾಮ ಶಾಲಾ ಮೈದಾನದಲ್ಲಿ ಕರ್ನಾಟಕ ಸರ್ಕಾರ ತಾಲೂಕು ಆಡಳಿತ ತಾಲೂಕು ಪಂಚಾಯತ್ ನಗರ ಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಭಾಗಿತ್ವದಲ್ಲಿ ಏರಿ್ಡಸಿದ ಶ್ರೀ ಶಿವಯೋಗಿ ಸಿದ್ದರಾಮೇಶ್ವರ 853ನೇ ಜಯಂತಿ ಸಮಾರಂಭದ ಕಾರ್ಯಕ್ರಮದಲ್ಲಿ ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಮುದ್ದಲ ಗೌಡ ಸುಗ್ಗಲ ದೇವಿಯಾಗಿ ಜನ್ಮ ತಾಳಿದ ಇವರ ಪಾಪವನ್ನು ಕಳೆಯಲು ಸ್ವತಹ ಪರಶಿವ ಇವರ ಗರ್ಭದಲ್ಲಿ ಸಿದ್ದರಾಮನಾಗಿ ಜನಿಸಿದ ಬಗ್ಗೆ ವಿವರಿಸಿ ಮಾತನಾಡುತ್ತಿದ್ದರು.
ತಾಲೂಕ ವಾಲ್ಮೀಕಿ ವಿದ್ಯಾಭಿವೃದ್ಧಿ ಸಂಘದ ಅಧ್ಯಕ್ಷ ಹಾಗೂ ನಗರಸಭಾ ಮಾಜಿ ಅಧ್ಯಕ್ಷರಾದ ಬಿ ಎಂ ಸತೀಶ್ ಅವರು ಮಾತನಾಡಿ ಕಾಯಕ ವರ್ಗದವರ ಅಸ್ಮಿತೆ ಬದುಕಿನ ಪರಿವರ್ತನೆಗೆ ದರ್ಣ ಸಿದ್ದರಾಮರ ಜೀವನ ಎಂದು ಮಾತನಾಡುತ್ತಿದ್ದರು ಎಸ್ ಇ ಎಸ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಎಂ ಪಂಪಾಪತಿ ಅವರು ಮುಖ್ಯ ಭಾಷಣಕಾರರಾಗಿ ಶಿವಯೋಗಿ ಸಿದ್ದರಾಮೇಶ್ವರ ಜೀವನ ಚರಿತ್ರೆಯ ಉಪನ್ಯಾಸ ವಿವರಿಸಿ ಮಾತನಾಡಿದರು.
ಡಾ ಬಿ ಆರ್ ಅಂಬೇಡ್ಕರ್ ಸಂಘದ ಅಧ್ಯಕ್ಷ ಕೊಡ್ಲೆ ಮಲ್ಲಿಕಾರ್ಜುನ ಮುಖಂಡ ಧರ್ಪನಾಯಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್ ಗುರ್ಪ ಅವರು ಮಾತನಾಡಿ ಜಂಗಮ ಸ್ವರೂಪಿ ಮಲ್ಲಯ್ಯ ದರ್ಶನಕ್ಕಾಗಿ ಶ್ರೀಶೈಲಕ್ಕೆ ಪ್ರಯಾಣಿಸಿದ ಸಿದ್ದರಾಮ ದರ್ಶನ ಸಿಗದೇ ಇದ್ದಾಗ ್ರಾಣಾರೆ್ಪಣಗೆ ಹೊರಡುತ್ತಾನೆ ಆಗ ಸಾಕ್ಷಾತ್ ಶೈಲಾ ಮಲ್ಲಿಕಾರ್ಜುನ ಬಂದು ಕೈಲಾಸಕ್ಕೆ ಕರೆದುಕೊಂಡು ಹೋದ ಎನ್ನುವ ನಂಬಿಕೆ ಕವಿ ರಾಘವಾಂಕನದು ಆತನ ದೃಷ್ಟಿಯಲ್ಲಿ ಪರಂಪರೆಯ ಅಗ್ರಜರಾಗಿ ಸಿದ್ದರಾಮ ಕಾಣಿಸುತ್ತಾರೆ ಪ್ರಭು ದೇವರು ಕರ್ಮಯೋಗಿ ಸಿದ್ದರಾಮರಿಗೆ ಚನ್ನಬಸವಣ್ಣನವರಿಂದ ದೀಕ್ಷೆ ಕೊಡಿಸಿ ಶಿವಯೋಗಿ ಸಿದ್ದರಾಮರನ್ನಾಗಿ ಪರಿವರ್ತನೆ ಮಾಡುತ್ತಾರೆ ಎಂದರು.
ನಗರ ಸಭೆ ಅಧ್ಯಕ್ಷೆ ಬಿ ರೇಣುಕಮ್ಮ ಸದಸ್ಯೆ ಶ್ವೇತಾ ರಾಷ್ಟ್ರೀಯ ಸಾಕ್ಷರತಾ ಸಮಾಜ ಸುಧಾರಕ ಅಬ್ದುಲ್ ನಬಿ ತಾಲೂಕು ಸಿದ್ದರಾಮೇಶ್ವರ ಭೋವಿ ವಡ್ಡರ ಸಂಘದ ಅಧ್ಯಕ್ಷ ಜಿ ಗಾಳೆಪ್ಪ ಸರ್ವ ಪದಾಧಿಕಾರಿಗಳು ಸದಸ್ಯರು ಪತ್ರಿಕಾ ಮಿತ್ರರು ಪಾಲ್ಗೊಂಡಿದ್ದರು ತಹಶೀಲ್ದಾರ್ ಎಚ್ ವಿಶ್ವನಾಥ ಬಿ ಎಂ ಸತೀಶ್ ಅಬ್ದುಲ್ ನಬಿ ಕೊಡ್ಲೆ ಮಲ್ಲಿಕಾರ್ಜುನ ಎಮ್ ಪಂಪಾಪತಿ ಸೇರಿದಂತೆ ಮತ್ತಿತರ ಗಣ್ಯರಿಗೆ ಗೌರವಿಸಿ ಸನ್ಮಾನಿಸಲಾಯಿತು ಶಿಕ್ಷಕ ಜೆ ನರಸಿಂಹಮೂರ್ತಿ ಅವರು ಕಾರ್ಯಕ್ರಮ ನಿರೂಪಿಸಿದರು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಮಡ್ಡೇರು ಸಿದ್ದಯ್ಯ ಅವರು ಸರ್ವರನ್ನು ಸ್ವಾಗತಿಸಿ ವಂದಿಸಿದರುಶಿವಯೋಗಿ ಸಿದ್ದರಾಮೇಶ್ವರ ಭಾವಚಿತ್ರದ ಮೆರವಣಿಗೆ ಸರ್ಕಾರಿ ತಾಲೂಕ ಕ್ರೀಡಾಂಗಣದಿಂದ ಮುಖ್ಯ ರಸ್ತೆಯಿಂದ ನೇತಾಜಿ ವ್ಯಾಯಾಮ ಶಾಲಾ ಮೈದಾನಕ್ಕೆ ಮೆರವಣಿಗೆ ತೆರಳಿತು.