ಮಾಧ್ಯಮ ಕ್ಷೇತ್ರದಲ್ಲಿ ಬದ್ಧತೆ ಮುಖ್ಯ: ಸಂಗಣ್ಣ

ಲೋಕದರ್ಶನ ವರದಿ

ಕೊಪ್ಪಳ 16: ಪ್ರತಿಯೊಬ್ಬ ವ್ಯಕ್ತಿ ಒಂದು ಗುರಿ ಇಟ್ಟು ಕೊಂಡು ಅತ್ಮ ವಿಶ್ವಾಸದಿಂದ ಮುಂದೆ ಸಾಗಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ,  ಛಲ ಮತ್ತು ಗುರಿ ಇದ್ದರೆ ಮಾತ್ರ ಜೀವನ ಯಶಸ್ಸು ಕಾಣಲು ಸಾಧ್ಯವಾಗುವುದು ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವವರು ತಮ್ಮ ಕ್ಷೇತ್ರದಲ್ಲಿಯ ವೃತ್ತಿ ಬದ್ಧತೆಯನ್ನು ಉಳಿಸಿಕೊಂಡು ಹೋಗಬೇಕಾಗಿದೆ ಎಂದು ಸಂಸದ ಸಂಗಣ್ಣ ಕರಡಿ ಅಭಿಪ್ರಾಯ ಪಟ್ಟರು.  

ಇಲ್ಲಿನ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಅವರು  ಕೊಪ್ಪಳ ಕೋಟೆ ಕದಂಬ ದಿನ ಪತ್ರಿಕೆಯನ್ನು ಬಿಡುಗಡೆ ಮಾಡಿ ಮಾತನಾಡರು. ಇಂದಿನ ದಿನಮಾನಗಳಲ್ಲಿ ದಿನ ಪತ್ರಿಕೆ ನಡೆಸುವುದು ಬಹಳ ಕಷ್ಟದ ಕೆಲಸವಾಗಿದೆ ಕಾರಣ ಜಾಗತೀಕರಣದ ನಂತರ ಸಮೂಹ ಮಾಧ್ಯಮಗಳು ಸಾಮಾಜಿಕ ಜಾಲತಾಣದಲ್ಲಿ ಹಾಗೂ ಟಿವಿ ಮಾಧ್ಯಮದಂತಹ ಈ ಸಂದರ್ಭದಲ್ಲಿ ಮುದ್ರಣ ಮಾಧ್ಯಮವು ಬಹಳ ಕುಬ್ಜವಾಗಿ ಕಾಣುತ್ತದೆ. ಆದರೆ ಮುದ್ರಣ ಮಾಧ್ಯಮ ಪರಿಣಾಮಕಾರಿಯಾದ ಮಾಧ್ಯಮವಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು. ಇಂತಹ ಒಂದು ದುಸ್ಸಾಹಸಕ್ಕೆ  ಕೋಟೆ ಕದಂಬ ದಿನಪತ್ರಿಕೆಯ ಸಂಪಾದಕ ಎನ್ಎಂ. ದೊಡ್ಡಮನಿ ಕೈ ಹಾಕಿರುವುದು ನಿಜಕ್ಕೂ ಮಚ್ಚಿಗೆ ಪಡುವಂತ ವಿಚಾರವಾಗಿದೆ ಎಂದರು.

ಪತ್ರಿಕೆ ಸಮಾಜದ ಅಂಕು ಡೊಂಕು ತಿದ್ದುವದರ ಜೊತೆಗೆ ಸಕರ್ಾರದ ವೈಪಲ್ಯಗಳನ್ನು ಎತ್ತಿ ತೋರಿಸುವ ಕೆಲಸ ಮಾಡಬೇಕು, ವೃತ್ತಿಗೋಸ್ಕರ ನಾನು ಕೆಲಸ ಮಾಡುತ್ತಿದ್ದೇನೆ ಎಂದು ತಿಳಿದು ಕೆಲಸ ಮಾಡಬೇಕು ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು. 

ನಂತರ ಮಾತನಾಡಿದ ಜಿಲ್ಲಾ ವಾತರ್ಾಧಿಕಾರಿ ಧನಂಜಯ ಬಿ. ರಾಜ್ಯದಲ್ಲಿ ದಿನ ಪತ್ರಿಕೆಗಳು ಚೇಳಿನ ಕೊಂಡಿಯಂತೆ ಬೆಳೆಯುತ್ತಿದ್ದು ಅಂದು ಕೊಂಡಷ್ಟು ದಿನ ಪತ್ರಿಕೆ ನಡೆಸುವುದು ಸುಲಭದ ಮಾತಲ್ಲ ಇಲಾಖೆಯಲ್ಲಿ ಹಲವಾರು ಯೋಜನೆಗಳು ಇದ್ದರೂ ಅದು ಕೇವಲ ವಾತರ್ಾ ಇಲಾಖೆಗೆ ಒಳಪಟ್ಟ ಪತ್ರಿಕೆಗಳಿಗೆ ಮಾತ್ರ ಇಲಾಖೆಯ ಸೌಲಭ್ಯ ಪಡೆಯಲು ಸಾಧ್ಯ, ಹಣ ಮತ್ತು ಶ್ರಮ ವಹಿಸಿ ಸತತವಾಗಿ ಒಂದು ವರ್ಷ ಪತ್ರಿಕೆ ಸುದ್ದಿ ಪ್ರಕಟಿಸಿದರೆ ಆಗ ನಮ್ಮ ಇಲಾಖೆಯ ಮಾನ್ಯತೆ ಸಿಗುತ್ತದೆ ಎಂದರು ಹೇಳಿದರು, 

ಹಿರಿಯ ನ್ಯಾಯವಾದಿ ಪೀರಾ ಹುಸೇನ್ ಹೊಸಳ್ಳಿ, ಕೆ.ಎಂ.ಸೈಯದ್, ಜೆಡಿಎಸ್ ಜಿಲ್ಲಾ ಕಾಯರ್ಾಧ್ಯಕ್ಷ ವಿರೇಶ್ ಮಹಾಂತಯ್ಯನಮಠ, ಡಾ. ಮಹಾಂತೇಶ ಮಲ್ಲನ ಗೌಡ್ರ  ಹಿರಿಯ ಪತ್ರಕರ್ತ ಹರೀಶ್ ಹೆಚ್.ಎಸ್ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ. ಸಾದಿಕ್ ಅಲಿ ಮಾತನಾಡಿದರು. ಕೊಪ್ಪಳ ಕಂದಾಯ ನಿರೀಕ್ಷಕ ಮಂಜುನಾಥ ಮ್ಯಾಗಳಮನಿ, ಇರಕಲಗಡ್ ಕಂದಾಯ ನಿರೀಕ್ಷಕ ಮಲ್ಲಿಕಾಜರ್ುನ್ ಬಿ. ಹಲಗೇರಿ ಗ್ರಾ.ಪಂ.ಅಧ್ಯಕ್ಷ ದೇವಪ್ಪ ಓಜನಳ್ಳಿ, ದಲಿತ ಮುಖಂಡರಾದ ಚನ್ನಬಸಪ್ಪ ಹೊಳೆಯಪ್ಪನವರ, ಹನುಮಂತಪ್ಪ ಮ್ಯಾಗಳಮನಿ, ರಾಜಶೇಖರ ದೊಡ್ಡಮನಿ, ಶಿವಪ್ಪ ಪೂಜಾರ್ ವೇದಿಕೆ ಮೇಲೆ ಇದ್ದರು. ಹಿರಿಯ ಪತ್ರಕರ್ತ ಜಿ.ಎಸ್.ಗೋನಾಳ ಸ್ವಾಗತಿಸಿದರು, ಕೋಟೆ ಕದಂಬ ದಿನಪತ್ರಿಕೆಯ ಸಂಪಾದಕ ಎನ್.ಎಂ.ದೊಡ್ಡಮನಿ ಪ್ರಸ್ತಾವಿಕವಾಗಿ ಮಾತನಾಡಿದರು. ಅನ್ನಪೂರ್ಣಮ್ಮ ಮನ್ನಾಪುರ ಪ್ರಾಥರ್ಿಸಿದರು. ಮಂಜುನಾಥ ಪೂಜಾರ ನಿರೂಪಿಸಿದರು.