ಮಾತೃ ಹೃದಯಗಳ ಪುಣ್ಯಸ್ಮರಣೆ: ಸ್ವಯಂ ಪ್ರೇರಿತ ರಕ್ತದಾನ ಶಿಬಿರ- ದೇಹ ದಾನಕ್ಕೆ ಪ್ರೇರಣೆ
ರಾಣೇಬೆನ್ನೂರು 12: ಧಾನದಲ್ಲಿ ಧಾನ ಅತಿ ಶ್ರೇಷ್ಠವಾದ ಧಾನ ರಕ್ತದಾನ. ಇಂತಹ ಪವಿತ್ರ ಕಾರ್ಯದಲ್ಲಿ ಸ್ವಯಂ ಪ್ರೇರಣೆಯಿಂದ ಭಾಗವಹಿಸಿ, ಅಮೂಲ್ಯ ಜೀವಗಳನ್ನು ಉಳಿಸಲು ಸಹಕಾರಿಯಾಗುತ್ತಿರುವ ರಕ್ತದಾನಿಗಳಿಗೆ ಕಾಕಿ ಜನ ಸೇವಾ ಸಂಸ್ಥೆಯು ಸದಾ ಕೃತಜ್ಞತೆ ಸಲ್ಲಿಸುತ್ತದೆ ಎಂದು ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ ಕಾಕಿ ಹೇಳಿದರು. ಅವರು ಮಂಗಳವಾರ ಇಲ್ಲಿನ ಗೌರಿಶಂಕರ್ ನಗರದ ಕಾಕಿ ಕುಟುಂಬದ ಸಿದ್ಧಿವಿನಾಯಕ ದೇವಸ್ಥಾನದ ಆವರಣದಲ್ಲಿ ದಿ, ದೊಡ್ಡ ನಾಗಪ್ಪ ತಿ. ಕಾಕಿ ಮತ್ತು ದಿ,ಸಣ್ಣನಾಗಪ್ಪ ತಿ.ಕಾಕಿ ಇವರ ಪುಣ್ಯ ಸ್ಮರಣೆಯಲ್ಲಿ ಆಯೋಜಿಸಲಾಗಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಾಗೂ ಭಾರಿ ಸವಾಲ್ ಜವಾಬ್ ಭಜನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾಕಿ ಜನ ಸೇವಾ ಸಂಸ್ಥೆಯು, ಕಳೆದ 11 ವರ್ಷಗಳಿಂದ ಇಂತಹ ಸಾಮುದಾಯಕ ಕಾರ್ಯಕ್ರಮಗಳ ಮೂಲಕ ಜನಸೇವೆಯಲ್ಲಿ ತನ್ನನ್ನೇ ತಾನು ತೊಡಗಿಸಿಕೊಂಡಿದೆ. ತಮ್ಮ ಪೂರ್ವಜರು ಜನಸಾಮಾನ್ಯರಿಗೆ ಅನುಕೂಲವಾಗಲೆಂಬ ಸದುದ್ದೇಶದಿಂದ, ಅತೀ ಕಡಿಮೆ ಬೆಲೆಯಲ್ಲಿ ನಿವೇಶನಗಳನ್ನು, ನೀಡುತ್ತಾ ಜನಸಾಮಾನ್ಯರ ಆರ್ಥಿಕ ಪ್ರಗತಿಗೆ ಅತ್ಯಂತ ಪ್ರಾಮಾಣಿಕತೆಯಿಂದ ಶ್ರಮಿಸುವುದರ ಮೂಲಕ, ಸಮಾಜದಲ್ಲಿ ಜನಮನ್ನಣೆ ಗಳಿಸಿದ್ದಾರೆ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯುತ್ತಿದ್ದೇವೆ ಎಂದ ಅವರು ಇಂತಹ ಸೇವಾ ಕಾರ್ಯಗಳಿಗೆ ಸಾರ್ವಜನಿಕರ ಮಾನಸಿಕ ಸಹಕಾರ ಅಗತ್ಯವಿದೆ ಎಂದು ವಿನಮ್ರ ಮನವಿ ಮಾಡಿದರು.
ಮುಖ್ಯ ಅತಿಥಿಯಾಗಿದ್ದ, ಜನಪದ ಕಲಾವಿದ ಡಾ,ಕೆ. ಸಿ.ನಾಗರಜ್ಜಿ ಅವರು, ಕಾಕಿ ಕುಟುಂಬವು ಇತಿಹಾಸದಿಂದಲೂ, ಸಾಹಿತಿಕ, ಸಾಂಸ್ಕೃತಿಕ, ಆರ್ಥಿಕ, ಮತ್ತು ಜಾನಪದ ಸಂಸ್ಕೃತಿಗೆ ವತ್ತು ನೀಡಿ, ಕಲಾಪೋಷಕರಾಗಿ,ಭಕ್ತಿ ಭಾವದೊಂದಿಗೆ ಸಾಗಿ, ಬಂದವರಾಗಿದ್ದಾರೆ. ಬಡವರ,ಧೀನದಲಿತರ ಮಧ್ಯಮ ವರ್ಗದವರ ಸಮಾನತೆಯ ಬದುಕಿಗಾಗಿ, ಅತ್ಯಂತ ಕಾಳಜಿ ವಹಿಸಿದವರು. ಮಾತೃ ಹೃದಯಿಗಳಾಗಿದ್ದ ದಿ,ದೊಡ್ಡನಾಗಪ್ಪ ಮತ್ತು ಸಣ್ಣನಾಗಪ್ಪ ಕಾಕಿ ಅವರು ನಮ್ಮ ಮಧ್ಯೆ ಇಂದು ಭೌತಿಕವಾಗಿ ಇಲ್ಲದೇ ಇದ್ದರೂ ಸಹ ತಮ್ಮ ಜೀವನ ಪರ್ಯಂತ ಅವರು ನೀಡಿದ ಸಾಮಾಜಿಕ ಸೇವೆ ಇಂದಿಗೂ ಜೀವಂತವಾಗಿವೆ ಎಂದರು. ಇದೇ ಸಂದರ್ಭದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ, ಶ್ರೀನಿವಾಸ್ ಕಾಕಿ ಮತ್ತು ಪತ್ನಿ ಶ್ರೀಮತಿ ರೂಪಾ ಕಾಕಿ ಅವರು ತಮ್ಮ ರಕ್ತದಾನವನ್ನು ಮಾಡಿ ಯುವ ಸಮುದಾಯಕ್ಕೆ ಅರಿವು ಜಾಗೃತಿ ಮೂಡಿಸಿದರು. ಸಮಾಜದ ಮುಖಂಡರಾದ ವಿಜಯಲಕ್ಷ್ಮಿ ಸಣ್ಣಹನುಮಂತಪ್ಪ ಕಾಕಿ, ಹನುಮಂತಪ್ಪ ದೊಡ್ಡ ನಾಗಪ್ಪ ಕಾಕಿ , ಕುರುಹಿನ ಶೆಟ್ಟಿ ಸಮಾಜದ ಅಧ್ಯಕ್ಷ ಹನುಮಂತಪ್ಪ ಅಮಾಸಿ,ಉಪಾಧ್ಯಕ್ಷ ಶಿವಾನಂದ ಸಾಲಗೇರಿ, ಕಾರ್ಯದರ್ಶಿ ಮಂಜುನಾಥ ಹೊಸಪೇಟೆ, ಜೆಸಿ, ಪ್ರಭುಲಿಂಗಪ್ಪ ಹಲಗೇರಿ, ಜೆಸಿ, ವೆಂಕಟೇಶ್ ಕಾಕಿ, ನವೃತ್ತ ಪ್ರಾಚಾರ್ಯ ಶಿವಾನಂದ ಬಗಾದಿ, ಶ್ರೀಮತಿ ಲಕ್ಷ್ಮಿ ವೆಂ. ಕಾಕಿ, ಜೆಸಿ,ಅಧ್ಯಕ್ಷ ಕುಮಾರ ಬೆಣ್ಣಿ, ಕಾರ್ಯದರ್ಶಿ ಇಮ್ರಾನ್ ನೀಲಗಾರ, ಖಜಾಂಚಿ ವಿಧ್ಯಾಧರ ಹಲಗೇರಿ, ಅಂಕಿತಾ, ಅಮಿತ, ಸಮರ್ಥ, ವರ್ಧನ ಸೇರಿದಂತೆ ಇನ್ನಿತರ ಪದಾಧಿಕಾರಿಗಳು, ಮುಖಂಡರು ಪಾಲ್ಗೊಂಡಿದ್ದರು.