ಇಂದು ಕೊಪ್ಪಳಕ್ಕೆ ಹಾಸ್ಯ ಕಲಾವಿದ ಗಂಗಾವತಿಯ ಬಿ.ಪ್ರಾಣೇಶ್ ಆಗಮನ
ಕೊಪ್ಪಳ : ಹಾಸ್ಯ ಕಲಾವಿದ ಗಂಗಾವತಿ ಬಿ.ಪ್ರಾಣೇಶ್ ಅವರು ದಿ.15 ರಂದು ಸಂಜೆ 4 ಗಂಟೆಗೆ ಕೊಪ್ಪಳ ನಗರದ ಗದಗ್ ರಸ್ತೆಯ ಮಂಗಳಾಪುರ್ ಕ್ರಾಸ್ ಬಳಿಯ "ನ್ಯೂ ಎಕ್ಸ ಲೆಂಟ್ " ಪಬ್ಲಿಕ್ ಶಾಲೆಯ ಎಕ್ಸಲೆಂಟ್ ಫೆಸ್ಟ್ 10 ನೇ ವಾರ್ಷಿಕೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸುವರು.ದಿವ್ಯ ಸಾನಿಧ್ಯವನ್ನು ಗವಿಮಠದ ಗವಿಸಿದ್ದೇಶ್ವರ ಮಹಾಸ್ವಾಮಿಗಳು, ನೇತೃತ್ವವನ್ನು ಷ.ಬ್ರ. ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ಹೆಬ್ಬಾಳ ವಹಿಸುವರು.ಉದ್ಘಾಟನೆಯನ್ನು ಭಾರತ ಸ್ಕೌಟ್ ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಹಾಗೂ ಮಾಜಿ ಸಚಿವ ಪಿ.ಜಿ.ಆರಿ್ಸಂಧ್ಯಾ ನೆರವೇರಿಸುವರು.
ಅಧ್ಯಕ್ಷತೆಯನ್ನು ಭಾರತ ಸ್ಕೌಟ್ ಗೈಡ್ಸ್ ರಾಜ್ಯ ಉಪಾಧ್ಯಕ್ಷ ಹಾಗೂ ಜಿಲ್ಲಾ ಮುಖ್ಯ ಆಯುಕ್ತ ಹೆಚ್. ಎಮ್. ಸಿದ್ದರಾಮಸ್ವಾಮಿ ವಹಿಸುವರು.ಮುಖ್ಯ ಅತಿಥಿಗಳಾಗಿ ಚಂದ್ರಶೇಖರಯ್ಯ ಹಿರೇಮಠ ಅಧ್ಯಕ್ಷರು ಪಿಕಾರ್ಡ್ ಬ್ಯಾಂಕ್. ಯಲಬುರ್ಗಾ, ಮಲ್ಲೇಶ್ವರಿ ಜೂಜಾರೆ ಭಾರತ ಸ್ಕೌಟ್ ಗೈಡ್ಸ್ ರಾಜ್ಯ ಸಂಘಟನಾ ಆಯುಕ್ತರು, ಉಸ್ತುವಾರಿಗಳು, ಕಲ್ಯಾಣ ಕರ್ನಾಟಕ ಅವರು ಪಾಲ್ಗೊಳ್ಳುವರು.ಅತಿಥಿಗಳಾಗಿ ಹನಮಗೌಡ ರಡ್ಡೆರ,ಜಯರಾಮ ಪತ್ತಾರ,ದುರ್ಗಾರಾಮ ಸುತಾರ,ಚಂದ್ರ್ಪ ಹಡಪದ,ಡಾ.ಮಲ್ಲಿಕಾರ್ಜುನ ಮೇಟಿ,ಯಲ್ಲಪ್ಪ ಕಂಬ್ಬಿ,ನಿರ್ಮಲಾ ಸಾಲಿಮಠ, ಮಹಮ್ಮದ್ ಖಾಜಾಹುಸೇನ, ರಾಮಚಂದ್ರ್ಪ ವರ್ಣೇಕರ,ವೀರಣ್ಣ ಚಕ್ರಸಾಲಿ, ಗಿರಿಜಾ ಮೈನಳ್ಳಿ ಭಾಗವಹಿಸುವವರು ಎಂದು ಸಂಸ್ಥೆಯ ಟ್ರಸ್ಟಿ ಹಾಗೂ ಪ್ರಾಚಾರ್ಯ ಮಲ್ಲಿಕಾರ್ಜುನ್ ಚೌಕಿಮಠ ತಿಳಿಸಿದ್ದಾರೆ.