ಮರಳಿ ಗೂಡಿಗೆ ಬನ್ನಿ ಮುಕ್ತ ಆಹ್ವಾನ -ಮಾಜಿ ಸಚಿವ ಪಿಟಿ.ಪಿ
ಹೂವಿನಹಡಗಲಿ 28 : ಕಾಂಗ್ರೆಸ್ ಪಕ್ಷದಿಂದ ಗೆದ್ದು ಹಣ ಆಮಿಷಕ್ಕೆ ಬಲಿಯಾಗದೇ ಮರಳಿ ಗೂಡಿಗೆ ಬನ್ನಿ ಎಂದು ಮಾಜಿ ಸಚಿವ ಪಿಟಿ.ಪರಮೇಶ್ವರ ನಾಯಕ್ ಮುಕ್ತ ಆಹ್ವಾನ ನೀಡಿದರು.ಪಟ್ಟಣದ ಶಾಸ್ತ್ರೀಯ ವೃತ್ತದಲ್ಲಿ ಮಂಗಳವಾರ ಕಾಂಗ್ರೆಸ್ ಪಕ್ಷದಿಂದ ಪುರಸಭೆ ಸದಸ್ಯರ ವಿರುದ್ಧ ಪ್ರತಿಭಟನೆ ಯಲ್ಲಿ ನೇತೃತ್ವ ವಹಿಸಿ ಮಾತನಾಡಿದರು.ಪಕ್ಷಕ್ಕೆ ಮರಳಿ ಬಂದರೆ ಅಧಿಕಾರ ಹಂಚಿಕೆ ಮಾಡುವುದಾಗಿ ಹೇಳಿದ ಅವರು ಕಾಂಗ್ರೆಸ್ ಪಕ್ಷಕ್ಕೆ ಮಾಡವುದು ಹೆತ್ತ ತಾಯಿಗೆ ದ್ರೋಹ.ಸದಸ್ಯತ್ವ ರಾಜೀನಾಮೆ ನೀಡಿ ಚುನಾವಣೆ ಎದುರಿಸಿ ಎಂದು ಸವಾಲು ಹಾಕಿದ ಅವರು 30ರಂದು ಕಾಂಗ್ರೆಸ್ ಪಕ್ಷದ ದಿಂದ ಪುರಸಭೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಸಿದರು. ಜಿ.ಪಂ.ಮಾಜಿ ಸದಸ್ಯ ಪಿ.ವಿಜಯಕುಮಾರ್ ಮಾತನಾಡಿ ಪಕ್ಷ ದ್ರೋಹ ಮಾಡಿದ ಪುರಸಭೆ ಸದಸ್ಯ ರಿಗೆ ದಿಕ್ಕಾರ ಕೂಗಿದರು.ಬಿಜೆಪಿ ದುರಾಡಳಿತ ವಿರುದ್ಧ ಪ್ರತಿಭಟನೆ ಮಾಡುತ್ತೇವೆ ಎಂದರು. ಹುಂಡಿ ಗೌಸಮೋಹಿದ್ದೀನ್ ಮಾತನಾಡಿದರು.ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾದ ಎ.ಕೊಟ್ರೇಶ. ಹನುಮಂತಪ್ಪ. ಗ್ಯಾರೆಂಟಿ ಯೋಜನೆ ತಾಲ್ಲೂಕು ಅದ್ಯಕ್ಷ ಪಿ.ಟಿ.ಭರತ್.ಮುಖಂಡರಾದ.ಅರವಳ್ಳಿ ವೀರಣ್ಣ. ಸೋಗಿ ಹಾಲೇಶ.ಜಿ.ವಸಂತ.ಕೆ.ಎಸ್. ಶಾಂತನಗೌಡ. ರಾಜೇಂದ್ರ.ಚಂದ್ರನಯ್ಕ.ಜ್ಯೋತಿ ಮಲ್ಲಣ್ಣ. ಈಟಿ.ಮಾಲತೇಶ ಭಾಗವಹಿದ್ದರು.