ಲೋಕದರ್ಶನ ವರದಿ
ವಿಜಯಪುರ 23:ತಾಲೂಕಿನ ಬುರಣಾಪೂರದ ಶ್ರೀ ಮಲ್ಲಿಕಾಜರ್ುನ ದೇವಾಲಯದ ಧರ್ಮದಶರ್ಿ ಶ್ರೀ ಲಕ್ಷ್ಮಣ ಶಿವಶರಣರ ನೇತೃತ್ವದಲ್ಲಿ ರಅಯೋಧ್ಯೆಯಲ್ಲಿ ರಾಮಮಂದಿರ ನಿಮರ್ಾಣಕ್ಕಾಗಿ ಸಾಮೂಹಿಕ ಶಿವಪೂಜೆ ಹಾಗೂ ಶಿವನಾಮಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಶಿವಜಪ ಮಾಡುತ್ತಾ ಶೀಘ್ರವೇ ಅಯೋಧ್ಯೆಯಲ್ಲಿ ರಾಮಮಂದಿರ ನಿಮರ್ಾಣವಾಗಲಿ ಎಂದು ಶಿವನಲ್ಲಿ ಪ್ರಾಥರ್ಿಸಲಾಯಿತು. ಅಯೋದ್ಯೆಯಲ್ಲಿ ಶ್ರೀರಾಮ ಮಂದಿರ ನಿಮರ್ಾಣಕ್ಕೆ ಸಂಬಂಧಿಸಿದಂತೆ ಎದುರಾಗುವ ಎಲ್ಲ ವಿಘ್ನಗಳು ದೂರವಾಗಲಿ, ಶೀಘ್ರದಲ್ಲಿ ಭರತ ಖಂಡದಲ್ಲಿ ಹಾಗೂ ಹಿಂದೂಸ್ತಾನದಲ್ಲಿ ರಾಮ ಮಂದಿರ ನಿಮರ್ಾಣವಾಗಿ ಎಲಶಾಂತಿ ನೆಲೆಸಲಿ ಎಂದು ಜಗದೊಡೆಯನಾದ ಶ್ರೀಶೈಲ ಮಲ್ಲಿಕಾಜರ್ುನನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಲಕ್ಷ್ಮಣ ಶಿವಶರಣರು ನಿತ್ಯ ಕಾಯಕದೊಂದಿಗೆ, ವಿಶ್ವ ಶಾಂತಿಗಾಗಿ ದಿನಾಲು 18 ಗಂಟೆ ಮೌನಶಿವಯೋಗ ಹಾಗೂ ಗಂಟೆಗೊಮ್ಮೆ ಇಷ್ಟಲಿಂಗ ಪೂಜೆಯನ್ನು ಮಾಡುವ ಸಂಕಲ್ಪವನ್ನು ಮಾಡಿ ಮಹಾಶಿವಯೋಗವನ್ನು ಪ್ರಾರಂಭಿಸಿದರು. ಇದೇ ಸಂದರ್ಭದಲ್ಲಿ ಅವರಿಗೆ ಶುಭ ಹಾರೈಸಲಾಯಿತು. ಸಾಮೂಹಿಕ ಶಿವಪೂಜೆ ಹಾಗೂ ಶಿವನಾಮಸ್ಮರಣೆಯಲ್ಲಿ ಈರಯ್ಯ ಮಠಪತಿ, ಭೀಮರಾಯ ಪೂಜಾರಿ, ಮಲ್ಲಿಕಾಜರ್ುನ ಚಾಂದಕವಟೆ, ಹಣಮಂತ ಚ. ಪುಟ್ಟಿ, ಈಶ್ವರ ಶಿವೂರ, ವಿಷ್ಣು ಒಂಬಾಸೆ, ಬಸಯ್ಯ ಮಠಪತಿ, ಮಲ್ಲಿಕಾಜರ್ುನ ಶಿವೂರ, ಗಜಾನಂದ ಮೆಂಡೆಗಾರ, ಅರವಿಂದ ಗಾಣಿಗೇರ, ಶಿವಾಜಿ ಪಾಂಡ್ರೆ ಹಾಗೂ ಶಾಲಾ ವಿದ್ಯಾಥರ್ಿಗಳು ಭಾಗವಹಿಸಿದ್ದರು.