ಪಾದಯಾತ್ರೆಗಳಿಗೆ ತಂಪು ಪಾನೀಯ ವಿತರಣೆ
ಕೊಪ್ಪಳ 23: ಲಿಂ.ಶಿವಶಾಂತವೀರ ಶಿವಯೋಗಿಗಳ ಪುಣ್ಯಸ್ಮರಣೋತ್ಸವದ ನಿಮಿತ್ತ ಗವಿಸಿದ್ದೇಶ್ವರ ಮಹಾಸ್ವಾಮಿಗಳ ಪಾದಯಾತ್ರೆ ಶ್ರೀಮಳೆ ಮಲ್ಲೇಶ್ವರ ದೇವಸ್ಥಾನದಿಂದ ಗವಿಮಠದವರೆಗೆ ಅಪಾರ ಭಕ್ತಸ್ತೋಮದ ನಡುವೆ ಜರುಗಿತು.
ಗವಿಮಠದ ಶ್ರೀಗವಿಸಿದ್ದೇಶ್ವರ ಮಹಾಸ್ವಾಮಿಗಳ ಪಾದಯಾತ್ರೆಗೆ ಭಕ್ತಾದಿಗಳು ಬೀದಿಗಳನ್ನು ಸ್ವಚ್ಛಗೊಳಿಸಿ ರಂಗೋಲಿ ಹೂಗಳಿಂದ ಅಲಂಕರಿಸಿದ್ದರು.ಸಪ್ತಲಿಂಗೇಶ್ವರ ದೇವಸ್ಥಾನ ಬಳಿ ಅರ್ಚಕರ ಪುರೋಹಿತರ ಸಂಘದ ವತಿಯಿಂದ ಪಾದಯಾತ್ರಿಗಳಿಗೆ ತಂಪು ಪಾನೀಯಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಅಜ್ಜಪ್ಪ ಸ್ವಾಮಿ ಚನ್ನವಡೆಯರಮಠ, ನಾಗರಾಜ್ ಕಂದಾರಿ, ರತನ್ ರಾಜಪುರೋಹಿತ್, ಓಂ ಪ್ರಕಾಶ್ ರಾಜಪುರೋಹಿತ್, ಶ್ರವಣ್ ಕುಮಾರ್ ಶರ್ಮಾ, ಇಂಜಿನಿಯರ್ ಸೋಮಲಿಂಗಪ್ಪ, ಮುತ್ತುಸ್ವಾಮಿ ನರೇಗಲ್ ಮಠ, ಮಾಂತೇಶ್ ಸುಂಕದ್, ಚನ್ನಬಸಯ್ಯ ಹಿರೇಮಠ್, ರುದ್ರಯ್ಯ ಸ್ವಾಮಿ ಚನ್ನ ವಡೆಯರಮಠ, ಶಾಂತವೀರಯ್ಯ ಹಿರೇಮಠ, ಸಿದ್ದಯ್ಯ ಹಿರೇಮಠ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.