ಕರಾವಳಿ ಉತ್ಸವ ಐದನೇ ದಿನ: ಕಾರವಾರದ , ಕನ್ನಡಿಗರ ಮನ ಗೆದ್ದ ಗಾಯಕ ರಾಜೇಶ್ ಕೃಷ್ಣನ್
Coastal Utsav Day Five: Karwarada, Singer Rajesh Krishnan who won the hearts of Kannadigas
ಕಾರವಾರ 27: ಕರಾವಳಿ ಉತ್ಸವದ ಐದನೇ ದಿನ ಗಾಯಕ ರಾಜೇಶ್ ಕೃಷ್ಣನ್ ರೋಮ್ಯಾಂಟಿಕ್ ಮೆಲೋಡಿ ಹಾಡುಗಳನ್ನು ಹಾಡಿ ಕಾರವಾರದವರ ಹಾಗೂ ಕನ್ನಡಿಗರ ಮನ ಗೆದ್ದರು. ಬಾಲಿವುಡ್ ಹಾಗೂ ರಾಪ್ ಸಾಂಗ್ಸ ಇಷ್ಟ ಪಡುವ ಕಾರವಾರಿಗರು ಕನ್ನಡದ ಮೆಲೋಡಿ ಹಾಡುಗಳನ್ನು ಕೇಳಬಲ್ಲರು ಹಾಗೂ ಸಂಭ್ರಮಿಸಬಲ್ಲರು ಎಂದು ಸಾಬೀತು ಮಾಡಿದರು. ಗಾಯಕ ರಾಜೇಶ್ ಕೃಷ್ಣನ್ ... ಯಾರೋ, ಕಣ್ಣಿನಲ್ಲಿ ಕಣ್ಣನಿಟ್ಟು ಮನಸನಲಿ ಮನಸನಿಟ್ಟು .. ನನ್ನ ಮನಸ ಕದ್ದರಾರೋ... ಯಾರೋ ಯಾರೋ.... (ಒರಟಾ ಐ ಲವ್ ಯು) ಸಿನಿಮಾದ ಹಾಡನ್ನು ಮೊದಲಿಗೆ ಹಾಡಿದರು.
ಹುಚ್ಚಾ ಸಿನಿಮಾದ "ಉಸಿರೇ ಉಸಿರೇ ಈ ಉಸಿರ ಕೊಲ್ಲಬೇಡ..." "ಪ್ರೀತಿಸುವ ಕ್ಷಣ ಮಾತ್ರ ಪ್ರೀತಿ ಬಲು ಸುಲಭ; ಬಾ ಒಂದೇ ಒಂದು ಸಾರಿ ನನ್ನ ಪ್ರೀತಿಸು ’ ಹಾಡನ್ನು ಹಾಡಿ ಪ್ರೇಕ್ಷಕರನ್ನು ರೋಮಾಂಚನ ಗೊಳಿಸಿದರು. "ನೂರು ಜನ್ಮಕು ನೂರಾರು ಜನ್ಮಕೂ... ಒಲಿದು ಬಾರಲೆ ಒಲಿದೊಲಿದು ಬಾರಲೇ..." ಹಾಡನ್ನು ಅದ್ಭುತವಾಗಿ ಹಾಡಿದಾಗ ಹುಡುಗಿಯರು ಸಹ ಹಾಡಿ,ಕುಣಿದರು. ಗಾಯಕ ಎಸ್ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಗೌರವವಾರ್ಥ ಪ್ರೇಕ್ಷಕರು ಎದ್ದು ನಿಂತು ಗೌರವ ಸಲ್ಲಿಸಬೇಕು ಎಂದು ಗಾಯಕ ರಾಜೇಶ್ ಕೃಷ್ಣನ್ ಮನವಿಗೆ ಪ್ರೇಕ್ಷಕರು ಸ್ಪಂದಿಸಿ, ಎದ್ದು ನಿಂತು ಗೌರವ ಅರ್ಿಸಿದರು.
ಎಸ್ಪಿ ಬಾಲಸುಬ್ರಹ್ಮಣ್ಯಂ ಅವರ ನೆನಪಿಗೆ .. ’ ಗೀತಾಂಜಲಿ ಹಾಲು ಗೆನ್ನೆಗೆ ವಾರೆ ಗಣ್ಣಿಗೆ ನಮ್ಮೂರ ಹೆಣ್ಣಿಗೆ ಓ ಶ್ವೇತಾಂಬರಿ ನೀನು ಬಾರದೆ...’ ಹಾಡು ಹಾಡಿದರು ನಟ ಜಗ್ಗೇಶ್ , ಮೋನಿಕಾ ಬೇಡಿ ನಟಿಸಿದ ಚಿತ್ರದ ರೋಮ್ಯಾಂಟಿಕ್ ಹಾಡು "ಹೊಂಬಾಳೇ ಹೊಂಬಾಳೇ, ನನ್ನಾಸೆಯ ಹೂವೇ ಕೇಳೆ" ಹಾಡನ್ನು ರಾಜೇಶ್ ಅತ್ಯಂತ ಭಾವ ತುಂಬಿ ಹಾಡಿದರು. "ನೀರು ಬಿಟ್ಟು ನೆಲದ ಮೇಲೆ ದೋಣಿ ಸಾಗದು ,ನೆಲವ ಬಿಟ್ಟು ನೀರ ಮೇಲೆ ಬಂಡಿ ಹೋಗದು" ಹಾಡನ್ನು ಸಹ ರಾಜೇಶ್ ಸೊಗಸಾಗಿ ಹಾಡಿದರು. ಗಾಳಿಪಟ ಸಿನಿಮಾದ " ಕವಿತೆ ಕವಿತೆ, ನೀನೇಕೆ ಪದಗಳಲಿ ಅವಿತೆ ’ ಹಾಡನ್ನು ಸಹ ಹಾಡಿದರು. ಕೇಳಿಸದೇ ಕಲ್ಲು ಗಾಯಕಿ ಮಾನಸ ಹೊಳ್ಳ, ಅತ್ಯಂತ ಸೊಗಸಾಗಿ ಹಾಡಿದರು.
’ಲೋಕವೇ ಹೇಳಿದ ಮಾತಿದು ವೇದದ ಸಾರವೇ ಕೇಳಿದು ಪ್ರೀತಿ ಮಾಡಬಾರದು’, ’ಮಾಡಿದರೆ ಜಗಕೆ ಹೆದರಬಾರದು’ ಪ್ರೇಮಲೋಕ ಸಿನಿಮಾದ ಹಾಡನ್ನು ಗಾಯಕಿ ಪುಷ್ಪಾ ಆರಾಧ್ಯ , ಗಾಯಕ ಸಂತೋಷ ರಾವ್ ಹಾಡಿದರು. ಗಾಯಕಿ ರವಿರಾಜ್ , ಮಾನಸ ಹೊಳ್ಳ ಅವರ ಧ್ವನಿಯಲ್ಲಿ ಜೀವ ಹೂವಾಗಿದೆ ,ಭಾವ ಜೇನಾಗಿದೆ, ಬಾಳು ಹಾಡಾಗಿದೆ , ನಿನ್ನ ಸೇರಿ ಇಂದು’ ಹಾಡನ್ನು ಅದ್ಭುತವಾಗಿ ಹಾಡಿದರು. ಗಾಯಕಿಯರಾದ ಮಾನಸ ಹೊಳ್ಳ ,ಪುಷ್ಪಾ ಆರಾಧ್ಯ ...ಸಂಗಡಿಗರಿಂದ ಶೇಕ್ ಇಟ್ ಪುಷ್ಪವತಿ ಹಾಡು ಪ್ರೇಕ್ಷಕರು ಹುಚ್ಚೆದ್ದು ಕುಣಿಯುವಂತೆ ಮಾಡಿತು . ಸ್ಯಾಂಡಲ್ ವುಡ್ ಗಾಯಕರು ಸಹ ಕರಾವಳಿ ಉತ್ಸವ ವೇದಿಕೆಯಲ್ಲಿ ಮಿಂಚಿದರು. ಐದನೇ ದಿನವೂ ರಾತ್ರಿ 12-15 ರವರೆಗೆ ಸಾವಿರಾರು ಸಂಖ್ಯೆಯ ಜನಸ್ತೋಮ ಕರಾವಳಿ ಉತ್ಸವದಲ್ಲಿ ಭಾಗವಹಿಸಿದ್ದರು. ...
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ 