ಯುವ ಸಮುದಾಯ ಮುಖ್ಯವಾಹಿನಿಗೆ ಬರಲು ಸಹಕಾರ ಅಗತ್ಯ: ಗೊಂಡಬಾಳ

ಕೊಪ್ಪಳ 04: ಜಿಲ್ಲೆಯ ಯುವ ಸಮುದಾಯ ಮತ್ತು ಸಂಘಟನೆಗಳು ಮುಖ್ಯವಾಹಿನಿಗೆ ಬರಲು ಇಲಾಖೆ ಮತ್ತು ಜನಪ್ರತಿನಿಧಿಗಳ ಸಹಕಾರ ಅಗತ್ಯವಾಗಿದೆ ಎಂದು ಪಟ್ಟಣ ಪಂಚಾಯತಿ ಸದಸ್ಯ ಮಂಜುನಾಥ ಜಿ. ಗೊಂಡಬಾಳ ಹೇಳಿದರು.

ಅವರು ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಶ್ರಯದಲ್ಲಿ ಜರುಗಿದ ಜಿಲ್ಲಾಮಟ್ಟದ ರಾಷ್ಟ್ರೀಯ ಯುವಜನೋತ್ಸವದ ಅಧ್ಯಕ್ಷತೆವಹಿಸಿ ಮಾತನಾಡಿದರು.

ಪ್ರಸ್ತುತ ಜಿಲ್ಲೆಯಲ್ಲಿ ಯುವ ಸಂಘಟನೆಗಳು ಸಂಪೂರ್ಣವಾಗಿ ನೆಲಕಚ್ಚಿದ್ದು ಅವುಗಳ ಪುನಶ್ಚೇತನಕ್ಕೆ ಒತ್ತು ನೀಡಬೇಕಿದೆ, ಇಲಾಖೆಯ ಅಧಿಕಾರಿಗಳು ಸಹಕಾರ ನೀಡಿದಲ್ಲಿ 800 ಯುವ ಸಂಘಗಳು ಸಮುದಾಯದ ಮುಖ್ಯವಾಹಿನಿಯಲ್ಲಿ ಯುವ ಮತ್ತು ಸಮಾಜ ಸೇವೆ ಮಾಡುತ್ತವೆ. ಅಲ್ಲದೆ ರಾಜ್ಯಮಟ್ಟದ ಯುವಜನೋತ್ಸವದಲ್ಲಿ ಕೊಪ್ಪಳದ ಪ್ರದರ್ಶನ ತೃಪ್ತಿದಾಯಕವಾಗಿಲ್ಲವಾದ್ದರಿಂದ ಜಿಲ್ಲಾಮಟ್ಟದಲ್ಲಿ ಆಯ್ಕೆಯಾದ ತಂಡಕ್ಕೆ ತರಬೇತಿ ನೀಡಿ ಕಳುಹಿಸಿಕೊಡುವಂತೆ ಇಲಾಖೆಯನ್ನು ಆಗ್ರಹಿಸಿದ ಅವರು, ಸಾಹಿತ್ಯ ಭವನಕ್ಕೆ ಅರ್ಧ ಕೋಟಿ ಖಚರ್ು ಮಾಡಿದರೂ ಹೊರಗಿನಿಂದ ಶಾಮಿಯಾನದವರು ಬಂದು ಕಾರ್ಯನಿರ್ವಹಿಸುವ ಅನಿವಾರ್ಯತೆ ಸೃಷ್ಟಿಯಾಗಿದ್ದು, ಕೂಡಲೆ ಸಾಹಿತ್ಯ ಭವನದ ಶೌಚಾಲಯ, ಸೌಂಡ್ ಮತ್ತು ಉಳಿದ ರಿಪೇರಿ ಕಾರ್ಯ ಮಾಡಬೇಕು ಎಂದು ಆಗ್ರಹಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಪಂಚಾಯತ್ ಸದಸ್ಯ ರಾಮಣ್ಣ ಚೌಡ್ಕಿ, ಯುವ ಜನರು ಇಂಥಹ ಸ್ಪಧರ್ೆಗಳಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶನ ಮಾಡಬೇಕು ತನ್ಮೂಲಕ ರಾಜ್ಯ ರಾಷ್ಟ್ರಮಟ್ಟದಲ್ಲಿ ಬೆಳೆಯಬೇಕು ಎಂದ ಅವರು, ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸ್ಪಧರ್ೆಗಳು ಪೂರಕವಾಗಿವೆ ಎಂದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶರಣಪ್ಪ ವಡಗೇರಿ, ಪದವಿ ಕಾಲೇಜು ದೈಹಿಕ ನಿದರ್ೆಶಕಿ ಶೋಭಾ ಕೆ. ಎಸ್. ಮಾತನಾಡಿದರು. ವೇದಿಕೆಯಲ್ಲಿ ನೃತ್ಯ ಶಿಕ್ಷಕಿ ಕಲಾವತಿ ಹಾರೋಬೆಳವಡಿ, ಸಂಗೀತ ಶಿಕ್ಷಕ ಲಚ್ಚಣ್ಣ ಲಾಳಿ, ಗಾಯಕ ಪರಶುರಾಮ ಬಣ್ಣದ, ಟಿಪಿಇಓ ಬಸವರಾಜ, ಕುಷ್ಟಗಿ ತಾಲೂಕ ಕ್ರೀಡಾಧಿಕಾರಿ ಮಹಾಂತೇಶ, ಸರಕಾರಿ ಬಾಲಿಕೆಯರ ಕಾಲೇಜು ಉಪಪ್ರಾಂಶುಪಾಲ ಎಸ್.ವಿ.ಮೇಳಿ, ಶಿಕ್ಷಕ ಲಲಿತಾ ಅಂಗಡಿ, ಯುವ ಪ್ರಶಸ್ತಿ ಪುರಸ್ಕೃತರಾದ ಜಗದಯ್ಯ ಸಾಲಿಮಠ, ರಾಕೇಶ ಕಾಂಬ್ಳೆಕರ್, ಬಸಯ್ಯ ಸಾಲಿಮಠ ಇತರರು ಇದ್ದರು.

ಕುಮಾರಿ ಶಕುಂತಲಾ ಬೆನ್ನಾಳ ತಂಡ ನಾಡಗೀತೆ ಪ್ರಸ್ತುತಪಡಿಸಿದರು, ತಾಲೂಕ ಕ್ರೀಡಾಧಿಕಾರಿ ಶರಣಬಸಪ್ಪ ಬಂಡಿಹಾಳ ಸ್ವಾಗತಿಸಿದರು, ಕ್ರೀಡಾ ಇಲಾಖೆ ಸಹಾಯಕ ನಿದರ್ೇಶಕ ಆರ್. ಜಿ. ನಾಡಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು, ದ್ಯಾಮಣ್ಣ ಗೊಂದಿಹೊಸಳ್ಳಿ ನಿರೂಪಿಸಿದರು, ಬೀಮೇಶ ಕುರಿ ವಂದಿಸಿದರು. ಭರತನಾಟ್ಯ, ಜಾನಪದ ನೃತ್ಯ, ಜನಪದ ಗೀತೆ, ಶಾಸ್ತ್ರೀಯ ಸಂಗೀತ, ತಬಲ, ಸಿತಾರ್, ಹಾಮರ್ೋನಿಯಂ, ಆಶುಭಾಷಣ ಸ್ಪಧರ್ೆಗಳು ಜರುಗಿದವು. ಆಯ್ಕೆಯಾದ ಜಿಲ್ಲಾಮಟ್ಟದ ತಂಡ ತುಮಕೂರಿನಲ್ಲಿ ನವೆಂಬರ್ 23 ರಂದು ನಡೆಯುವ ರಾಜ್ಯಮಟ್ಟದ ರಾಷ್ಟ್ರೀಯ ಯುವಜನೋತ್ಸವದಲ್ಲಿ ಪಾಲ್ಗೊಳ್ಳುವರು. ಆಯ್ಕೆಯಾದ ಸ್ಪಧರ್ಾಳುಗಳಿಗೆ ಪ್ರಥಮ ಬಾರಿಗೆ ನಗದು ಬಹುಮಾನವನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.