ಒಕ್ಕಟಿನಿಂದ ಕೆಲಸ ಮಾಡಿದಾಗ ಸಹಕಾರಿ ಸಂಘಗಳು ಪ್ರಗತಿ ಸಾಧಿಸಬಲ್ಲವು: ಗುಡದಿನ್ನಿ

ಲೋಕದರ್ಶನ ವರದಿ

ವಿಜಯಪುರ 14: ಒಕ್ಕಟಿನಲ್ಲಿ ಬಲವಿದ್ದು, ಬ್ಯಾಂಕಿನ ಆಡಳಿತ ಮಂಡಳಿ ಹಾಗೂ ಸದಸ್ಯರು ಆಸಕ್ತಿಯಿಂದ ಕೆಲಸ ಮಾಡಿದಾಗ ಸಹಕಾರಿ ಸಂಘಗಳು ಪ್ರಗತಿ ಸಾಧಿಸಬಲ್ಲವು ಎಂದು ವಿಜಯಪುರ ಡಿಸಿಸಿ ಬ್ಯಾಂಕ ಉಪಾಧ್ಯಕ್ಷ ರಾಜಶೇಖರ ಗುಡದಿನ್ನಿ ಹೇಳಿದರು.

ಬಬಲೇಶ್ವರದ ಗುರುಪಾದೇಶ್ವರ ಕಂಜುಮಸರ್್ ಕೋ-ಆಪರೇಟಿವ್ ಸೊಸಾಯಿಟಿಯ ನೂತನ ಆಡಳಿತ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು 1976 ರಲ್ಲಿ ಆರಂಭಗೊಂಡ ಈ ಸೊಸಾಯಿಟಿ ಇಂದು ಹೆಮ್ಮರವಾಗಿ ಬೆಳೆದು ಜನಸೇವೆಯಲ್ಲಿ ತೊಡಗಿರುವುದು ಹರ್ಷದಾಯಕ ಎಂದರು.ಮುಖ್ಯ ಅತಿಥಿ ಮಾಜಿ ಜಿ.ಪಂ. ಅಧ್ಯಕ್ಷ ವ್ಹಿ.ಎಸ್. ಪಾಟೀಲ ಮಾತನಾಡಿ ಕೋ-ಆಪರೇಟಿವ್ ಸೊಸಾಯಿಟಿಗಳು ಸಾರ್ವಜನಿಕರಿಂದ, ಸಾರ್ವಜನಿಕರಿಗಾಗಿ ಕೆಲಸ ಮಾಡುವ ಸಂಸ್ಥೆಗಳಾಗಿದ್ದು ಜನರ ಆಶೋತ್ತರಗಳನ್ನು ಈಡೇರಿಸುವ ಗುರಿ ಹೊಂದಿದಾಗ ಮತ್ತಷ್ಟು ಎತ್ತರಕ್ಕೇರಬಲ್ಲವು ಅಂತಹ ಸಾಧನೆಗೆ ಸಾಕ್ಷಿಯಾಗಿದೆ ನೂತನ ಆಡಳಿತ ಕಚೇರಿಯ ನಿಮರ್ಾಣ ಕಾರ್ಯ ಎಂದರು. 

ಮಾಜಿ ಜಿ.ಪಂ. ಸದಸ್ಯ ಮಲ್ಲು ಕನ್ನೂರ ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ಮಾಜಿ ಮಂಡಳ ಪ್ರಧಾನರಾದ ಬಿ.ಎಂ. ಪಾಟೀಲ ಮಾತನಾಡಿ ಬಬಲೇಶ್ವರದ ಆರಾಧ್ಯ ದೈವ ಶ್ರೀ ಗುರುಪಾದೇಶ್ವರರ ಹೆಸರಿನಿಂದ ಹಿರಿಯ ಹೆಸರು ಮಾಡಿರುವ ಸೊಸಾಯಿಟಿ ಬೆಳೆದು ಬಂದ ರೀತಿ ಅದ್ಭುತ. ಅದರ ಏಳ್ಗೆಗೆ ಕಾರಣಕರ್ತರಾದ ಸಂಸ್ಥಾಪಕ ಎಲ್.ಎಂ. ಪಾಟೀಲ ಸಂಘದ ನಿಮರ್ಾತರ್ೃ ಸಂಗಪ್ಪ ಶಿರಮಗೊಂಡ ಮತ್ತು ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳ ಸೇವೆ ಶ್ಲಾಘನೀಯವಾದದು ಎಂದರು. 

ತಾ.ಪಂ. ಸದಸ್ಯ ಬೀರಪ್ಪ ಸೊಡ್ಡಿ, ಗ್ರಾ.ಪಂ. ಅಧ್ಯಕ್ಷೆ ಬೌರಮ್ಮ ಬೂದಿಹಾಳ, ಕೆ.ಓ.ಎಫ್. ನಿದರ್ೇಶಕ ದಯಾನಂದ ಅಲಗೊಂಡ, ಬಿ.ಎಸ್.ಎನ್.ಎಲ್. ನಿದರ್ೇಶಕ ಮನೋಹರ ಜಂಗಮಶೆಟ್ಟಿ, ಗುರುಪಾದೇಶ್ವರ ಕಂಜುಮಸರ್್ ಸೊಸಾಯಿಟಿ ಅಧ್ಯಕ್ಷ ಶಿವನಿಂಗಪ್ಪ ಕೊಟ್ಯಾಳ ಉಪಾಧ್ಯಕ್ಷ ಶಂಕರ ಶಿರಮಗೊಂಡ, ಎಸ್.ಆರ್. ತಮಗೊಂಡ ಮುಖ್ಯ ಅತಿಥಿಗಳಾಗಿದ್ದರು. ಇದೇ ಸಂದರ್ಭದಲ್ಲಿ ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ 4ನೇ ರ್ಯಾಂಕ್ ಬಂದಿರುವ ಸುಕನ್ಯಾ ಬಿರಾದಾರ, ಸ್ವಚ್ಛಭಾರತ ರಾಜ್ಯ ಪ್ರಶಸ್ತಿಗೆ ಭಾಜನರಾದ ರಾಜಶೇಖರ ಬಿರಾದಾರ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಮಲ್ಲಪ್ಪ ಯರನಾಳ ಹಾಗೂ ಬಸವನಬಾಗೇವಾಡಿ ಬಸವ ಜನ್ಮಭೂಮಿ ಪ್ರತಿಷ್ಠಾನ ಕೊಡಮಾಡುವ ಪ್ರಸಕ್ತ ಸಾಲಿನ ರಾಷ್ಟ್ರ ಮಟ್ಟದ ಬಸವವಿಭೂಷಣ ಪ್ರಶಸ್ತಿಗೆ ಭಾಜನರಾದ ಈರಣ್ಣ ಶಿರಮಗೊಂಡ ಅವರನ್ನು ಸನ್ಮಾನಿಸಲಾಯಿತು. 

ನಿವೃತ್ತ ಮುಖ್ಯಶಿಕ್ಷಕ ಎಂ.ಆರ್. ತೋಟದ, ಸಂಗಪ್ಪ ಪಡಗಾರ, ಬಸಲಿಂಗಪ್ಪ ಜಂಗಮಶೆಟ್ಟಿ, ಶಿವಪ್ಪ ಬಿರಾದಾರ, ಬಸು ಜಿವಜಿಗೋಳ, ಶಿವಪ್ಪ ಬೂದಿಹಾಳ, ಮಹಾದೇವಿ ಕೆಂಗನಾಳ, ಶಾರದಾ ಬಿರಾದಾರ, ಗುರಪ್ಪ ಮೋಟಗಿ, ಅಪ್ಪಾಸಾಹೇಬ ಕೋಟ್ಯಾಳ, ಪ್ರವೀಣ ಪಾಟೀಲ, ಮಲ್ಲಿಕಾಜರ್ುನ ಕೊಕರೆ, ಚೌಡಪ್ಪ ಬೂದಿಹಾಳ, ಜಿ.ಎಸ್. ಬಿರಾದಾರ, ಡಾ. ಮಹಾಂತೇಶ ಕನ್ನೂರ ಮತ್ತು ದುಂಡಪ್ಪ ಉಳ್ಳಾಗಡ್ಡಿ ಮತ್ತಿತರರು ಉಪಸ್ಥಿತರಿದ್ದರು.