ವಿವಿಗಳನ್ನು ಮುಚ್ಚುವುದು ಖಂಡನಿಯ: ಎಚ್.ಆರ್.ನಿರಾಣಿ
ಬೀಳಗಿ 16 : ಕೇಂದ್ರದ ರಾಷ್ಟ್ರೀಯ ಶಿಕ್ಷಣ ನೀತಿ ಪ್ರಕಾರ ಪ್ರತಿ ಜಿಲ್ಲೆಗೊಂದು ವಿವಿಗಳು ರಚನೆ ಆಗಬೇಕು ಎಲ್ಲ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ದೊರೆಯಬೇಕು ಎಂಬ ಕಲ್ಪನೆಯೊಂದಿಗೆ ರಾಜ್ಯದ ಬೀದರ್, ಹಾಸನ, ಚಾಮರಾಜನಗರ, ಹಾವೇರಿ, ಕೊಡಗು, ಕೊಪ್ಪಳ, ಬಾಗಲಕೋಟೆ, ಮಹಾರಾಣಿ ಕ್ಲಸ್ಟರ್ ಮಂಡ್ಯ ಮತ್ತು ನೃಪತುಂಗ ವಿವಿಗಳು ಈ ಹಿಂದೆ ನಮ್ಮ ಬಿಜೆಪಿ ಸರಕಾರ ವಿದ್ದಾಗ ರಚನೆ ಮಾಡಿತ್ತು. ಹಾಗೂ ಕಾರ್ಯಾರಂಭ ಕೂಡಾ ಮಾಡಿದ್ದವು. ಸರಕಾರದ ಬೊಕ್ಕಸಕ್ಕೆ ಹೊರೆಯಾದ ಈ ಗ್ಯಾರಂಟಿ ಯೋಜನೆಗಳನ್ನು ನಿಭಾಯಿಸುವ ಸಲುವಾಗಿ ರಾಜ್ಯ ಸರಕಾರ ಒಂಬತ್ತು ವಿಶ್ವವಿದ್ಯಾಲಯಗಳನ್ನು ಏಕಾಏಕಿ ಮುಚ್ಚಲು ಹೊರಟಿರುವುದು ಖಂಡನಿಯವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ಆರ್.ನಿರಾಣಿ ಸರಕಾರಕ್ಕೆ ಆಗ್ರಹಿಸಿದ್ದಾರೆ.
ವಿವಿಗಳ ಆರ್ಥಿಕ ಹೊರೆ ಮೂಲಭೂತ ಸೌಕರ್ಯ ಭೋದಕ-ಭೋದಕೇತರ ಸಿಬ್ಬಂದಿ ಕೊರತೆ ವಿದ್ಯಾರ್ಥಿಗಳ ದಾಖಲಾತಿ ಸೇರಿದಂತೆ ಅನೇಕ ಕಾರಣಗಳನ್ನು ನೀಡಿ ರಾಜ್ಯದಲ್ಲಿ ಹೊಸದಾಗಿ ಸ್ಥಾಪಿಸಿದ ವಿವಿಗಳನ್ನು ರಾಜ್ಯ ಕಾಂಗ್ರೆಸ್ ಸರಕಾರವು ಮುಚ್ಚುವ ನಿರ್ಧಾರ ಮಾಡುತ್ತಿರುವುದು ತಪ್ಪಾಗಿದೆ. ಹೊಸ ವಿವಿಗಳ ಸ್ಥಾಪನೆ ಮತ್ತು ಕಾರ್ಯಚರಣೆಗೆ ಜಮೀನಿನ ವೆಚ್ಚ ಬಿಟ್ಟು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವೇತನ , ಮೂಲಭೂತ ಸೌಕರ್ಯ, ಸಲಕರಣೆಗಳು ವಾಹನಗಳು ಪೀಠೋಪಕರಣ ಮತ್ತು ಇತರೆ ವಸ್ತುಗಳ ಖರೀದಿಸಲು ಅಂದಾಜು ರೂ.365 ಕೋಟಿಗಳ ಅಗತ್ಯವಿದೆ. ವಿವಿ ಸ್ಥಾಪನೆಗೆ 100 ರಿಂದ 200 ಎಕರೆ ಜಮೀನು ಕೂಡಾ ಅಗತ್ಯವಿದೆ. ಯಾವುದೇ ಸರಕಾವಿದ್ದರು ಸರಕಾರಗಳು ಶಿಕ್ಷಣ ಕ್ಷೇತ್ರಕ್ಕೆ, ಉನ್ನತ ಶಿಕ್ಷಣಕ್ಕೆ ಹೆಚ್ಚಿಗೆ ಅನುದಾನ ಸಹಕಾರ ನೀಡಬೇಕು ಹಾಗೂ ರಾಜ್ಯ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು ಅದನ್ನು ಬಿಟ್ಟು ವಿವಿಗಳನ್ನು ಮುಚ್ಚುವ ನಿರ್ಧಾರವನ್ನು ಕೂಡಲೇ ಕೈ ಬಿಡಬೇಕು ವಿವಿಗಳು ಆರ್ಥಿಕವಾಗಿ ಸಬಲೀಕರಣಕ್ಕೆ ಹಾಗೂ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಳಗೊಳಿಸಲು ಸರಕಾರ ಅಗತ್ಯ ಕ್ರಮಕೈಗೊಳ್ಳಬೇಕು ಶಿಕ್ಷಣ ಕ್ಷೇತ್ರದಲಿ ರಾಜಕಾರಣ ಮಾಡುವುದು ಸರಿಯಲ್ಲ. ರಾಜ್ಯದ ವಿದ್ಯಾರ್ಥಿ ಸಮುದಾಯಕ್ಕೆ, ಪೋಷಕರಿಗೆ ನ್ಯಾಯ ಒದಗಿಸಬೇಕೆಂದು ನಿರಾಣಿ ಪ್ರಕಟಣೆಯಲ್ಲಿ ಸರಕಾರಕ್ಕೆ ಆಗ್ರಹಿಸಿದರು.