ಬೆಳಗಾವಿ 02: ಸಿಂಡ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಬೆಳಗಾವಿ ಮತ್ತು ಕೇಂದ್ರ ಸಕರ್ಾರದ ಗ್ರಾಮೀಣ ಅಭಿವೃಧ್ದಿ ಸಚಿವಾಲಯ ಇವರ ಸಂಯುಕ್ತಾಶ್ರಯದಲ್ಲಿ ಬೆಳಗಾವಿ ಜಿಲ್ಲೆಯ ಸ್ವ ಉದ್ಯೋಗ ಆಸಕ್ತ ಮಹಿಳೆಯರಿಗೆ 30 ದಿನಗಳ ಉಚಿತ ಬ್ಯೂಟಿ ಪಾರ್ಲರ ತರಬೇತಿಯನ್ನು ಹಮ್ಮಿಕೊಂಡಿದ್ದು ಅದರ ಸಮಾರೋಪ ಸಮಾರಂಭ ದಿ. 01ರಂದು ಜರುಗಿತು.
ಕಾರ್ಯಕ್ರಮದ ಮುಖ್ಯ ಅಥಿತಿ ಸ್ಥಾನವನ್ನು ವಹಿಸಿದಂತದ ಆರ್. ವ್ಹಿ. ಬಟ್ಟ ನಿದರ್ೆಶಕರು, ಬಿ.ಬಿ.ಎ. ಕಾಲೇಜ, ಆರ್.ಪಿ.ಡಿ ಆಟ್ರ್ಸ ಆಂಡ್ ಕಾಮರ್ಸ ಕಾಲೇಜ ಬೆಳಗಾವಿ. ಇವರು ಮಾತನಾಡುತಾ, ತಾವೆಲ್ಲ 30 ದಿನಗಳ ತರಬೇತಿಯನ್ನು ಪಡೆದಿದ್ದಿರಿ, ತರಬೇತಿಯ ಅವಧಿಯಲ್ಲಿ ತಾವುಗಳು ಸೌಂದರ್ಯ ರುಪಕದ ಬಗ್ಗೆ ಹಲವಾರು ವಿಷಯಗಳನ್ನು ತಿಳಿದುಕೊಂಡಿರುವಿರಿ ಆದರೆ ಕೇವಲ ತರಬೇತಿಯನ್ನು ಮಾತ್ರ ಪಡೆದರೆ ಸಾಲದು, ತರಬೇತಿಯಲ್ಲಿ ತಿಳಿಸಿದ ಎಲ್ಲ ವಿಷಯಗಳನ್ನು ನಿಮ್ಮ ನಿಮ್ಮ ಕೆಲಸಕಾರ್ಯಗಳಲ್ಲಿ ಬಳಸಿಕೊಳ್ಳಿ, ಹಾಗೂ ಹೊಸ ಕ್ರಿಯಾಶೀಲತೆಯನ್ನು ಮೈಗೂಡಿಸಿಕೊಳ್ಳಿ ಇದರಿಂದ ನಿಮ್ಮ ಗ್ರಾಹಕರು ಹೆಚ್ಚುವರು. ಹಾಗೂ ಉದ್ಯೋಗದ ಪ್ರಾರಂಭದಲ್ಲಿ ಯಾವುದೇ ರೀತಿಯ ಲಾಭಾಂಶದ ಬಗ್ಗೆ ಚಿಂತಿಸಬೇಡಿ, ಮೋದಲಿಗೆ ಸೇವೆ ನಿಡುವುದರ ಕಡೆಗೆ ಮಾತ್ರ ಗಮನ ಹರಿಸಿ. ಹಾಗೂ ಕಲಿತಿರುವುದನ್ನು ಇಲ್ಲಿಯೇ ಬಿಡದೇ ಬೇರೆಯವರಿಗೂ ಕೂಡಾ ತಿಳಿಸಿರಿ ಇದರಿಂದ ನಿಮ್ಮ ಜ್ಞಾನವು ಸಹ ಬೆಳೆಯುತ್ತದೆ ಎಂದು ತಿಳಿಸಿದರು.
ತರಬೇತಿಯ ಸಂಪನ್ಮೂಲ ವ್ಯಕ್ತಿಯಾದ ಅಪಣರ್ಾ ವಾಲಿ ಇವರು ಮಾತನಾಡುತ್ತಾ, ನನ್ನ 20 ವರ್ಷದ ಅನುಭವವನ್ನು ತಮ್ಮೆಲ್ಲರಿಗೂ ದಾರೆ ಎರೆದಿದ್ದೆನೆ. ಕಲಿಸಿರುವ ಎಲ್ಲ ವಿಷಯಗಳನ್ನು ಮತ್ತೆ ಪುನ ಮನೆಗೆ ಹೋಗಿ ಪ್ರಾಕ್ಟಿಸ್ ಮಾಡಿ, ಅಂದಾಗ ಮಾತ್ರ ನಿಮಗೆ ಸ್ವಂತ ಅನುಭವ ಬರುವುದು ಹಾಗೂ ಈ ಕೆಲಸದಲ್ಲಿ ನೈಪುನ್ಯತೆಯನ್ನು ಗಳಿಸುವಿರಿ ಎಂದು ಹೇಳಿ ಎಲ್ಲರಿಗೂ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷಸ್ಥಾನ ವಹಿಸಿದ ಸಂಸ್ಥೆಯ ನಿದರ್ೇಶಕರು ಲಕ್ಷ್ಮಿಕಾಂತ ಪಾಟೀಲ ಇವರು ಮಾತನಾಡುತ್ತಾ, ತಾವೇಲ್ಲರೂ ಸಂಸ್ಥೆಯಲ್ಲಿ ಬ್ಯೂಟಿ ಪಾರ್ಲರ ತರಬೇತಿಯನ್ನು ಪಡೆದಿರುವಿರಿ, ತಾವೆಲ್ಲರೂ ಸ್ವ ಉದ್ಯೋಗದಲ್ಲಿ ಯಶಸ್ಸನ್ನು ಗಳಿಸಬೇಕೆಂದರೇ, ತಾವೆಲ್ಲರೂ ಉತ್ತಮ ಮಾತುಗಾರರಾಗಿರಬೇಕು. ಎಕೆಂದರೆ ಎಲ್ಲಾ ರೀತಿಯ ಗ್ರಾಹಕರು ನಿಮ್ಮ ಸಂಪರ್ಕಕ್ಕೆ ಬರುತ್ತಾರೆ, ಅವರೆಲ್ಲರನ್ನೂ ಸರಿದುಗಿಸಿಕೊಂಡು ಹೋಗಬೇಕಾದರೆ ನೀವು ಒಳ್ಳೆಯ ಮಾತು ಬಲ್ಲವರಾಗಿರಬೇಕು, ಹಾಗೂ ಬ್ಯಾಂಕನ ಎಲ್ಲ ವ್ಯವಹಾರಗಳನ್ನು ತಿಳಿದುಕೊಳ್ಳಿ ಎಂದು ತಿಳಿಸಿ ದೈರ್ಯದಿಂದ ಕಾರ್ಯ ನಿರ್ವಹಿಸಿ, ಸ್ವಾವಲಂಬಿಗಳಾಗಿ ಬೆಳೆಯಿರಿ ಎಂದು ತಿಳಿಸಿರುತ್ತಾರೆ.
ಕೊನೆಯದಾಗಿ ತರಬೇತಿಯಲ್ಲಿ ಪಾಲ್ಗೊಂಡ ಶಿಭಿರರ್ಾಥಿಗಳು ಉತ್ಸಾಹದಿಂದ ಕಲಿಕೆಯ ಅನುಭವ ಮತ್ತು ಅನಿಸಿಕೆಗಳನ್ನು ಹಂಚಿಕೊಂಡರು, ನಂತರ ಮುಖ್ಯ ಅಥಿತಿಗಳಿಂದ ಶಿಬಿರಾಥರ್ಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು, ಸಂಸ್ಥೆಯ ಉಪನ್ಯಾಸಕಿ ರಾಜೇಶ್ವರಿ ದೇವಲಾಪೂರ ಇವರು ಸ್ವಾಗತಿಸಿ, ವಂದಿಸಿದರು. ಹಾಗೂ ಸಂಸ್ಥೆಯ ಉಪನ್ಯಾಸಕ ಚಂದ್ರಕಾಂತ ಹಿರೇಮಠ, ಸಂಸ್ಥೆಯ ಸಿಬ್ಬಂದಿ ಬಸವರಾಜ ಕುಬಸದ ಮತ್ತು ಅಬ್ಬುಲ್ ರಜಾಕ ಉಪಸ್ಥಿತರಿದ್ದರು.