ಕಿಲರ್ೊಸ್ಕರ್ ವಸುಂಧರಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಸಮಾರೋಪ

ಲೋಕದರ್ಶನ ವರದಿ

ಕೊಪ್ಪಳ 01:  ನವೆಂಬರ್ 27ರಿಂದ 30 ರವರೆಗೆ ಆಯೋಜಿಸಲಾಗಿದ್ದ ಕಿಲರ್ೊಸ್ಕರ್ ವಸುಂಧರಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ  ಸಮಾರೋಪ ಸಮಾರಂಭವು ದಿ. 30 ರಂದು ಕಿಲರ್ೊಸ್ಕರ್ ಕಾಖರ್ಾನೆಯಲ್ಲಿ  ಜರುಗಿತು. ಪೃಥ್ವಿಯನ್ನು ರಕ್ಷಿಸಿ, ಸಂರಕ್ಷಿಸಿ, ಉಳಿಸಿ ಮುಂದಿನ ಪೀಳಿಗೆಗಾ!  ಮಾಲಿನ್ಯ ತಡಿಯೋಣ, ನದಿಗಳನ್ನು ಉಳಿಸೋಣ !  ಎಂಬುದು ಈ ವರ್ಷದ ಮುಖ್ಯ ವಿಷಯವಾಗಿತ್ತು. ಈ ಕಾರ್ಯಕ್ರಮದಲ್ಲಿ ಡಾ. ಆರ್.ಎಸ್.ಹೆಚ್. ಶ್ರೀವತ್ಸ, ಉಪನಿದರ್ೆಶಕರು, ಕೃಷಿ ಸಚಿವಾಲಯ, ಭಾರತ ಸಕರ್ಾರ, ಬೆಂಗಳೂರು,  ಭಾರತೀತ ವೈದ್ಯಕೀಯ ಸಂಘ, ರಾಜ್ಯಘಟಕದ ರಾಜ್ಯಾಧ್ಯಕ್ಷರಾದ  ಡಾ. ಮಧುಸೂದನ ಕಾರಿಗನೂರು, ಪುಣೆಯ ವಸುಂಧರಾ ಕ್ಲಬ್ನ ಸುಪ್ರಿಯಾ ಚಿತ್ರವ್ರವರು ಮುಖ್ಯಅತಿಥಿಗಳಾಗಿ ಆಗಮಿಸಿದ್ದರು.  

ಸಾವಯವ ಕೃಷಿಯಲ್ಲಿ ಅಮೋಘ ಸಾಧನೆ ಮಾಡಿದ ರಾಯಚೂರು ಜಿಲ್ಲೆಯ ಕವಿತಾಳ ಗ್ರಾಮದ ಕವಿತಾ ಉಮಾಶಂಕರ ಮಿಶ್ರಾರವರಿಗೆ ವಸುಂಧರಾ ಸನ್ಮಾನ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.  ಹಾಗೆಯೇ ಬೆಂಗಳೂರಿನ ಮೊಟ್ಟ ಮೊದಲ ಬೈಸಿಕಲ್ ಮೇಯರ್ ಪುರಸ್ಕೃತರಾದ ಸತ್ಯ ಶಂಕರನ್ ಇವರಿಗೆ ವಸುಂಧರಾ ಮಿತ್ರ ಪ್ರಶಸ್ತಿವನ್ನು ಅವರ ಅನುಪಸ್ಥಿತಿಯಲ್ಲಿ ನೀಡಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಡಾ. ಆರ್.ಎಸ್.ಹೆಚ್. ಶ್ರೀವತ್ಸ ಇವರು ಮಾತನಾಡುತ್ತಾ, ಪರಿಸರ ಸಂರಕ್ಷಣೆಯ ಕುರಿತು ಕಿಲರ್ೊಸ್ಕರ್ ಸಂಸ್ಥೆಯು ವಸುಂಧರಾ ಕ್ಲಬ್ ಜೊತೆಗೂಡಿ ದೃಷ್ಯ ಮಾಧ್ಯಮದ ಮೂಲಕ ಮಾಡುತ್ತಿರುವ ಚಟುವಟಿಕೆಗಳು ತುಂಬಾ ಶ್ಲಾಘನೀಯವಾದುದು.   ನಗರದಲ್ಲಿ ಮಾತ್ರ ನಾಗರೀಕರಿಂದ ಪರಿಸರಕ್ಕೆ ಹೆಚ್ಚು ಮಾಲಿನ್ಯ ಆಗುತ್ತಿದೆ  ಇದಕ್ಕೆ ಮಿತಿಮೀರಿದ ಜನಸಂಖ್ಯೆಯೂ ಕಾರಣವಾಗಿರಬಹುದು ಎಂದು ಕೇಳಿ ಬರುತ್ತಿದೆ.  ಮುಂದಿನ ದಿನಗಳಲ್ಲಿ ಕುಡಿಯುವ ನೀರು ಸಹ ಕಲುಷಿತಗೊಂಡು ಶುದ್ಧ ಕುಡಿಯುವ ನೀರಿನ ಅಭಾವವನ್ನು ಎದುರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸಂದಿಸಿದಲ್ಲಿ ನಾವು ಏನನ್ನಾದರೂ ಸಾಧಿಸಬಹುದು ಎಂದು ಕರೆ ನೀಡಿದರು.

ಮತ್ತೊಬ್ಬ ಅತಿಥಿಯಾಗಿ  ಆಗಮಿಸಿದ್ದ   ಮಧುಸೂದನ್ ಕಾರಿಗನೂರು  ಇವರು ಮಾತನಾಡುತ್ತಾ, ನಾವೆಲ್ಲ ನಾಗರೀಕರಾಗಿ ಸೋಲುತ್ತಾ ಬಂದಿದ್ದೇವೆ,  ಬರೀ ಕರ್ತವ್ಯದಲ್ಲಿ ಮುಂದುವರೆಯುತ್ತಾ ಬಂದಿದ್ದೇವೆ. ಎಲ್ಲರಿಗೂ ಪರಿಸರ ಸಂರಕ್ಷಣೆಯ ಬಗ್ಗೆ ಅರಿವಿದೆ.  ಆದರೆ, ಗೊತ್ತಿದ್ದೂ, ಗೊತ್ತಿದ್ದೂ, ಅದನ್ನು ಹಾಳುಮಾಡುತ್ತಾ ಬಂದಿದ್ದೇವೆ.  ನಾವು ಆಹಾರ, ಗಾಳಿ, ನೀರು ಎಲ್ಲವನ್ನೂ ಹಾಳು ಮಾಡುತ್ತಿದ್ದೇವೆ.  ಇದಕ್ಕೆ ಜ್ವಲಂತ ಸಾಕ್ಷಿಯಾಗಿದೆ ನವದೆಹಲಿ.  ಇತ್ತೀಚ್ಚಿಗೆ ಶಬ್ಧ ಮಾಲಿನ್ಯವೂ ಈ ಪಟ್ಟಿಗೆ ಸೇರಿದೆ. ಯಾರೋ ಬಂದು ಮಾಡುತ್ತಾರೆಂದು ಕಾಯುವುದು ಬೇಡ, ಈ ಕಾರ್ಯ ನನ್ನಿಂದಾಗಲಿ ಎಂಬ ದೃಢ ಸಂಕಲ್ಪದಿಂದ ಮುನ್ನುಗ್ಗಿದಲ್ಲಿ ಎಲ್ಲಾ ವಿಷಯಗಳಿಗೆ ಪರಿಹಾರ ಏರ್ಪಡುತ್ತದೆ ಎಂಬ ವಾಸ್ತವಾಂಶವನ್ನು ತಿಳಿಸಿಕೊಟ್ಟರು.

ಕಾರ್ಯಕ್ರಮದಲ್ಲಿ ವಸುಂಧರಾ ಸನ್ಮಾನ್ ಪ್ರಶಸ್ತಿ ಸ್ವೀಕರಿಸಿದ ಕವಿತಾ ಉಮಾಶಂಕರ್ ಮಿಶ್ರಾ ಮಾತನಾಡುತ್ತಾ, ರೈತ ಎಂಬ ಎರಡು ಅಕ್ಷರದಿಂದ ನಾವು ನಮ್ಮ ದೈನಂದಿನ ಕಾರ್ಯಕ್ರಮವನ್ನು ಪ್ರಾರಂಭಿಸುತ್ತೇವೆ. ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಊಟ, ರಾತ್ರಿ ಹಣ್ಣು-ಹಂಪಲು.  ಆದರೆ ರೈತನ ಪರಿಸ್ಥಿತಿ ಇಂದಿಗೂ ಶೋಚನೀಯವಾಗಿದೆ.  ರೈತ ಮತ್ತು ಆತನ ಕುಟುಂಬಕ್ಕೆ ಸಮಾಜದಲ್ಲಿ ಸಿಗುವ ಸ್ಥಾನಮಾನ ಇನ್ನೂ ಬದಲಾಗಿಲ್ಲ. ನಾನು ಕಂಪ್ಯೂಟರ್ ಸೈನ್ಸ್ನಲ್ಲಿ ಪದವಿ ಪಡೆದರೂ ಪರಿಸ್ಥಿತಿಯ ಒತ್ತಡದಿಂದ ಕೃಷಿಗೆ ಬರಬೇಕಾಯಿತು.  ಹಿಂತಿರುಗಿ ನೋಡಲಿಲ್ಲ. ರೈತರು ಪ್ರತಿ ಸೀಜನ್ನಲ್ಲಿಯೂ ಹಣ ಗಳಿಸಬೇಕೆಂದರೆ, ರುತುಮಾನಗಳಿಗೆ ತಕ್ಕಂತೆ ಹಣ್ಣು- ಹೂಗಳನ್ನು ಬೆಳೆಯಬೇಕು. ಒಂದು ಎಕರೆಯಲ್ಲಿ  ಶ್ರೀಗಂಧವನ್ನು ಬೆಳೆದರೆ ಸುಮಾರು 12-15 ವರ್ಷಗಳಲ್ಲಿ ಅದರ ಬೆಲೆ ಸುಮಾರು 6 ಕೋಟಿಯಾಗಿರುತ್ತದೆ. ಇಳಿ ವಯಸ್ಸಿನಲ್ಲಿ ಇದು ಕೈ ಹಿಡಿಯುತ್ತದೆ.  ಹೀಗಾದಲ್ಲಿ ರೈತ ಸಾಲ ಸಾಲ ತೆಗೆದುಕೊಂಡು ಕೃಷಿಯಲ್ಲಿ ವೈಫಲ್ಯಗೊಂಡು ಆತ್ಮಹತ್ಯೆಗೆ ದಾರಿ ಮಾಡಿಕೊಡದೇ, ಸ್ವಾವಲಂಬಿ ಬದುಕನ್ನು ಸಾಧಿಲು ಹಾದಿಯಾಗುತ್ತದೆ.  ಸರಕಾರದಿಂದ ಸಾಲ ತೆಗೆದುಕೊಳ್ಳುವ ಬದಲು ಸರಕಾರಕ್ಕೆ ಸಾಲ ಕೊಡುವ ಹಾಗೆ ಆಗುತ್ತಾನೆ.  ಕಿಲರ್ೊಸ್ಕರ್ ಕಾಖರ್ಾನೆಯು ಪರಿಸರ ಸಂರಕ್ಷಣೆಯ ಕುರಿತು ಮಾಡುತ್ತಿರುವ ಜಾಗೃತಿ ಕೆಲಸವು ಅತ್ಯುತ್ತಮವಾದುದು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಿಲರ್ೊಸ್ಕರ್ ಕಾಖರ್ಾನೆಯ ವ್ಯವಸ್ಥಾಪಕ ನಿದರ್ೆಶಕರಾದ ಆರ್.ವಿ.ಗುಮಾಸ್ತೆಯವರು ಮಾತನಾಡುತ್ತಾ, ಸುಮಾರು 30-40 ವರ್ಷದ ಕೆಳಗೆ ಕೃಷಿಯು ಇಷ್ಟು ದುಸ್ಥಿತಿಯಲ್ಲಿ ಇರಲಿಲ್ಲ.   ಏತ ನೀರಾವರಿಯ ಮೂಲಕ ನೀರನ್ನು ಮಿತವ್ಯಯವಾಗಿ ಬಳಸಿ ಕೃಷಿ ಜರುಗುತ್ತಿತ್ತು.  ಆದರೆ, ಮಾನವನ ಅತಿಯಾದ ದುರಾಸೆಯಿಂದಾಗಿ, ಆ ಭಾವಿಗಳಲ್ಲಿಯೇ ಬೋರ್ ಹೊಡೆದು ಹೆಚ್ಚು ನೀರನ್ನು ಬಳಸಿ, ಹಾಳುಮಾಡಿ ಈಗ ಭಾವಿಗಳು, ಕೊಳವೆ ಭಾವಿಗಳು ಬತ್ತಿಹೋಗುವ ಹಾಗೆ ಮಾಡಿರುತ್ತಾನೆ.  ಮೊದಲು 10 ಅಡಿ ಅಳ ತೊಡಿದರೆ 7 ಅಡಿ ನೀರು ಸಿಗುತ್ತಿತ್ತು.  ಇಂದು 900-1000 ಅಡಿ ತೋಡಿದರೂ ನೀರು ಸಿಗುತ್ತಿಲ್ಲ.   ಜನಸಂಖ್ಯಾ ಹೆಚ್ಚಳ, ಅತಿಯಾದ ವಿದ್ಯುಚ್ಚಕ್ತಿಯ ಬಳಕೆ  ಮಾನವನ ದುರಾಸೆಯಿಂದ ಇಂದು ಪರಿಸರ ಹಾಳಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಜನರು ವಿದ್ಯಾವಂತರಾಗಬೇಕು, ಜೀವನಶೈಲಿ ಬದಲಾಗಬೇಕು. ಈ ನಿಟ್ಟಿನಲ್ಲಿ  ಕಾಖರ್ಾನೆಯು ವಾಷ್, ವಸುಂಧರಾ ಚಲನಚಿತ್ರೋತ್ಸವ, ಗ್ರಾಮೀಣಾಭಿವೃದ್ಧಿ ಟ್ರಸ್ಟ್ನಿಂದ ಸಾಕಷ್ಟು ಕೆಲಸಗಳನ್ನು  ಹಮ್ಮಿಕೊಂಡು ಬಂದಿದೆ. ಇದಕ್ಕೆ ಎಲ್ಲರೂ ಕೈಜೋಡಿಸಿ ಮುನ್ನುಗಿದಲ್ಲಿ ಮಾತ್ರ  ಅಶಯವನ್ನು ಈಡೇರಿಸಬಹುದು ಎಂದು ಕರೆ ನೀಡಿದರು.

ಕಾಖರ್ಾನೆಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರಾದ ಪಿ.ನಾರಾಯಣ ಇವರು ವಂದನಾರ್ಪಣೆ ಮಾಡುತ್ತಾ,   ಪರಿಸರ ಸಂರಕ್ಷಣೆ ಮಾಡುವ ಈ ಅಭಿಯಾನವು ಇನ್ನೂ ಬೃಹತ್ ಪ್ರಮಾಣದಲ್ಲಿ ಆಗಬೇಕು ಎಂದು ತಿಳಿಸಿದರು. 

ಕಾರ್ಯಕ್ರಮದ ಮೊದಲಿಗೆ ಕಿಲರ್ೊಸ್ಕರ್ ಲೇಡೀಸ್ ಕ್ಲಬ್ನ ಮಹಿಳೆಯರು ಹಾಡಿದ ಪ್ರಾರ್ಥನಾ ಗೀತೆ ಶುಶ್ರಾವ್ಯವಾಗಿದ್ದು, ಎಲ್ಲರ ಮನಸೆಳೆಯುವಂತಿತ್ತು.   ಹೊಸಪೇಟೆಯ ಡ್ರೀಮ್ಸ್  ಈವೆಂಟ್ ಮ್ಯಾನೇಜ್ಮೆಂಟ್ನ ಸುನೀಲ್ ತಂಡದವರು ಮೂಕಾಭಿನಯದ ಮೂಲಕ  ಇಂದಿನ ಸ್ಥಿತಿಗತಿ, ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸುವ ನೃತ್ಯ-ರೂಪಕ ಎಲ್ಲರ ಮನಸೆಳೆದಿತ್ತು.  ಹಾಗೆಯೇ ಹೊಸಪೇಟೆಯ ಪ್ರೌಢದೇವರಾಯ ಇಂಜಿನೀಯರಿಂಗ್ ಪದವಿ ಕಾಲೇಜಿನ ವಿದ್ಯಾಥರ್ಿ ತಂಡದವರು ಮಾಡಿದ ನೃತ್ಯರೂಪಕವು ಮನಮೋಹಕವಾಗಿತ್ತು ಹಾಗೂ ಎಲ್ಲರ ಪ್ರಶಂಸೆಗೆ ಒಳಗಾಯಿತು. ಈ ಕಾರ್ಯಕ್ರದಲ್ಲಿ ಕಾಖರ್ಾನೆಯ ಕಾಮರ್ಿಕರು, ಗುತ್ತಿಗೆದಾರರು, ಪರಿಸರ ಪ್ರೇಮಿಗಳು, ಪ್ರಾಯೋಜಕರು ಹಾಗೂ ಕಿಲರ್ೊಸ್ಕರ್ ಲೇಡೀಸ್ ಕ್ಲಬ್ನ ಸದಸ್ಯೆರುಗಳು ಬಾಗವಹಿಸಿದ್ದರು ಎಂದು ಕಿಲರ್ೊಸ್ಕರ್ ವಸುಂಧರಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಮನ್ವಯ ಸಮಿತಿ ಉಪಾಧ್ಯಕ್ಷ ಹಾಗೂ ಮಾನವ ಸಂಪನ್ಮೂಲ ಮತ್ತು ಆಡಳಿತ ಹಿರಿಯ ಉಪಾಧ್ಯಕ್ಷ ಪಿ. ನಾರಾಯಣ ರವರು ಪ್ರಕಟಣೆಯಲ್ಲಿ ತಿಳಿಸಿ ಸಹಕರಿಸಿದ ಪ್ರತಿಯೋಬ್ಬರಿಗೆ ಅಭಿನಂದನೆ ಸಲ್ಲಿಸಿದ್ದಾರೆ.